ಜನಪ್ರಿಯ ಕಿರುತೆರೆ ನಟ ಸಿದ್ದಾಂತ್ ವೀರ್ ಸೂರ್ಯವಂಶಿ ನಿಧನರಾಗಿದ್ದಾರೆ. ಮೂಲಗಳ ಪ್ರಕಾರ ಜಿಮ್‌ನಲ್ಲಿ ವ್ಯಾಯಾಮ ಮಾಡುವಾಗ ಸಿದ್ದಾಂತ್ ನಿಧನರಾಗಿದ್ದಾರೆ. ಈ ನಟ ಇತ್ತೀಚೆಗೆ ತಮ್ಮ ಹೆಸರನ್ನು ಆನಂದ್ ಸೂರ್ಯವಂಶಿಯಿಂದ ಸಿದ್ದಾಂತ್ ಸೂರ್ಯವಂಶಿ ಎಂದು ಬದಲಾಯಿಸಿಕೊಂಡಿದ್ದಾರೆ.
ಸಿದ್ಧಾಂತ್ ಅವರು ಸೂಫಿಯಾನಾ ಇಷ್ಕ್ ಮೇರಾದಂತಹ ಕಾರ್ಯಕ್ರಮಗಳ ಭಾಗವಾಗಿದ್ದಾರೆ.
……….ದಿನದ ಪ್ರಮುಖ ಸುದ್ದಿಗಳನ್ನು ಓದಿ……
- ಶಾಲಾ ಬಸ್ ಪಲ್ಟಿ : ಸ್ಥಳದಲ್ಲಿಯೇ ಸಾವನ್ನಪ್ಪಿದ ಮಹಿಳೆ : ವಿದ್ಯಾರ್ಥಿಗಳಿಗೆ ಪೆಟ್ಟು.
- ಟ್ಯಾಂಕರ್ ಹಾಗೂ ಶಾಲಾ ಬಸ್ ನಡುವೆ ಅಪಘಾತ : ವಿದ್ಯಾರ್ಥಿಗಳು ಆಸ್ಪತ್ರೆಗೆ.
ಸಿದ್ಧಾಂತ್ ಅವರು ಮುಂಬೈನ ಜಿಮ್ ಒಂದರಲ್ಲಿ ವರ್ಕೌಟ್ ಮಾಡುತ್ತಿದ್ದರು. ಈ ವೇಳೆ ಅವರು ಏಕಾಏಕಿ ಕುಸಿದು ಬಿದ್ದಿದ್ದಾರೆ. ನಂತರ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಯಿತಾದರೂ ಯಾವುದೇ ಪ್ರಯೋಜನ ಆಗಿಲ್ಲ. ಅವರ ನಿಧನದ ವಿಚಾರವನ್ನು ಆಪ್ತರು ಹಾಗೂ ಕುಟುಂಬದವರು ಖಚಿತಪಡಿಸಿದ್ದಾರೆ.
ಸಿದ್ಧಾಂತ್ ಅವರು ಪತ್ನಿ ಅಲೇಸಿಯಾ ಹಾಗೂ ಇಬ್ಬರು ಮಕ್ಕಳನ್ನು ಅಗಲಿದ್ದಾರೆ. ಅಲೇಸಿಯಾ ಅವರು ಮಾಡೆಲಿಂಗ್ ಕ್ಷೇತ್ರದಲ್ಲಿ ಹೆಸರು ಮಾಡಿದ್ದಾರೆ.
Source : Kannadaduniya