ಗೋಕರ್ಣ : ಪ್ರಸಿದ್ಧವಾದ ಶಿವನ ಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಪ್ರತಿದಿನ ಹೊಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಿದ್ದು, ಇದೀಗ ಆಡಳಿತ ಕಮಿಟಿಯ ನಿರ್ಣಯಗಳು ಜನರನ್ನು ನಿಬ್ಬೆರಗಾಗಿಸುವುದರ ಜೊತೆಗೆ ಜನತೆಯ ಬೇಸರದ ಮಾತಿಗೂ ಕಾರಣವಾಗುತ್ತಿದೆ.

ರಥ ಬೀದಿಯಲ್ಲಿ ಸಂಚರಿಸಬೇಕು ಎಂದರೆ ಇನ್ನುಮುಂದೆ ರಸ್ತೆಯಲ್ಲಿ ಅರೆಬರೆ ಬಟ್ಟೆ ಧರಿಸುವಂತಿಲ್ಲ. ಹೀಗೆಂದು ದೇವಸ್ಥಾನದ ಪಕ್ಕದಲ್ಲಿ ಇರುವ ರಥ ಬೀದಿಯಿಂದ ಪಶ್ಚಿಮ ದ್ವಾರದ ವರೆಗೆ ಅರೆಬರೆ ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧ ಹೊರಡಿಸಿ ಮಹಾಬಲೇಶ್ವರ ದೇವಸ್ಥಾನದ ಕಮಿಟಿ ಸೂಚನಾ ಫಲಕ ಅಳವಡಿಸಿದೆ.

RELATED ARTICLES  ಇನ್ನು ಮುಂದೆ ಜಿಯೋ ಫೋನ್ ಭಾರತದಲ್ಲಿಯೇ ತಯಾರಗಲಿದೆ!

ಸಾರ್ವಜನಿಕ ಸ್ಥಳವಾದರೂ ಕಮಿಟಿಯಿಂದ ಸೂಚನಾ ಫಲಕದ ಬ್ಯಾನರ್ ಅಳವಡಿಕೆ ಜನರಲ್ಲಿ ವಿರೋಧ ವ್ಯಕ್ತವಾಗುತ್ತಿದೆ. ರಥ ಬೀದಿಯಿಂದ ಕಡಲ ತೀರ ಇತರೆ ಸ್ಥಳಗಳಿಗೆ ಸಾರ್ವಜನಿಕರು ತೆರಳುವ ಪ್ರದೇಶ ಇದಾಗಿದ್ದು ಸಾರ್ವಜನಿಕರು ಓಡಾಡುವ ಸ್ಥಳದಲ್ಲಿ ಇಂತಹ ನಿಯಮ ರೂಪಿಸಬಹುದೇ ಎಂಬುದು ಇದೀಗ ಪ್ರಶ್ನೆಯಾಗಿ ಉಳಿದಿದೆ.

ಗೋಕರ್ಣ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರ ಆಗಿರದೇ ಪ್ರವಾಸಿ ಸ್ಥಳವೂ ಸಹ ಆಗಿದೆ. ಹೀಗಿರುವಾಗ ದೇವಸ್ಥಾನದ ಒಳಗೆ ಮಾತ್ರ ಸೀಮಿತವಾಗಿದ್ದ ವಸ್ತ್ರ ಸಂಹಿತೆ ಇದೀಗ ಸಾರ್ವಜನಿಕ ಪ್ರದೇಶಕ್ಕೂ ಅಳವಡಿಸಿರುವುದು ವಿವಾದ ಹುಟ್ಟುಹಾಕಿದೆ. ಅವರಿಗೆ ಈ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎನ್ನಲಾಗಿದೆ.

RELATED ARTICLES  ಅನಂತಕುಮಾರ್ ಹೆಗಡೆಗೆ ಕೈತಪ್ಪಿದ ಟಿಕೆಟ್ - ಕಾಗೇರಿಗೆ ಟಿಕೆಟ್.

ಸುದ್ದಿಗಳನ್ನು ಓದಲು ಈ ಲಿಂಕ್ ಒತ್ತಿ

ಇದೀಗ ನಿವೃತ್ತ ನ್ಯಾಯಮೂರ್ತಿ ಬಿ.ಎನ್ ಕೃಷ್ಣರವರ ಅಧ್ಯಕ್ಷತೆಯಲ್ಲಿ ಎಂಟು ಜನ ಸದಸ್ಯರ ಸಮಿತಿ ಇದ್ದು ಇದರಲ್ಲಿ ಉಪ ವಿಭಾಗಾಧಿಕಾರಿಗಳು ಇದ್ದಾರೆ ಆದರೆ ಸಮಿತಿಯ ನಿರ್ಣಯ ಸಾರ್ವಜನಿಕ ವಲಯದಲ್ಲಿ ಇದೀಗ ಚರ್ಚೆ ಆಗುತ್ತಿದೆ.