ಭಟ್ಕಳ : ಮೊದಲೊಮ್ಮೆ ನಡೆದ ಹಲ್ಲೆಯ ನಂತರ ಇದೀಗ ಮತ್ತೊಮ್ಮೆ ಹಲ್ಲೆ ನಡೆಸಿ ವೈಯಕ್ತಿಕ ದ್ವೇಷದ ಕಾರಣ ಪ್ರಕರಣ ದಾಖಲಾದ ಘಟನೆಯೊಂದು ವರದಿಯಾಗಿದೆ . ನವಂಬರ್ 4 ರಂದು ನಡೆದ ಹಲ್ಲೆ ಪ್ರಕರಣಕ್ಕೆ ಸಂಬoಧಿಸಿದoತೆ ಪಿರ್ಯಾದಿಯು ಭಟ್ಕಳದ ನ್ಯಾಯಾಲಯದಲ್ಲಿ ಜಾಮೀನು ಪಡೆದು ತಮ್ಮ ಅಂಗಡಿ ಬಳಿ ಇದ್ದಾಗ ಮತ್ತೆ ಹಲ್ಲೆ‌ ನಡೆದಿದೆ ಎಂಬ ಆರೋಪ ಕೇಳಿಬಂದಿದೆ.

ತಾಲೂಕಿನ ಬೈಲೂರು ಸಣ್ಣಬಲ್ಲೆಯಲ್ಲಿ ವೈಯುಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ನಡೆದ ಹಲ್ಲೆ ಪ್ರಕರಣಕ್ಕೆ ಸಂಬoಧಿಸಿದoತೆ ಮಹಿಳೆಯೊಬ್ಬಳ ಮೇಲೆ ಪುನಃ ಹಲ್ಲೆ ನಡೆಸಿದ ಕುರಿತು ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ 12 ಮಂದಿ ವಿರುದ್ಧ ದೂರು ದಾಖಲಾಗಿದೆ. ಹಲ್ಲೆ ನಡೆಸಿದ ಬಗ್ಗೆ ರತ್ನಾ ನಾಯ್ಕ , ಕಮಲಾ ನಾಯ್ಕ ಪದ್ಮಾ ನಾಯ್ಕ, ಮಾದೇವಿ ನಾಯ್ಕ, ಮಾಲತಿ ನಾಯ್ಕ, ಕೃಷ್ಣ ಬೈರಯ್ಯ ನಾಯ್ಕ, ಮಾರ್ಕಂಡಯ್ಯ ನಾಯ್ಕ ಬಲೀಂದ್ರ ನಾಯ್ಕ, ಸುಧಾಕರ ನಾಯ್ಕ, ಧರ್ಮ ನಾಯ್ಕ, ನಾಗರಾಜ ನಾಯ್ಕ, ನಾಗೇಶ ನಾಯ್ಕ ಎಂಬುವವರ ಮೇಲೆ ದೂರು ದಾಖಲಾಗಿದೆ.

RELATED ARTICLES  ಕಾರ್ತಿಕ ಮಾಸದಲ್ಲಿ ಪ್ರಸಿದ್ಧ ಹಬ್ಬವಾದ “ತುಳಸಿ ಮದುವೆ”ಮಹತ್ವ ನಿಮಗೆ ಗೊತ್ತೆ?.

ಹಲ್ಲೆ ಘಟನೆಗೆ ಸಂಬoಧಿಸಿದoತೆ ದೂರಿಗೆ ಪ್ರತಿ ದೂರು ದಾಖಲಿಸಲಾಗಿದ್ದಾರೆ. ಶ್ರೀಧರ ಮಂಜುನಾಥ ದೇವಡಿಗ ಲಕ್ಷ್ಮೀ ಶ್ರೀಧರ ದೇವಡಿಗ ಹಾಗೂ ಇವರು,ತಮ್ಮನಾದ ಯೊಗೇಶ ಮಂಜುನಾಥ ದೇವಾಡಿಗ ಸೇರಿ ಇವರು ಕೈಯಲ್ಲಿ ಕತ್ತಿ, ಸುತ್ತಿಗೆ ಹಾಗೂ ದೊಣ್ಣೆ ಹಿಡಿದುಕೊಂಡು ನನ್ನ ತಾಯಿ ಮನೆ ಹತ್ತಿರ ಹೊಡೆಯಲು ಬಂದ ವೇಳೆ ನಮ್ಮ ತಮ್ಮ ಕೃಷ್ಣನಾಯ್ಕ ಏಕೆ ಹೊಡೆದಿದ್ದು ಎಂದು ಹೇಳುತ್ತಿದ್ದಂತೆ ಮೇಲೆ ಹಲ್ಲೆ ನಡೆಸಿದ್ದನ್ನು ಕೇಳಿದ್ದಕ್ಕೆ ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಬಂಗಾರದ ಕಿವಿಓಲೆ ತೆಗೆದು ಕೊಂಡು ಹೋಗಿದ್ದಾರೆ ಎಂದು ಗಾಯಗೊಂಡ ಮಹಿಳೆ ರತ್ನಾ ಮಂಜುನಾಥ ನಾಯ್ಕ ಪ್ರತಿದೂರು ನೀಡಿದ್ದಾರೆ.

