ಕುಮಟಾ:ಮಹಾತ್ಮಾಗಾಂಧಿ ಹಾಗೂ ಲಾಲ್ ಬಹಾದ್ದೂರ್ ಶಾಸ್ತ್ರೀ ಜಯಂತಿ ನಿಮಿತ್ತ ಶಾಲೆಯ ವತಿಯಿಂದಆಯೋಜಿಸಲಾದ ಸ್ವಚ್ಛತಾಕಾರ್ಯಕ್ರಮದಲ್ಲಿಇಲ್ಲಿನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು, ಶಿಕ್ಷಕರ ಮಾರ್ಗದರ್ಶನದಲ್ಲಿ ಶ್ರಮದಾನಗೈದರು. ಕುಮಟಾದ ಹೆಡ್ ಬಂದರ್ ಹಾಗೂ ನೆಲ್ಲೇಕೇರಿ ಹಳೇ ಬಸ್ ನಿಲ್ದಾಣಕ್ಕೆ ಶಿಕ್ಷಕರೊಂದಿಗೆ ತೆರಳಿದ ವಿದ್ಯಾರ್ಥಿಗಳು ಸ್ವಯಂಪ್ರೇರಿತರಾಗಿ ಪ್ರಯಾಣಿಕರತಂಗುದಾಣದ ಸುತ್ತಲೂಅಲ್ಲಲ್ಲಿ ಹರಡಿ ಬಿದ್ದು ನಾರುತ್ತಿದ್ದಕಸದ ರಾಶಿಯನ್ನು ಸ್ವಚ್ಛಗೊಳಿಸಿ, ಬಣ್ಣ ಬಳಿದು ಹಸನಾಗಿಸಿದರು.
ಅದೇರೀತಿ, ಪ್ರವಾಸಿ ತಾಣವಾದ ಹೆಡ್ ಬಂದರಿನ ವಿವಿದೆಡೆಚದುರಿಬಿದ್ದ ಪ್ಲಾಸ್ಟಿಕ್ ಬಾಟಲ್, ಚೀಲ, ಕಸ-ಕಡ್ಡಿಯನ್ನು ವಿಲೇವಾರಿ ಮಾಡಿ ಸ್ವಚ್ಛವಾಗಿಸಿದರು. ಉಳಿದ ವಿದ್ಯಾರ್ಥಿಗಳು ಶಾಲೆಯ ಸುತ್ತ-ಮುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಿ, ಕಸಮುಕ್ತಗೊಳಿಸಿದರು. ಶಿಕ್ಷಕರಾದ ಭಾಸ್ಕರ ಹೆಗಡೆ ಈ ಸಂದರ್ಭದಲ್ಲಿ ಸ್ವಚ್ಛತೆ ಹಾಗೂ ಅದರ ಬದ್ಧತೆಯಕುರಿತು ಮಾತನಾಡಿ ಸಲಹೆಯನ್ನು ನೀಡಿದರು.
ಶಿಕ್ಷಕರುಗಳಾದ ಚಿದಾನಂದ ಭಂಡಾರಿ, ವಿನಾಯಕ ಹೆಗಡೆಕರ್, ದೈಹಿಕ ಶಿಕ್ಷಕರುಗಳಾದ ಜಯರಾಜ್, ನಾಗರಾಜ್ ಮತ್ತು ಶಾಲಾ ವಾಹನಗಳ ಚಾಲಕ-ನಿರ್ವಾಹಕರು ಈ ಕಾರ್ಯಕ್ಕೆ ಸಾಥ್ ನೀಡಿದರು. ವಿದ್ಯಾರ್ಥಿಗಳಿಂದ ಭಾಷಣ, ದೇಶಭಕ್ತಿಗೀತೆ, ಕವನ ವಾಚನ ಕಾರ್ಯಕ್ರಮ ನಡೆಯಿತು. ಸಂಸ್ಥೆಯ ಮುಖ್ಯಸ್ಥರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕರು ಉಪಸ್ಥಿತರಿದ್ದರು. ಶಿಕ್ಷಕ ಪ್ರಕಾಶಗಾವಡಿ ನಿರೂಪಿಸಿದರು.