ಯಲ್ಲಾಪುರ : ಪ್ರವಾಸಕ್ಕೆ ಹೊರಟ ಬಸ್ ಟ್ಯಾಂಕರ್ ಗೆ ಡಿಕ್ಕಿ ಹೊಡೆದು 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಗಾಯಗೊಂಡ ಘಟನೆ ತಾಲೂಕಿನ ಘಟ್ಟದಲ್ಲಿ ಶುಕ್ರವಾರ ಬೆಳಗ್ಗೆ ನಡೆದಿದೆ.

ಹುಬ್ಬಳ್ಳಿಯ ಸೆಂಟ್ ಆಂತೋನಿ ಪಬ್ಲಿಕ್ ಶಾಲೆಯ ವಿದ್ಯಾರ್ಥಿಗಳು ಸ್ಕೂಲ್ ಬಸ್ ನಲ್ಲಿ ಸುಂಕಸಾಳಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಅರಬೈಲ್ ಘಟ್ಟದಲ್ಲಿ ಹಾಳಾಗಿ ನಿಂತಿದ್ದ ಟ್ಯಾಂಕರ್ ಹಿಂದೆ ಇನ್ನೊಂದು ಟ್ಯಾಂಕರ್ ನಿಂತಿದ್ದು, ಅದಕ್ಕೆ ಸ್ಕೂಲ್ ಬಸ್ ಡಿಕ್ಕಿ ಹೊಡೆದಿದೆ.

RELATED ARTICLES  ಕಾಲುಜಾರಿ ಬಿದ್ದು ವ್ಯಕ್ತಿ ಸಾವು

ಬಸ್ ಚಾಲಕನಿಗೆ ಹೆಚ್ಚಿನ ಗಾಯಗಳಾಗಿದ್ದು, 20 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಎಲ್ಲರನ್ನೂ ಯಲ್ಲಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ನೀಡಲಾಗುತ್ತಿದೆ.

RELATED ARTICLES  ಬೈಕ್ ಇದ್ದಕ್ಕಿದ್ದಂತೆ ಮಾಯ : ಘಟನೆ ಹಿಂದೆ ಭೂತದ ಕೈವಾಡ..?