ಕುಮಟಾ : ತಾಲೂಕಿನ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ ನ ಸರಸ್ವತಿ ವಿದ್ಯಾ ಕೇಂದ್ರ ಪ್ರಾಥಮಿಕ ಶಾಲೆಯಲ್ಲಿ ಕನಕದಾಸ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಶ್ರೀ ಕೃಷ್ಣ ಹಾಗೂ ಕನಕದಾಸರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ದೀಪ ಪ್ರಜ್ವಲನೆ ಮಾಡುವುದರ ಮೂಲಕ ಕಾರ್ಯಕ್ರಮ ಶುಭಾರಂಭಗೊಂಡಿತು.

ಶಿಕ್ಷಕಿ ಸುವರ್ಣಾ ಮಯ್ಯರ್ ಕನಕದಾಸರ ಬಗ್ಗೆ ಪರಿಚಯಿಸಿ, ತಲ್ಲಣಿಸದಿರು ಕಂಡ್ಯ ತಾಳು ಮನವೇ ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ’ – ಎನ್ನುವ ಭರವಸೆಯ ಮಾತುಗಳನ್ನು ಆಡಿದವರು ಭಕ್ತ ಕನಕದಾಸರು. ಅವರು ವಿಜಯನಗರ ಸಾಮ್ರಾಜ್ಯದ ಆಸುಪಾಸಿನಲ್ಲಿದ್ದವರು. ಆ ಕಾಲದ ಪರಿಸರ ಮತ್ತು ಅವರು ಬೆಳೆದು ಬಂದ ಪರಿಸರಗಳ ಸಂಕೀರ್ಣತೆಯಲ್ಲಿ ಕನಕದಾಸರ ವ್ಯಕ್ತಿತ್ವ ಅರಳಿಕೊಂಡಿದೆ. ಯುದ್ಧದಿಂದ ಗಾಯಗೊಂಡ ಸಂದರ್ಭ ಅವರ ಬದುಕಿನ ಧ್ಯಾನವನ್ನೇ ಬದಲಿಸಿತು. ಲೌಕಿಕದ ಮನುಷ್ಯ ಅಲೌಕಿಗೊಳ್ಳುವ ಸಂತದಾರಿಗಳು ಇಲ್ಲಿಯೇ ಗೋಚರಿಸಿದವು ಎಂದರು.

RELATED ARTICLES  ಕೃಷಿಯಲ್ಲಿ ತೊಡಗಿ ಗಮನ ಸೆಳೆದ ವಿದ್ಯಾರ್ಥಿಗಳು.

ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು.ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆ ಸಾರಿದರು ಎಂದು ತಿಳಿಸಿದರು.

RELATED ARTICLES  ಯಾಣದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಣರಾಜ್ಯೋತ್ಸವ.

ವಿದ್ಯಾರ್ಥಿಗಳಾದ ಅನನ್ಯಾ ಭಟ್ಟ, ಅದಿತಿ ಶಾನಭಾಗ, ದೀಪಿಕಾ ಭಟ್, ಶೈವಿಕಾ ಖಾರ್ವಿ ಇನ್ನಿತರರು ಕನಕದಾಸ ಜಯಂತಿಯ ಕಾರ್ಯಕ್ರಮದಲ್ಲಿ ಗೀತ ಗಾಯನ ಪ್ರಸ್ತುತಪಡಿಸಿದ್ದರು. ಉನ್ನತಿ ಎಸ್ ಹಾಗೂ ವೈಷ್ಣವಿ ಕಾಮತ್ ಸ್ವಾಗತ ಹಾಗೂ ವಂದನೆಯೊಂದಿಗೆ ಕಾರ್ಯಕ್ರಮ ನಿರೂಪಿಸಿದರು. ಮುಖ್ಯಶಿಕ್ಷಕಿ ಸುಜಾತಾ ನಾಯ್ಕ ವೇದಿಕೆಯಲ್ಲಿ ಹಾಜರಿದ್ದರು. ಶಿಕ್ಷಕ ಗಣೇಶ ಜೋಶಿ ಕಾರ್ಯಕ್ರಮ ಸಂಯೋಜಿಸಿದರು.