ಹೊನ್ನಾವರ : ಹೊನ್ನಾವರ ವಿಭಾಗ ಭಟ್ಕಳ ಉಪವಿಭಾಗ ಮಂಕಿ ವಲಯ ವ್ಯಾಪ್ತಿಯ ಹೊನ್ನಾವರ ತಾಲೂಕಿನ ಹಡಿಕಲ್ ಅರಣ್ಯ ಸರ್ವೆ ನಂ. ೧೯ ರಲ್ಲಿನ ಸಾಗವಾನಿ ಮತ್ತು ಭರಣಗಿ ಮರ ಕಡಿದು ತುಂಡುಗಳನ್ನು ತಯಾರಿಸಿ ಆಟೋ ರಿಕ್ಷಾದಲ್ಲಿ ಸಾಗಿಸುತ್ತಿದ್ದ ಆರೋಪಿತರನ್ನು ಬಂಧಿಸಲಾಗಿರುತ್ತದೆ. ಆರೋಪಿಗಳಾದ ನಾಗರಾಜ ಈಶ್ವರ ನಾಯ್ಕ , ಸಂದೀಪ ಕೇಶವ ನಾಯ್ಕ , ಗಂಗಾಧರ ತಿಮ್ಮಪ್ಪ ಆಚಾರಿ , ಸಂದೀಪ ರಮೇಶ ನಾಯ್ಕ, ಗೌರೀಶ ಮಂಜುನಾಥ ನಾಯ್ಕ, ಪ್ರವೀಣ ವಾಮನ ನಾಯ್ಕ ಮತ್ತು ಪ್ರಕಾಶ ರಾಮ ಗೌಡ ಇವರನ್ನು ದಸ್ತಗಿರಿ ಮಾಡಿ ಬಂಧಿಸಲಾಗಿದೆ.

ಬಂಧಿತರಿಂದ ಕೃತ್ಯಕ್ಕೆ ಬಳಸಿದ ಆಟೋ ರಿಕ್ಷಾ ಮತ್ತು ಟಾಟಾ ಎಸಿಇ ವಾಹನ ವಶಪಡಿಸಿಕೊಳ್ಳಲಾಗಿದೆ. ಮತ್ತು ಒಂದು ತಿಂಗಳ ಹಿಂದೆಯಷ್ಟೆ ಕೆಳಗಿನ ಇಡಗುಂಜಿಯ ಇದೇ ರಥ ಶಿಲ್ಪಿ ಗಂಗಾಧರ ಆಚಾರಿ ಇವರ ಕಟ್ಟಿಗೆ ಗೋಡೌನಿನಲ್ಲಿ ಅಕ್ರಮವಾಗಿ ದಾಸ್ತಾನಿಟ್ಟ ಸಾಗವಾನಿ ಕಟ್ಟಿಗೆಗಳನ್ನು ಜಫ್ತಿಪಡಿಸಲಾಗಿದ್ದು ಪುನಃ ಸದರಿ ಪ್ರಕರಣದಲ್ಲಿಯೂ ಸಹ ಇವರ ಗೋಡೌನಿನಲ್ಲಿ ಅಕ್ರಮ ಕಟ್ಟಿಗೆಗಳು ಕಂಡು ಬಂದು ಜಫ್ತಿಪಡಿಸಲಾಗಿರುತ್ತದೆ.

RELATED ARTICLES  ವಿದ್ಯೆಯ ಅನಾವರಣ ಸಮಾಜಕ್ಕೆ ಪ್ರೇರಣೆ: ರಾಘವೇಶ್ವರ ಶ್ರೀ ಆಶಯ

ಇದನ್ನೂ ಓದಿ – ಶಿರಸಿ ಸಮೀಪ ಪಲ್ಟಿಯಾದ ಶಾಲಾ ಬಸ್ ..! ಓರ್ವ ಮಹಿಳೆ ಸಾವು : ವಿದ್ಯಾರ್ಥಿಗಳಿಗೆ ಪೆಟ್ಟು.

ಕಾರ್ಯಾಚರಣೆಯಲ್ಲಿ ಡಿಸಿಎಫ್ ರವಿಶಂಕರ, ಎಸಿಎಫ್ ಕೆ. ಟಿ. ಬೋರಯ್ಯ, ಆರ್‌ಎಫ್‌ಓ ಸವಿತಾ ಆರ್. ದೇವಾಡಿಗ, ಡಿಆರ್‌ಎಫ್‌ಓ ಶಿವಾನಂದ ಇಂಚಲ, ಯೋಗೇಶ ಮೊಗೇರ, ಮಹಾದೇವ ಮಡ್ಡಿ, ಸಂದೀಪ ಎಸ್. ಅರ್ಕಸಾಲಿ, ಮಂಜುನಾಥ ನಾಯ್ಕ, ಜಿ. ಸಂತೋಷ, ಷಣ್ಮುಖ ಹವಳಗಿ, ಲೋಹಿತ್ ನಾಯ್ಕ , ರೇಷ್ಮಾ ಜಿ. ನಾಯ್ಕ, ಅರಣ್ಯ ರಕ್ಷಕರಾದ ಮಹಾಬಲ ಗೌಡ, ಶಿವಾನಂದ ಪೂಜಾರಿ, ಸುರೇಂದ್ರನಾಥ ನಾಯ್ಕ ದೇವೇಂದ್ರ ಗೊಂಡ, ಬಸವರಾಜ ಲಮಾಣಿ, ಬಸಯ್ಯ ಸಂಕಣ್ಣವರ, ರಾಮ ನಾಯ್ಕ, ವಿನಾಯಕ ನಾಯ್ಕ ಇದ್ದರು.

RELATED ARTICLES  ಋಷಿಯುಗ- ಕಲಿಯುಗ ಶಿಕ್ಷಣದ ಸಮನ್ವಯ ಅಗತ್ಯ: ರಾಘವೇಶ್ವರ ಶ್ರೀ

ಇತರ ಪ್ರಮುಖ ಸುದ್ದಿಗಳು ಇಲ್ಲಿದೆ.