ದಾಂಡೇಲಿ : ಯುವಕನೋರ್ವ ಬ್ಲೇಡ್‌ನಿಂದ ತನ್ನ ಕೈ ಅನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ ಘಟನೆ
ನಡೆದಿದೆ. ನಗರದ ಸಮೀಪದ ಕೋಗಿಲಬನ ಗ್ರಾಮದ ನಿವಾಸಿ ಗುರು ಲೋಕರೆ ಎಂಬಾತನೇ ಆತ್ಮಹತ್ಯೆಗೆ ವಿಫಲ ಯತ್ನ ನಡೆಸಿದ ಯುವಕನಾಗಿದ್ದಾನೆ.

RELATED ARTICLES  ಬ್ಯಾಂಕ್ ಗ್ರಾಹಕರೇ ಎಚ್ಚರ...!!! ಪ್ಲೇ ಸ್ಟೋರ್ ನಲ್ಲಿ ಇರುವ ಪ್ರಮುಖ ಬ್ಯಾಂಕ್ ಗಳ ಆಪ್ ಗಳೇ ನಕಲಿಯಂತೆ..!!!

ಕಳೆದ ಕೆಲ‌ದಿನದ ಹಿಂದೆ ನಡೆದ ಯಾವುದೋ ಗಲಾಟೆಗೆ ಸಂಬಂಧಿಸಿದಂತೆ ಈತನ ಮೇಲೆಯೂ ಪ್ರಕರಣ ದಾಖಲಾಗಿದೆ ಎನ್ನಲಾಗಿದೆ. ಹೀಗಾಗಿ ಈ ವಿಚಾರಕ್ಕೆ ಮನನೊಂದು ಆತ್ಮಹತ್ಯೆಗೆ ಯತ್ನಿಸಿದ್ದು ಎನ್ನಲಾಗಿದೆ. ಘಟನೆಯನ್ನು ಸಾರ್ವಜನಿಕರು
ಕಂಡು ಕೂಡಲೇ ಈತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ನಗರ ಠಾಣೆಯ ಪೊಲೀಸರು ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ, ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.

RELATED ARTICLES  ಭೀಷ್ಮರ ನಿಜವಾದ ಹೆಸರು ಗೊತ್ತಾ? ಭೀಷ್ಮ ಎಂಬ ಹೆಸರು ಬಂದಿದ್ದು ಹೇಗೆ?