ಹೊನ್ನಾವರ : ತಾಲೂಕಿನ ವಂದೂರು ವ್ಯವಸಾಯ ಸಹಕಾರಿ ಸಂಘದ ನೂತನ ವಿಸ್ತರಣಾ ಕಟ್ಟಡ ಲೋಕಾರ್ಪಣೆ ಕಾರ್ಯಕ್ರಮ ಇಂದು ನಡೆಯಿತು. ಕುಮಟಾ ಹೊನ್ನಾವರ ಶಾಸಕ ದಿನಕರ ಶೆಟ್ಟಿಯವರು ಇಂದು ಸಂಘದ ನೂತನ ವಿಸ್ತರಣಾ ಕಟ್ಟಡವನ್ನು ಲೋಕಾರ್ಪಣೆ ಮಾಡಿದರು.

ನಂತರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ಶಾಸಕರು ವಂದೂರು, ನೀಲಕೊಡು ಹಾಗೂ ಕಡ್ಲೆಯ ಸುತ್ತಮುತ್ತಲಿನ ಗ್ರಾಮಸ್ಥರೆಲ್ಲರ ಸಹಯೋಗದೊಂದಿಗೆ ಯಶಸ್ವಿಯಾಗಿ ಮುಂದುವರೆಯುತ್ತಿರುವ ವಂದೂರು ವ್ಯವಸಾಯ ಸಹಕಾರಿ ಸಂಘವು ಒಂದು ಮಾದರಿ ಸಂಘವೆಂದರೆ ತಪ್ಪಾಗಲಾರದು. ಈ ಭಾಗದ ರೈತರಿಗೆ ಆರ್ಥಿಕ ಬೆನ್ನೆಲುಬಾಗಿ ಕಾರ್ಯನಿರ್ವಹಿಸುತ್ತಿರುವ ಈ ಸಂಘವು ದಕ್ಷ ಹಾಗೂ ಪ್ರಾಮಾಣಿಕ ಅಧ್ಯಕ್ಷರು ಹಾಗೂ ನಿರ್ದೇಶಕರ ವೃಂದವನ್ನು ಹೊಂದಿದೆ. ಆಡಳಿತ ಮಂಡಳಿ ಹಾಗೂ ಸಾರ್ವಜನಿಕರೆಲ್ಲರು ಸಂಘದ ಯಶಸ್ಸಿಗೆ ಪಾಲುದಾರರು ಎಂದು ನುಡಿದರು. ನಂತರ ಸಂಘದ ಅಧ್ಯಕ್ಷರಿಗೆ ಹಾಗೂ ನಿರ್ದೇಶಕರೆಲ್ಲರಿಗೆ ಮತ್ತು ಸಿಬ್ಬಂದಿಗಳಿಗೆ ಗೌರವಿಸಲಾಯಿತು.

RELATED ARTICLES  ಬೃಹತ್ ಜನಜಾಗೃತಿ ಸಮಾವೇಶ : ಬಿ.ಜೆ.ಪಿ ವಿರುದ್ಧ ಹರಿಹಾಯ್ದ ಕಾಂಗ್ರೆಸ್‌ ಪ್ರಮುಖರು.

ಪ್ರಮುಖ ಸುದ್ದಿಗಳನ್ನು ಓದಿ.

ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಂದೂರು ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷರಾಗಿರುವ ಶ್ರೀ ಸುಬ್ರಹ್ಮಣ್ಯ ಶಂಕರನಾರಾಯಣ ಭಟ್ಟ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೆ. ಡಿ. ಸಿ. ಸಿ. ಬ್ಯಾಂಕ್(ಶಿರಸಿ) ನಿರ್ದೇಶಕರಾಗಿರುವ ಶ್ರೀ ಶಿವಾನಂದ ಹೆಗಡೆ, ಕಡ್ಲೆ ಗ್ರಾಮಪಂಚಾಯತ್ ಅಧ್ಯಕ್ಷ ಶ್ರೀ ಗೋವಿಂದ ಗೌಡ, ಸಿ. ಡಿ. ಓ. ಶ್ರೀಮತಿ ಸರಿತಾ, ಶ್ರೀ ವಿದ್ವಾನ್ ವಿಘ್ನೇಶ್ವರ ಭಟ್ಟ ಬುಚ್ಚನ್, ಕೆ. ಡಿ. ಸಿ. ಸಿ. ಬ್ಯಾಂಕ್(ಶಿರಸಿ)ವ್ಯವಸ್ಥಾಪಕ ನಿರ್ದೇಶಕರಾಗಿರುವ ಶ್ರೀ ಆರ್. ಜಿ. ಭಾಗವತ್, ಕಡ್ಲೆ ಪಂಚಾಯತ್ ಸದಸ್ಯರುಗಳು ಹಾಗೂ ವ್ಯವಸಾಯ ಸಹಕಾರಿ ಸಂಘ ವಂದೂರು ಇದರ ನಿರ್ದೇಶಕರುಗಳು ಇದ್ದರು.

RELATED ARTICLES  ಕಾಡು ಕುರಿ ಬೇಟೆ : ಓರ್ವನ ಬಂಧನ