ಶಿರಸಿ : ಇಂದು ಬೆಳಗ್ಗಿನಿಂದ ವಿವಿಧ ಅಪಘಾತದ ಸುದ್ದಿಗಳು ವರದಿಯಾಗುತ್ತಿದ್ದು, ಶಾಲಾ ಬಸ್ ಅಪಘಾತದ ಸುದ್ದಿ ಇದೀಗ ಮತ್ತೆ ವರದಿಯಾಗಿದೆ. ಮಿನಿ ಶಾಲಾ ಬಸ್ ಪಲ್ಟಿಯಾಗಿ ಓರ್ವ ಮಹಿಳೆ ಮೃತಪಟ್ಟು, 12 ಜನ ಗಾಯಗೊಂಡ ಘಟನೆ ವರದಿಯಾಗಿದೆ. ರಾಷ್ಟ್ರೀಯ ಹೆದ್ದಾರಿ ಕುಮಟಾ-ಹಾವೇರಿ ಮಾರ್ಗ ಮದ್ಯದ ಬುಗಡಿಕೊಪ್ಪ ಗ್ರಾಮದ ಭೂತೇಶ್ವರ ದೇವಸ್ಥಾನದ ಬಳಿ ಈ ಅಪಘಾತ ಸಂಭವಿಸಿದೆ.

RELATED ARTICLES  ಸಿಲೆಂಡರ್ ಸಾಗಿಸುತ್ತಿದ್ದ ಲಾರಿ ಪಲ್ಟಿ.

ಶಿರಸಿ ಕಡೆಗೆ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಈ ಅಪಘಾತ ಸಂಭವಿಸಿದ್ದು, ಬನವಾಸಿ ಪೋಲಿಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಅಪಘಾತದಲ್ಲಿ ಶಾಲಾ ಸಿಬ್ಬಂದಿ ಕಸ್ತೂರಮ್ಮ ಮೃತಪಟ್ಟಿದ್ದು, 12 ಮಂದಿ ಗಾಯಗೊಂಡಿದ್ದಾರೆ.

ಇದನ್ನೂ ಓದಿ – ಶಾಲಾ ಪ್ರವಾಸಕ್ಕೆ ಹೊರಟ ಬಸ್ ಹಾಗೂ ಟ್ಯಾಂಕರ್ ನಡುವೆ ಅಪಘಾತ : ವಿದ್ಯಾರ್ಥಿಗಳಿಗೆ ಪೆಟ್ಟು

RELATED ARTICLES  ಇಂಡಿಯಾಗೂ ಬಂತು ಅಪಾಚಿ ಆರ್ ಆರ್ 310

ಅಪಘಾತವಾದ ಬಸ್ ರಾಣಿಬೆನ್ನೂರಿನ ಸಿದ್ದರೂಡ ನಗರದ ಪರಿಣಿತಿ ವಿದ್ಯಾಮಂದಿರದ ಶಾಲಾ ಬಸ್ ಎಂದು ತಿಳಿದುಬಂದಿದೆ. ಶಾಲಾ ಸಿಬ್ಬಂದಿಗಳು ಶಿರಸಿ ಮಾರಿಕಾಂಬಾ ದೇವಿಯ ದರ್ಶನಕ್ಕೆ ತೆರಳುತ್ತಿದ್ದರು ಎನ್ನಲಾಗಿದೆ. ಬನವಾಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪಿಎಸ್‌ಐ ಹನುಮಂತ ಬಿರಾದಾರ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಆರಂಭಿಸಿದ್ದಾರೆ.