ಗೋಕರ್ಣ : ಮಹಾಬಲೇಶ್ವರ ದೇವಸ್ಥಾನದ ಆಡಳಿತ ಸಮಿತಿಯಿಂದ ರಥಬೀದಿಯಲ್ಲಿ ಹಾಕಿದ್ದ ವಿವಾಧಿತ ಫಲಕ ವನ್ನು ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತೆರವುಮಾಡಲಾಗಿದೆ. ವರದಿಗಳಾಗಿ ವಿಷಯ ಸುದ್ದಿಯಾದ ಬೆನ್ನಲ್ಲೇ ಜಿಲ್ಲಾಧಿಕಾರಿ ಪಭುಲಿಂಗ ಕವಲಿಕಟ್ಟಿ ರವರು ಕುಮಟಾ ಎಸಿಯವರಿಗೆ ಸೂಚನೆ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಕುಮಟಾ ಎಸಿಯವರು ರಥಬೀದಿಯಲ್ಲಿ ಹಾಕಿದ್ದ ಫಲಕವನ್ನು ತೆರವು ಗೊಳಿಸಿದ್ದಾರೆ.
ಪ್ರಸಿದ್ಧವಾದ ಶಿವನ ಕ್ಷೇತ್ರ ಹಾಗೂ ಪ್ರವಾಸಿ ತಾಣವಾಗಿ ಗುರುತಿಸಿಕೊಂಡಿರುವ ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಗೋಕರ್ಣ ಪ್ರತಿದಿನ ಹೊಂದಿಲ್ಲೊಂದು ವಿಷಯಕ್ಕೆ ಸುದ್ದಿಯಾಗುತ್ತಿದೆ, ದೇವಸ್ಥಾನದ ರಥ ಬೀದಿಯಿಂದ ಪಶ್ಚಿಮ ದ್ವಾರದ ವರೆಗೆ ಅರೆಬರೆ
ಉಡುಪು ಧರಿಸಿ ಸಾರ್ವಜನಿಕರು ಸಂಚರಿಸಲು ನಿಷೇಧಿಸಿದೆ ಎಂದು ನಾಮಫಲಕ ವನ್ನು ದೇವಸ್ಥಾನ ಮೇಲುಸ್ತುವಾರಿ ಸಮಿತಿ
ಅಳವಡಿಸಿತ್ತು. ಸಾರ್ವಜನಿಕ ಸ್ಥಳವಾದರೂ ಸಮಿತಿಯಿಂದ ಸೂಚನಾ ಫಲಕದ ಬ್ಯಾನರ್ ಅಳವಡಿಕೆ ಮಾಡಲಾಗಿದ್ದು ಸಾರ್ವಜನಿಕರಿಂದಲೂ ವ್ಯಾಪಕ ಟೀಕೆಗೆ ಒಳಗಾಗಿತ್ತು.
ಸುದ್ದಿಗಳನ್ನು ಓದಲು ಸುದ್ದಿಗಳ ಮೇಲೆ ಕ್ಲಿಕ್ ಮಾಡಿ.
- ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.
- “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.
- ಸರಸ್ವತಿ ಪಿ.ಯು ಕಾಲೇಜಿನಲ್ಲಿ ‘ಸಂಸ್ಕಾರಧಾರೆ’ ಅರ್ಥಪೂರ್ಣ ಕಾರ್ಯಕ್ರಮ
ಗೋಕರ್ಣ ಕೇವಲ ಧಾರ್ಮಿಕ ಕ್ಷೇತ್ರ ಮಾತ್ರ ಆಗಿರದೇ ಪ್ರವಾಸಿ ಸ್ಥಳವೂ ಸಹ ಆಗಿದೆ. ಹೀಗಿರುವಾಗ ದೇವಸ್ಥಾನದ ಒಳಗೆ ಮಾತ್ರ ಸೀಮಿತವಾಗಿದ್ದ ವಸ್ತ್ರ ಸಂಹಿತೆ ಇದೀಗ ಸಾರ್ವಜನಿಕ ಪ್ರದೇಶಕ್ಕೂ ಅಳವಡಿಸಿರುವುದು ವಿವಾದ ಹುಟ್ಟುಹಾಕಿತ್ತು. ರಥ ಬೀದಿಯಿಂದ ಕಡಲ ತೀರ ಇತರೆ ಸ್ಥಳಗಳಿಗೆ ಸಾರ್ವಜನಿಕರು ತೆರಳುವ ರಸ್ತೆ ಮಾರ್ಗದಲ್ಲಿ ಸಮಿತಿಯವರು ಸೂಚನಾ ಫಲಕ ಅಳವಡಿಕೆ ಮಾಡಿದ್ದರಿಂದ ಸಾಕಷ್ಟು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.
ಇದಲ್ಲದೇ ಕುದ್ದು ಕಮಿಟಿಯ ಸದಸ್ಯರಾಗಿರುವ ಡಿ.ಸಿಯವರಿಗೂ ಸಹ ಮಾಹಿತಿ ನೀಡಿರಲಿಲ್ಲ. ಇನ್ನು ಈ ಕುರಿತು ಪ್ರತಿಕ್ರಿಯೆ ನೀಡಿದ ಜಿಲ್ಲಾಧಿಕಾರಿ ಪಭುಲಿಂಗ ಕವಲಿಕಟ್ಟಿ ನನಗೆ ಇದರ ಬಗ್ಗೆ ಯಾವುದೇ ಮಾಹಿತಿ ಇರಲಿಲ್ಲ, ಹೀಗೆ ಫಲಕ ಹಾಕಿದ್ದು ಅಕ್ಷಮ್ಯ. ಫಲಕ ತೆಗೆದುಹಾಕಲು ಸೂಚನೆ ನೀಡಲಾಗಿದೆ. ಮುಂದಿನ ವಾರದಲ್ಲಿ ಖುದ್ದಾಗಿ ದೇವಸ್ಥಾನಕ್ಕೆ ಬೇಟಿ ನೀಡಿ ವ್ಯವಸ್ಥೆ ಬಗ್ಗೆ ಪರಿಶೀಲಿಸುತ್ತೇನೆ ಎಂಬುದಾಗಿ ತಿಳಿಸಿದ ಬಗ್ಗೆ ವರದಿಯಾಗಿದೆ.