ದಿನಾಂಕ 12/11/2022 ಶನಿವಾರರಂದು ರೊಟರಿ ಕ್ಲಬ್ ಹೊನ್ನಾವರ, ಯುವಾ ಬ್ರಿಗೇಡ್ ಹೊನ್ನಾವರ ಮತ್ತು ಉತ್ತರಕನ್ನಡ ಜಿಲ್ಲಾ ಪ್ರೌಡಶಾಲಾ ಮುಖ್ಯೋಪಾಧ್ಯಾಪಕರ ಸಂಘ ಕಾರವಾರ ಇವರ ಆಶ್ರಯದಲ್ಲಿ “ಪ್ರೇರಣಾ ಪ್ರವಾಹ-2022″ಎಂಬ ಶಿರ್ಷೀಕೆಯಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯ ಐದು ತಾಲ್ಲೂಕಿನ ಶಿಕ್ಷಕರಿಗಾಗಿ ಒಂದು ದಿನದ ಕಾರ್ಯಾಗಾರವನ್ನು ಹೊನ್ನಾವರದ ಮೂಡಗಣಪತಿ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ.
ಇದೊಂದು ಅಪೂರ್ವ ಅವಕಾಶದ ಕಾರ್ಯಕ್ರಮವಾಗಿದ್ದು ಮಾನ್ಯ ಜಿಲ್ಲಾಧಿಕಾರಿಗಳು,ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳು, ಉಪನಿರ್ದೇಶಕರು,ಮತ್ತು ಪ್ರಾಚಾರ್ಯರು(DIET) ಉಪಸ್ಥಿತರಿದ್ದು ಪೂರ್ವಾಹ್ನ 9.45 ಕ್ಕೆ ಸರಿಯಾಗಿ ಉದ್ಘಾಟನೆಗೊಳ್ಳಲಿದೆ.
ಈ ಕೆಳಗಿನ ವೇಳಾಪಟ್ಟಿಯಂತೆ
ಉಪನ್ಯಾಸ ಕಾರ್ಯಕ್ರಮ ನಡೆಯಲಿದೆ.
●ರಾಷ್ಟ್ರೀಯ ಶಿಕ್ಷಣ ನೀತಿ-2020:-ರೋಹಿತ್ ಚಕ್ರತೀರ್ಥ
●ರಾಷ್ಟ್ರೀಯತೆ:-ಚಕ್ರವರ್ತಿ ಸೂಲಿಬೆಲೆ
●ಸೃಜನಾತ್ಮಕ ಕಲಿಕೆ:-ಸುರೇಶ ಕುಲಕರ್ಣಿ
ಈ ಕಾರ್ಯಕ್ರಮದಲ್ಲಿ ಪ್ರತಿ ತಾಲ್ಲೂಕಿನ ಐದು ಉತ್ತಮ ಶಿಕ್ಷಕರಿಗೆ “Nation builder award “ಮತ್ತು ‘ಗುರು ಗೌರವ ನಮನ ‘ದಿಂದ ಪುರಸ್ಕರಿಸಲಾಗುವುದು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಶ್ರೀ ಪ್ರಭುಲಿಂಗ ಕವಳಕಟ್ಟಿ, ಐ.ಎ.ಎಸ್ ಜಿಲ್ಲಾಧಿಕಾರಿಗಳು ಉ.ಕ
ಅತಿಥಿಗಳಾಗಿ
ಶ್ರೀಮತಿ ಪ್ರಿಯಾಂಗ ಎಂ. ಐ.ಎ.ಎಸ್ ,ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯತ, ಉ.ಕ
ಶ್ರೀ ಈಶ್ವರ ನಾಯ್ಕ,ಉಪನಿರ್ದೇಶಕರು, ಶ್ರೀ ಎನ್.ಜಿ.ನಾಯಕ, ಪ್ರಾಚಾರ್ಯರು,ಡಯಟ್,ಕುಮಟಾ
ರೊ. ವೆಂಕಟೇಶ ದೆಶಪಾಂಡೆ ಡಿಸ್ಟ್ರಿಕ್ಟ ಗವರ್ನರ್ 2022-2023 ಆರ್.ಐ ಡಿಸ್ಟ್ರಿಕ್ಟ 3170,
ರೊ. ಡಾ. ರವಿಂದ್ರನಾಥ ವಿ. ಹುಂಜೆ ,ಜಿಲ್ಲಾ ಸಾಕ್ಷರತಾ ಸಮಿತಿ ಅಧ್ಯಕ್ಷರು, ಆರ್.ಐ. 3170
ಶ್ರೀ ಚಕ್ರವರ್ತಿ ಸೂಲಿಬೆಲೆ ,ವಾಗ್ಮಿ, ಮಾರ್ಗದರ್ಶಕರು, ಯುವಾ ಬಿಗೇಡ್, ಶ್ರೀ ಜಿ.ಎಸ್. ನಾಯ್ಕ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಹೊನ್ನಾವರ ಉಪಸ್ಥಿತರಿರುತ್ತಾರೆ.
ಸಂಜೆ 06:30ರಿಂದ ಶ್ರೀ ಚಕ್ರವರ್ತಿ ಸೂಲಿಬೆಲೆಯವರಿಂದ “ಸಮರ್ಥ ಭಾರತ ಸಧೃಡ ತರುಣ” ಎಂಬ ವಿಷಯದಲ್ಲಿ ಚಿಂತನ ಮಂಥನ ಕಾರ್ಯಕ್ರಮವು ಜರುಗಲಿದೆ.
ನಾಡಿನ ಖ್ಯಾತ ಉಪನ್ಯಾಸಕರಿಂದ ಮೌಲ್ಯಯುತ ಉಪನ್ಯಾಸ ಕಾರ್ಯಕ್ರಮ ಇರುವುದರಿಂದ, ಶಿಕ್ಷಕರು ಈ ಕಾರ್ಯಾಗಾರದ ಸದುಪಯೋಗ ಪಡೆದುಕೊಳ್ಳುವಂತೆ ಮತ್ತು ಸಂಜೆ ಸಾರ್ವಜನಿಕರಿಗಾಗಿ ನಡೆಯುವ ಶ್ರೀ ಚಕ್ರವರ್ತಿ ಸೂಲಿಬೆಲೆಯವರ ಉಪನ್ಯಾಸ ಕಾರ್ಯಕ್ರಮಕ್ಕೂ ಹೆಚ್ಚಿನ ಜನರು ಬಂದು ಸಹಕರಿಸಬೇಕಾಗಿ ರೋಟರಿ ಕ್ಲಬ್ ಅಧ್ಯಕ್ಷರಾದ ಶ್ರೀ ಮಹೇಶ ಕಲ್ಯಾಣಪುರ, ಯುವ ಬ್ರಿಗೇಡ್ ಸಂಚಾಲಕರಾದ ಶ್ರೀ ಸತೀಶ ಪಟಗಾರ ಮತ್ತು ಉತ್ತರ ಕನ್ನಡ ಜಿಲ್ಲಾ ಪ್ರೌಢಶಾಲಾ ಮುಖ್ಯಾಧ್ಯಾಪಕರ ಸಂಘದ ಅಧ್ಯಕ್ಷರಾದ ಶ್ರೀ ಎಲ್.ಎಮ್.ಹೆಗಡೆಯವರು ಜಂಟಿ ಹೇಳಿಕೆಯಲ್ಲಿ ತಿಳಿಸಿರುತ್ತಾರೆ.
ವರದಿ:- ಮಹೇಶ ಕಲ್ಯಾಣಪುರ