ಗೋಕರ್ಣ: ವ್ಯಕ್ತಿಗೆ ಕುಲ ಮುಖ್ಯವಲ್ಲ,ಗುಣ ಮುಖ್ಯ ,ಉತ್ತಮ ಗುಣವುಳ್ಳವರನ್ನು ಭಗವಂತನು ಉದ್ಧಾರ ಮಾಡುತ್ತಾನೆ. ಆದ್ದರಿಂದ ಉತ್ತಮ ಗುಣಗಳನ್ನು ಹಾಗೂ ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಳ್ಳುವಂತೆ ತಿಳಿ ಹೇಳಿದ್ದಾರೆ ಕನಕದಾಸರು, ಎಂದು ಸೆಕೆಂಡರಿ ಹೈಸ್ಕೂಲಿನ ಶಿಕ್ಷಕ ವಿಶ್ವನಾಥ್. ಪಿ. ಬೇವಿನಕಟ್ಟಿ ಹೇಳಿದರು.

ಹಿರೇಗುತ್ತಿ ಸೆಕೆಂಡರಿ ಹೈಸ್ಕೂಲಿನಲ್ಲಿ ನಡೆದ ಕನಕದಾಸರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡುತ್ತಾ “ಕನಕದಾಸರ ಆದರ್ಶ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದರು”

ಪ್ರಾಸ್ತಾವಿಕ ನುಡಿಗಳನ್ನಾಡಿದ ಎನ್.ರಾಮು. ಹಿರೇಗುತ್ತಿ “ಕನಕದಾಸರು ಸಂತ ಕವಿ, ಹರಿದಾಸ ಪರಂಪರೆಯ ಮತ್ತು ದಾಸ ಸಾಹಿತ್ಯದ ಅಶ್ವಿನಿ ದೇವತೆಗಳಲ್ಲಿ ಒಬ್ಬರು, ಯುಗ ಪ್ರವರ್ತಕ, ಕ್ರಾಂತಿಕಾರಿ ಹಾಗೂ ದಾಸ ಶ್ರೇಷ್ಠರು, ಇವರ ವಿಶಿಷ್ಟ ಗುಣಗಳಾದ ಭಕ್ತಿ , ವೈರಾಗ್ಯ, ಕಾವ್ಯ ರಚನಾ ಪ್ರತಿಭೆ ಅದ್ಭುತವಾದದು” ಎಂದರು

RELATED ARTICLES  ಉತ್ತರ ಕನ್ನಡದಲ್ಲಿ ಮಳೆಯ ಪ್ರಮಾಣ :ಜುಲೈ ತಿಂಗಳ ಸಾಮಾನ್ಯ ಮಳೆ ಪ್ರಮಾಣ 991 ಮಿ.ಮೀ

ಕನಕದಾಸರ ಕುರಿತು ಭಾಷಣ ಮಾಡಿದ ವಿದ್ಯಾರ್ಥಿನಿ ಸುವರ್ಣಾ “ಕನಕದಾಸರು ತಮ್ಮ ಅನೇಕ ಕೀರ್ತನೆಗಳ ಮುಖಾಂತರ ಅರಿವು ಮೂಡಿಸಿ ಉತ್ತಮ ಸಮಾಜ ನಿರ್ಮಾಣಕ್ಕಾಗಿ ಕೊಡುಗೆ ನೀಡಿದ ದಾಸಶ್ರೇಷ್ಠರು ಕನಕದಾಸರು” ಎಂದರು.

ಕಾರ್ಯಕ್ರಮದ ವೇದಿಕೆಯಲ್ಲಿ ಶಿಕ್ಷಕರಾದ ಬಾಲಚಂದ್ರ ಹೆಗಡೆಕರ್. ನಾಗರಾಜ ನಾಯಕ. ಮಹಾದೇವ ಗೌಡ. ಬಾಲು ಅಡಿಗೋಣ. ಇಂದಿರಾ ನಾಯಕ. ಜಾನಕಿ ಗೊಂಡ. ಶಿಲ್ಪಾ ನಾಯಕ. ಮದನ ನಾಯಕ. ಕವಿತಾ ಅಂಬಿಗ. ಮಹಾತ್ಮಾ ಗಾಂಧೀ ಇಂಗ್ಲಿಷ್ ಮೀಡಿಯಂ ಸ್ಕೂಲ್ ನ
ಸಮನ್ ಫರ್ನಾಂಡಿಸ್, ವಸಂತ ಬಾಯಿ, ತನುಜಾ, ಜಯಶ್ರೀ ಪಟಗಾರ, ಗೋಪಾಲಕೃಷ್ಣ ಗುನಗಾ, ಗೋವಿಂದ ನಾಯ್ಕ ಉಪಸ್ಥಿತರಿದ್ದರು.

RELATED ARTICLES  ಗುಡೇಅಂಗಡಿಯಲ್ಲಿ ಜಲವಳ್ಳಿ-ಹುಡಗೋಡ ಅವರ ಅಗಲಿಕೆಗೆ ನುಡಿನಮನ

ಕಾರ್ಯಕ್ರಮವು ನಾಗಶ್ರೀ ಸಂಗಡಿಗರ ಪ್ರಾರ್ಥನೆಯೊಂದಿಗೆ ಪ್ರಾರಂಭವಾಯಿತು. ವಿದ್ಯಾರ್ಥಿ ಪ್ರತಿನಿಧಿ ಎಂ.ಜಿ.ನಾಗಭೂಷಣ್ ಸರ್ವರನ್ನು ಸ್ವಾಗತಿಸಿದರು. ಕಾಂಚಿಕ ನಾಯಕ ಕಾರ್ಯಕ್ರಮ ನಿರ್ವಹಿಸಿದರು. ಸಾಂಸ್ಕೃತಿಕ ಸಂಘದ ಪ್ರತಿನಿಧಿ ವಿಜೇತ ಗುನಗಾ ವಂದಿಸಿದರು.

ವರದಿ: ಎನ್.ರಾಮು. ಹಿರೇಗುತ್ತಿ.