ದಾಂಡೇಲಿ: ಯಾವುದೋ ವಿಷಯಕ್ಕೆ ಮನನೊಂದ ಯುವಕನೋರ್ವ ಡೀಸೆಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಗರದ ಮಾರುತಿ ನಗರದಲ್ಲಿ ಶುಕ್ರವಾರ ನಡೆದಿದೆ. 27 ವರ್ಷ ವಯಸ್ಸಿನ ಶ್ಯಾಮನ್ ಗೌಡ ಪಾಟೀಲ್ ಎಂಬಾತನೇ ಆತ್ಮಹತ್ಯೆಗೆ ಯತ್ನಿಸಿದ ಯುವಕನಾಗಿದ್ದಾನೆ. ಈತ ಅವಿವಾಹಿತನಾಗಿದ್ದು, ವೆಸ್ಟ್ ಕೋಸ್ಟ್ ಕಾಗದ ಕಾರ್ಖಾನೆಯ ಅಗ್ನಿಶಾಮಕ ದಳದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದನು.

RELATED ARTICLES  ಕುಮಟಾದ ಪ್ರಸಿದ್ಧ ಟೈಲರ್ ' ಲೀಸ್ ಡ್ರೆಸಸ್' ನ ಮಾಲಿಕ ಸುರೇಶ ಭಂಡಾರಿ ಇನ್ನಿಲ್ಲ.

ಕಳೆದ ಆರು ತಿಂಗಳ ಹಿಂದೆಯಷ್ಟೆ ಈತನ ತಂದೆ ವಿಧಿವಶರಾಗಿದ್ದರು. ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಮನೆಯಲ್ಲಿ ಯಾರು ಇಲ್ಲದಿದ್ದ ಸಮಯದಲ್ಲಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎನ್ನಲಾಗಿದೆ.
ಡೀಸೆಲ್ ಸುರಿದುಕೊಂಡು ಬೆಂಕಿ ಹಚ್ಚಿ, ಬೆಂಕಿಯ ಜ್ವಾಲೆಗೆ ಓಡುತ್ತಿದ್ದ ಈತನನ್ನು ಸ್ಥಳೀಯರು ಹಿಡಿದು, ಬೆಂಕಿ ನಂದಿಸಿ, ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆಯನ್ನು ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ರವಾನಿಸಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

RELATED ARTICLES  ಲೈಫ್ ಗಾರ್ಡ್ಗಳ ಜೊತೆ ಪ್ರವಾಸಿಗರ ಅನುಚಿತ ವರ್ತನೆ..!