ಮುರುಘಾ ಮಠದಲ್ಲಿ ಫೋಟೋ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್.ಕೆ ಬಸವರಾಜನ್ ಅವರನ್ನು ಪೊಲೀಸರು ಬಂಧಿಸಿ ಕೋರ್ಟ್ಗೆ ಹಾಜರುಪಡಿಸಿದ್ದು, ವಿಚಾರಣೆ ಬಳಿಕ 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಚಿತ್ರದುರ್ಗದ 1ನೇ ಹೆಚ್ಚುವರಿ ನ್ಯಾಯಲಯ ಆದೇಶ ಹೊರಡಿಸಿದೆ.
ಮಠದ ರಾಜಾಂಗಣದ ಗೋಡೆ ಮೇಲಿನ ಫೋಟೋ ಕಳ್ಳತನ ಕೇಸ್ನಲ್ಲಿ ಮಠದ ಮಾಜಿ ಆಡಳಿತಾಧಿಕಾರಿ, ಮಾಜಿ ಶಾಸಕ ಎಸ್ ಕೆ ಬಸವರಾಜನ್ ಬಂಧನ ಮಾಡಲಾಗಿದೆ. 1ನೇ ಹೆಚ್ಚುವರಿ ನ್ಯಾಯಾಲಯದ ಎದುರು ಹಾಜರು ಪಡಿಸಿದ ಪೊಲೀಸರು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡುವಂತೆ ಪೊಲೀಸರು ಕೇಳಿದ್ರು.
10 ದಿನ ಪೊಲೀಸ್ ಕಸ್ಟಡಿಗೆ ಬಸವರಾಜನ್ ಪರ ವಕೀಲರ ತಕರಾರು ಎತ್ತಿದ್ರು. ವಿಚಾರಣೆ ನಡೆಸಿದ ಕೋರ್ಟ್, 4 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ. ಎಸ್.ಕೆ.ಬಸವರಾಜನ್ ಹಾಗೂ A-1 ಆರೋಪಿ ಬಸವರಾಜೇಂದ್ರ ಗೆ ಪೊಲೀಸ್ ಕಸ್ಟಡಿ ನೀಡಲಾಗಿದೆ. ಒಂದನೇ ಹೆಚ್ಚುವರಿ JMFC ನ್ಯಾಯಾಲಯದಲ್ಲಿ ನ್ಯಾಯಾಧೀಶೆ ಅನಿತಾ ಕುಮಾರಿ ಅವರು ಆದೇಶ ನೀಡಿದ್ದಾರೆ.
ಆದೇಶದ ಬಳಿಕ ಚಿತ್ರದುರ್ಗ ನಗರ ಠಾಣೆಗೆ ಮಾಜಿ ಶಾಸಕ ಎಸ್ ಕೆ ಬಸವರಾಜನ್ ಶಿಫ್ಟ್ ಮಾಡಲಾಗಿದ್ದು, ಠಾಣೆಯಲ್ಲಿ ನಾಲ್ಕು ದಿನಕಾಲ ವಿಚಾರಣೆ ನಡೆಯಲಿದೆ.