ಇದನ್ನೂ ಓದಿ – ಉತ್ತರಕನ್ನಡ, ದಕ್ಷಿಣ ಕನ್ನಡ ಉಡುಪಿಯ ಜನರಿಗೆ ಇನ್ನು ಮುಂದೆ ಕುಚಲಕ್ಕಿ

ಆರೋಪಿತರು ಅಂಗಡಿಯೊಳಗೆ ಅಕ್ರಮವಾಗಿ ನುಗ್ಗಿ ಅವಾಚ್ಯವಾಗಿ ನಿಂದಿಸಿ, ನನ್ನ ತಮ್ಮನಿಗೆ ಮೊನ್ನೆ ಯಾಕೆ ಹೊಡೆದೆ ಎಂದು ಕೇಳುತ್ತ ಹಲ್ಲೆ ನಡೆಸಿ ಹಾಗೂ ಅಂಗಡಿಯ ಹೊರಗೆ ಎಳೆದುಕೊಂಡು ಬಂದು, ಬಟ್ಟೆಯನ್ನು ಹರಿದುಹಾಕಿ ಗಾಯಗೊಳಿಸಿದ್ದಾರೆ ಎನ್ನಲಾಗಿದ್ದು, ವೇಳೆ ಮಹಿಳೆಯು ಗಟ್ಟಿಯಾಗಿ ಕೂಗಿ ಕೊಂಡಾಗ, ಗಂಡ ಬಂದು ಬಿಡಿಸಲು ಮುಂದಾದಾಗ ಆತನ ಮೇಲೂ ಹಲ್ಲೆ ನಡೆಸಿ ಗಂಡಹೆoಡತಿ ಇಬ್ಬರ ಕೊರಳಲ್ಲಿದ್ದ ಬಂಗಾರದ ಮೂರುತೊಲೆ ಮಂಗಳಸೂತ್ರ ಎಳೆದುಕೊಂಡು ಹೋಗಿದ್ದಾರೆ ಎನ್ನಲಾಗಿದೆ.

RELATED ARTICLES  ಕುಮಟಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಮತ ನೀಡಿದರೆ ಅದು ಬಿಜೆಪಿಗೆ ಮತ ನೀಡಿದಂತೆ : ಆರ್.ವಿ ದೇಶಪಾಂಡೆ

ಇದನ್ನೂ ಓದಿ – ಮಠದ ರಾಜಾಂಗಣದ ಫೋಟೋ ಕಳವು ಪ್ರಕರಣ : ಆರೋಪಿತರು ಪೊಲೀಸ್ ವಶಕ್ಕೆ.

ಆರೋಪಿತರೆಲ್ಲರೂ ಅಂಗಡಿಯಲ್ಲಿ ಅಕ್ರಮವಾಗಿ ಒಳ ನುಗ್ಗಿ ಅಂಗಡಿಯಲ್ಲಿ ಇದ್ದ ವಿವಿಧ ಸಾಮಾಗ್ರಿಗಳು ಹಾನಿಮಾಡಿದ್ದು,ನನ್ನ ಗಂಡ ಹೆಂಗಸರಿoದ ತಪ್ಪಿಸಿಕೊಂಡು ತಮ್ಮ ಅಂಗಡಿಯಲ್ಲಿರುವ ಕತ್ತಿ ಹಿಡಿದು ಅವರೆಲ್ಲರಿಗೂ ಎದುರಿಸಿದಾಗ ಎಲ್ಲಾರು ಬಿಟ್ಟು ಓಡಿ ಹೋಗಿದ್ದು , ಮುಂದಿನ ದಿನಗಳಲ್ಲಿ ಸಿಕ್ಕಾಗ ಜೀವ ಸಮೇತ ಸಾಯುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದಾರೆ ಎಂದು ಹಲ್ಲೆ ಒಳಗಾದ ಮಹಿಳೆ ಲಕ್ಷ್ಮಿ ದೇವಡಿಗ ಈ ಕುರಿತು ಮುರುಡೇಶ್ವರ ಪೊಲೀಸ ಠಾಣೆಯಲ್ಲಿ ದೂರು ದಾಖಲಾಗಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪಿಎಸೈ ಪರಮಾನಂದ ಕೊಣ್ಣೂರ ತನಿಖೆ ನಡೆಸಿದ್ದಾರೆ.