ಬೆಂಗಳೂರು: ದಿನಾಂಕ 06-11-2022ರಂದು ನಡೆದಂತ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ -2022ರ ಕೀ ಉತ್ತರವನ್ನು ಸಾರ್ವಜನಿಕ ಶಿಕ್ಷಣ ಇಲಾಖೆಯು ಪ್ರಕಟಿಸಿದೆ. ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದ್ದು, ದಿನಾಂಕ 06-11-2022ರಂದು ನಡೆ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2022ರ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ ಉತ್ತರಗಳನ್ನು ಇಂದು ಪ್ರಕಟಿಸಲಾಗಿದೆ ಎಂದು ತಿಳಿಸಿದೆ.

ಟಿಇಟಿ ಪರೀಕ್ಷೆಯ ಸರಿ ಉತ್ತರಗಳನ್ನು ಇಲಾಖೆಯ ವೆಬ್ ಸೈಟ್ www.schooleducation.kar.nic.in ಜಾಲತಾಣದಲ್ಲಿ ವೀಕ್ಷಿಸಬಹುದಾಗಿದೆ. ಈ ಸಂಬಂಧದ ಆಕ್ಷೇಪಣೆಗಳನ್ನು ಅಭ್ಯರ್ಥಿಗಳು ದಿನಾಂಕ 10-11-2022 ರಿಂದ 17-11-2022ರ ಒಳಗಾಗಿ ಸಲ್ಲಿಸುವಂತೆ ತಿಳಿಸಿದೆ.

ಪ್ರಮುಖ ಮಾಹಿತಿ ಇಲ್ಲಿದೆ.

RELATED ARTICLES  ಶಿಕ್ಷಕರು/ಉಪನ್ಯಾಸಕರು ಬೇಕಾಗಿದ್ದಾರೆ.

ದಿನಾಂಕ : 06-11-2022 ರಂದು ನಡೆದ ಕರ್ನಾಟಕ ಶಿಕ್ಷಕರ ಅರ್ಹತಾ ಪರೀಕ್ಷೆ-2022ರ ಪರೀಕ್ಷೆಯ ಪತ್ರಿಕೆ-1 ಮತ್ತು ಪತ್ರಿಕೆ-2ರ ಕೀ-ಉತ್ತರಗಳನ್ನು ದಿನಾಂಕ:09-11-2022 ರಂದು ಇಲಾಖಾ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ. ಪ್ರಕಟಿತ ಕೀ-ಉತ್ತರಗಳಿಗೆ ಆಕ್ಷೇಪಣೆಗಳನ್ನು ಸಲ್ಲಿಸುವ ಬಗ್ಗೆ ಅಭ್ಯರ್ಥಿಗಳು ಈ ಕೆಳಕಂಡ ಸೂಚನೆಗಳನ್ನು ಪಾಲಿಸುವುದು.

  1. ಪತ್ರಿಕೆ-1 ಮತ್ತು ಪತ್ರಿಕೆ-2ಕ್ಕೆ ಸಂಬಂಧಿಸಿದಂತೆ ಪ್ರಕಟಿತ ಕೀ-ಉತ್ತರಗಳಿಗಕ್ಷೇಪಣೆ ಸಲ್ಲಿಸಲು ದಿನಾಂಕ:10-11-2022 ರಿಂದ 17-11-2022ರ ಸಂಜೆ 5.30 ರವರೆಗೆ ಅವಕಾಶ ಕಲ್ಪಿಸಿದೆ.
  2. ಅಭ್ಯರ್ಥಿಗಳು ತಮ್ಮ ಉತ್ತರಗಳನ್ನು ಪ್ರಕಟಿಸಿದ ಕೀ ಉತ್ತರಗಳೊಂದಿಗೆ ಪರಿಶೀಲಿಸಬಹುದು.
  3. ಕೀ-ಉತ್ತರಿಗಳಿಗೆ ಆಕ್ಷೇಪಣೆಗಳನ್ನು ಕೇವಲ ಆನ್‌ಲೈನ್ ಮೂಲಕ ಸಲ್ಲಿಸಬಹುದು.
  4. ಆನ್‌ಲೈನ್ ಮೂಲಕ ಹೊರತುಪಡಿಸಿ ಇತರೆ ಯಾವುದೇ ವಿಧಾನದಲ್ಲಿ ಆಕ್ಷೇಪಣೆ ಸಲ್ಲಿಸಲು ಅವಕಾಶವಿರುವುದಿಲ್ಲ.
  5. ಅಭ್ಯರ್ಥಿಗಳು ತಮ್ಮ ಅರ್ಜಿ/ನೋಂದಣಿ ಸಂಖ್ಯೆ ಮತ್ತು ಜನ್ಮದಿನಾಂಕವನ್ನು ನಮೂದಿಸುವ ಮೂಲಕ https://schooleducation.kar.nic.in ನಲ್ಲಿ ನೀಡಿರುವ ಲಿಂಕ್ ಬಳಸಿ ಆಕ್ಷೇಪಣೆ ಸಲ್ಲಿಸಬಹುದು.
  6. ಅಭ್ಯರ್ಥಿಯು ಸಲ್ಲಿಸುವ ಆಕ್ಷೇಪಣೆಗಳೊಂದಿಗೆ ಅಧಿಕೃತ ಆಧಾರ ದಾಖಲೆಗಳನ್ನು ಸಲ್ಲಿಸುವುದು.
  7. ಸೂಕ್ತ ಆಧಾರ ದಾಖಲೆಗಳಿಲ್ಲದ ಆಕ್ಷೇಪಣೆಗಳನ್ನು ಪರಿಗಣಿಸುವುದಿಲ್ಲ.
  8. ಆಧಾರ ದಾಖಲೆಗಳು 500KB ಗಿಂತ ಹೆಚ್ಚಿರಬಾರದು.
RELATED ARTICLES  ದಿ ನ್ಯಾಷನಲ್ ಸ್ಮಾಲ್ ಇಂಡಸ್ಟ್ರಿಸ್ ಕಾರ್ಪೋರೇಷನ್ ಲಿಮಿಟೆಡ್ (ಎನ್ಎಸ್ಐಸಿ) ವಿಶೇಷ ನೇಮಕಾತಿ.

೨. ವೈಯಕ್ತಿಕ ಭಾವಚಿತ್ರಗಳಂತಹ ಅಸಂಬದ್ಧ ದಾಖಲೆಗಳನ್ನು ಆದಾರ ದಾಖಲೆಗಳಾಗಿ ಅಪ್‌ಲೋಡ್ ಮಾಡಬಾರದು.

  1. ಜರ್ನಲ್‌ಗಳು, ಮ್ಯಾಗಜೀನ್‌ಗಳು, ಸ್ವತಂತ್ರ ಪ್ರಕಾಶಕರುಗಳ ಪುಸ್ತಕಗಳು, ಗೈಡ್‌ಗಳು, ಇಂಟರ್‌ನೆಟ್ ಮೂಲಗಳು (ವಿಕಿಪೀಡಿಯಾ, ಗೂಗಲ್ ಮಾಹಿತಿ ಅಥವಾ ಅಂತರ್ಜಾಲದಿಂದ ಡೌನ್‌ಲೋಡ್ ಮಾಡಿದ ಯಾವುದೇ ಮೂಲಗಳು) ವಿಡಿಯೋಗಳು, ದಿನಪತ್ರಿಕೆಯಲ್ಲಿನ ಲೇಖನಗಳನ್ನು ಆಧಾರ ದಾಖಲೆಗಳನ್ನಾಗಿ ಪರಿಗಣಿಸುವುದಿಲ್ಲ.