ಸಿದ್ದಾಪುರ : ಗ್ರಾಮದ ಮಸೀದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕುರಿತು ಇತ್ತೀಚಿಗೆ ನಡೆದ ಗಲಾಟೆಯು ತೀವೃ ಸ್ವರೂಪ ಪಡೆಯುವ ಲಕ್ಷಣಗಳು ಕಾಣುತ್ತಿದ್ದು,ತಾಲೂಕಿನ ಅರೇಂದೂರಲ್ಲಿ ಎರಡು ಗುಂಪಿನ ನಡುವೆ ನಡೆದ ಗಲಾಟೆಯು ಹೊಡೆದಾಟವಾಗಿ ಮುಂದುವರೆದು ಮೂವರಿಗೆ ಗಾಯಗಳಾದ ಘಟನೆ ನಡೆದ ಬಗ್ಗೆ ವರದಿಯಾಗಿದೆ.
ಅರೇಂದೂರ್ ಗ್ರಾಮದ ಮಸೀದಿಯ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಕುರಿತು ಇತ್ತೀಚಿಗೆ ಗಲಾಟೆ ಮಾಡಿಕೊಂಡು ಗ್ರಾಮದಲ್ಲಿ ಎರಡು ಗುಂಪುಗಳಾಗಿ ವೈಷಮ್ಯ ಬೆಳೆದಿತ್ತು. ಇದೀಗ ಗಲಾಟೆ ಪ್ರಾರಂಭವಾಗಿ ಹೊಡೆದಾಡಿಕೊಂಡಿದ್ದು ಮೂವರಿಗೆ ಗಂಭೀರ ಗಾಯಗಳಾಗಿವೆ. ಘಟನೆಗೆ ಸಂಬoಧಿಸಿದoತೆ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ದೂರು ಪ್ರತಿದೂರು ದಾಖಲಿಸಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.