ಕುಮಟಾ: ಮಡಗಾವ್‌ದ ಮನೋಹರ ಪರಿಕ್ಕರ ಒಳಾಂಗಡಣ ಕ್ರೀಡಾಂಗಣದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಪಟ್ಟಣದ ಹಂದೆ ಕರಾಟೆ ಸ್ಪೂರ್ಟ್ಸ್ ಸೆಂಟರ್‌ನ ವಿದ್ಯಾರ್ಥಿಗಳು ವಿವಿಧ ಸ್ಥಾನಗಳನ್ನು ಪಡೆಯುವುದರ ಮೂಲಕ ಸಾಧನೆ ಮಾಡಿದ್ದಾರೆ. ಬಾಲಕಿಯರ ವಿಭಾಗದ ಬ್ರೌನ್ ಬೆಲ್ಟ್‌ನ ಕತಾದಲ್ಲಿ ಕೀರ್ತಿ ಭಟ್ಟ ಪ್ರಥಮ, ಅಭಿಜ್ಞಾ ಭಟ್ಟ ತೃತೀಯ,
ಬ್ರೌನ್ ಬೆಲ್ಟ್‌ನ ಸ್ಪೈರಿಂಗ್‌ನಲ್ಲಿ ಕೀರ್ತಿ ಭಟ್ಟ ಹಾಗೂ ಅಭಿಜ್ಞಾ ಭಟ್ಟ ತೃತೀಯ ಸ್ಥಾನ ಪಡೆದಿದ್ದಾರೆ.
ಬಾಲಕರ ವಿಭಾಗದ ಬ್ರೌನ್ ಬೆಲ್ಟ್‌ನ ಸ್ಪೈರಿಂಗ್‌ನಲ್ಲಿ ಶಿವಪ್ರಸಾದ ಹೆಗಡೆ, ರಧಿಕ್ ನಾಯ್ಕ, ಸಮರ್ಥ ಉಣಕಲಕರ ದ್ವೀತಿಯ, ಬ್ರೌನ್ ಬೆಲ್ಟ್‌ನ ಕತದಲ್ಲಿ ಸಮರ್ಥ ಉಣಕಲಕರ, ಶಿವಪ್ರಸಾದ ಹೆಗಡೆ ತೃತೀಯ, ರಧಿಕ ನಾಯ್ಕ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಬಾಲಕರ ಕಿರಿಯರ ವಿಭಾಗದಲ್ಲಿ ಬ್ರೌನ್ ಬೆಲ್ಟ್‌ನ ಸ್ಪೈರಿಂಗ್‌ನಲ್ಲಿ ಶುಭಂ, ಯಶ್ ಬಂಗಾರದ ಪದಕ, ವಿಜಯ, ಕಿರಣ ಬೆಳ್ಳಿ ಪದಕ ಪಡೆದಿದ್ದಾರೆ. ಬ್ರೌನ್ ಬೆಲ್ಟ್‌ನ ಕತಾದಲ್ಲಿ ಶುಭಂ ತೃತೀಯ ಸ್ಥಾನ, ಬಾಲಕಿಯರ ಕಿರಿಯರ ವಿಭಾಗದಲ್ಲಿ ಬ್ರೌನ್ ಬೆಲ್ಟ್‌ನ ಸ್ಪೈರಿಂಗ್‌ನಲ್ಲಿ ಅಂಕಿತಾ ಮತ್ತು ಅಕ್ಷತಾ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಕರಾಟೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಎಸ್.ಪಿ.ಹಂದೆ ಮಾರ್ಗದರ್ಶನ ನೀಡಿದ್ದರು.
….ಪ್ರಮುಖ ಸುದ್ದಿಗಳನ್ನು ಓದಲು ಸುದ್ದಿಗಳ ಮೇಲೆ ಕ್ಲಿಕ್ ಮಾಡಿ.….