ಶಿರಸಿ: ಜಿಲ್ಲೆಯ ಶಕ್ತಿ ಸ್ಥಳವೆನಿಸಿದ ಕೊಳಗಿಬೀಸ್ ಮಾರುತಿ ದೇವಾಲಯದ ಶ್ರೀದೇವರಿಗೆ ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ್ ರಜತ ಕವಚವನ್ನು ಶನಿವಾರ ಕುಟುಂಬ ಸಮೇತ ವಿದ್ವಜ್ಜನರ ಸಮ್ಮುಖದಲ್ಲಿ ಸಮರ್ಪಿಸಿದರು.

ಈ ವೇಳೆ ಮಾತನಾಡಿದ ಅವರು, ಈ ಮುಂಚೆ ಯೋಜಿಸಿದ ಹಾಗೆ ಕಾರ್ತೀಕ ಮಾಸದ ಈ ಶುಭ ಸಂದರ್ಭದಲ್ಲಿ ಶಕ್ತಿಕೇಂದ್ರವಾದ ಮಾರುತಿ ದೇವರಿಗೆ 6 ಕೆ.ಜಿ. ರಜತ ಪೀಠವನ್ನು ಸಮರ್ಪಿಸಿದ್ದೇನೆ. ಮುಖ್ಯ ಅರ್ಚಕರಾದ ಕುಮಾರ ಭಟ್ಟರ ಮಾರ್ಗದರ್ಶನದಲ್ಲಿ ರಜತ ಪೀಠದ ಎಲ್ಲ ಯೋಜನೆಗಳು ನಡೆದಿದ್ದು, ಇಂದು ಅವರ ನೇತೃತ್ವದಲ್ಲಿಯೇ ಸಮರ್ಪಣೆಯ ಕಾರ್ಯ ನಡೆದಿದೆ. ನಾಡಿನ ಸಮಸ್ತ ಜನರಿಗೆ ಶ್ರೀದೇವರು ಮಂಗಲವನ್ನು ಉಂಟುಮಾಡಲಿ ಎಂದರು.

RELATED ARTICLES  ಇಂದಿನ(ದಿ-12/03/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ

ಈ ವೇಳೆ ಶ್ರೀನಿವಾಸ ಹೆಬ್ಬಾರ್ ಕುಟುಂಬಸ್ಥರು, ದೇವಾಲಯದ ಅಧ್ಯಕ್ಷರು, ಒಡನಾಡಿಗಳು ಹಾಗು ಹಿತೈಷಿಗಳು ಇದ್ದರು.