ಅಂಕೋಲಾ : ಪಟ್ಟಣದ ವಾಜಂತ್ರಿಕೇರಿಯಲ್ಲಿ ಮನೆಯೊಂದರಲ್ಲಿ ಯಾರೂ ಇಲ್ಲದ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತುಕೊಂಡು ಕೆಲ ಕಾಲ ಸುತ್ತಲ ಜನರಲ್ಲಿ ಆತಂಕ ಮೂಡಿಸಿದ ಘಟನೆ
ಶುಕ್ರವಾರ ರಾತ್ರಿ ನಡೆದಿದೆ. ಘಟನೆಯಿಂದಾಗಿ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ಸು, ಸುತ್ತಲ ಜನರು ಕೆಲ ಕಾಲ ಕಂಗಾಲಾದ ಘಟನೆ ನಡೆದಿದೆ.
ಗೋಪಿನಾಥ ಮಹಾಲೆಯವರಿಗೆ ಸೇರಿದ ಮನೆ ಇದಾಗಿದ್ದು, ಹಿಂಬದಿಯ ಹಳೆಯ ಮನೆಯನ್ನು ಬಾಡಿಗೆ ನೀಡಲಾಗಿತ್ತು. ಈ ಮನೆಯಲ್ಲಿ ಯಾರೂ ಇಲ್ಲದ ವೇಳೆ ರಾತ್ರಿ 8ರ ಸುಮಾರಿಗೆ ಮನೆಯೊಳಗಿಂದ ಭಾರೀ ಹೊಗೆ ಮತ್ತು ಬೆಂಕಿ ಕಾಣಿಸಿಕೊಂಡಿದೆ.
……ಈ ಸುದ್ದಿಗಳನ್ನೂ ಓದಲು ಸುದ್ದಿಯನ್ನು ಕ್ಲಿಕ್ಕಿಸಿ…..
- ಬರ್ಬರ ಹತ್ಯೆಯ ಲೈವ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್..!
- ಜಿಮ್ ನಲ್ಲಿ ವರ್ಕೌಟ್ ಮಾಡುವಾಗಲೇ ಕುಸಿದು ಕೊನೆಯುಸಿರೆಳೆದ ಕಿರುತೆರೆ ನಟ
ಕೂಡಲೇ ಸುತ್ತಮುತ್ತಲಿನ ಕೆಲ ಯುವಕರು ಮನೆಯ ಬಾಗಿಲ ಒಡೆದು ಮನೆಯೊಳಗಿನ ಗ್ಯಾಸ್ ಸಿಲಿಂಡರ್ ಗಳನ್ನು ಹೊರಗೆಸೆದು ಸಾಹಸ ಮೆರೆದಿದ್ದಾರೆ. ಅಷ್ಟರಲ್ಲೆ ಅಗ್ನಿಶಾಮಕ ಸಿಬ್ಬಂದಿಗಳು ಬಂದು ಬೆಂಕಿ ಆರಿಸಲು ನೆರವಾಗಿದ್ದಾರೆ.
ಬೆಂಕಿ ಅವಘಡ ಸಂಭವಿಸಿದ ಮನೆಯ ಸುತ್ತಮುತ್ತ ಅನೇಕ ಮನೆಗಳಿದ್ದು, ಸ್ಥಳೀಯರ ಸಾಹಸ ಮತ್ತು ಅಗ್ನಿ ಶಾಮಕ ಸಿಬ್ಬಂದಿಯ ಕಾರ್ಯದಿಂದಾಗಿ ದೊಡ್ಡ ದುರಂತಗಳು ತಪ್ಪಿದಂತಾಗಿದೆ.