ಹೊನ್ನಾವರ: ತಾಲೂಕಿನ ಅರೇಅಂಗಡಿಯ ತೊಟ್ಟಿಲಗುಂಡಿಯಲ್ಲಿ ಆಸ್ತಿ ವಿಷಯಕ್ಕೆ ನಡೆದ ಕೊಲೆ ಪ್ರಕರಣದ ಪ್ರಮುಖ ಮೂವರು ಆರೋಪಿಗಳು ನ್ಯಾಯಲಯದ ಮುಂದೆ ಶರಣಾಗಿದ್ದಾರೆ. ನ.5ರಂದು ಆಸ್ತಿ ವಿಷಯಕ್ಕೆ ಸಹೋದರರ ನಡುವೆ ನಡೆದ ಕಲಹದಲ್ಲಿ ಹನುಮಂತ ನಾಯ್ಕ ಮೃತಪಟ್ಟು, ಮಾರುತಿ ನಾಯ್ಕ ತೀವೃವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿ ಪತ್ತೆಗಾಗಿ ಬಲೆ ಬೀಸಿದ್ದರು.

RELATED ARTICLES  ಎರಡು ದಿನಗಳ ಕೊಂಕಣಿ ಗೀತ ಗಾಯನ ತರಬೇತಿ ಶಿಬಿರಕ್ಕೆ ಚಾಲನೆ.

ಘಟನೆ ನಡೆದ ಮಾರನೇ ದಿನವೇ ಘಟನೆಗೆ ಸಂಬಂಧಿಸಿದಂತೆ ನಾಲ್ಕನೇ ಆರೋಪಿ ಹೊಸಾಕುಳಿಯ ಮಂಜುನಾಥನನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಪ್ರಮುಖ ಆರೋಪಿಗಳ ಪತ್ತೆಗಾಗಿ ಅರೇಅಂಗಡಿಯ ಸುತ್ತಮುತ್ತ ಪ್ರದೇಶ ಮತ್ತು ಚಿಕ್ಕನಕೋಡ ಗ್ರಾಮದ ವಿವಿಧೆಡೆ ಶೋಧ ಕಾರ್ಯ ನಡೆಸಿದ್ದರು.

ಬುಧವಾರ ಮುಂಜಾನೆ ಆರೋಪಿಗಳಾದ ವಿನಾಯಕ ನಾಯ್ಕ, ಚಿದಂಬರ ನಾಯ್ಕ ಹಾಗೂ ಮಂಜುನಾಥ ನ್ಯಾಯಾಧೀಶರ ಮುಂದೆ ಶರಣಾಗಿದ್ದಾರೆ.

RELATED ARTICLES  ಉತ್ತರಕನ್ನಡದಲ್ಲಿ ಇಂದು 833 ಜನರಿಗೆ ಕೊರೋನಾ ಪಾಸಿಟಿವ್ : ಮೂವರ ಸಾವು.