ಭಟ್ಕಳ: ಮಂಕಿಯಿಂದ ಭಟ್ಕಳಕ್ಕೆ ಬರುವ ವಿದ್ಯಾರ್ಥಿಗಳಿಗೆ ಹೆಚ್ಚಿನ ಬಸ್ ಬಿಡುವ ಹಾಗೂ ಸಮಯಕ್ಕೆ ಸರಿಯಾಗಿ ಎರಡು ಹೆಚ್ಚುವರಿ ಬಸ್ ವ್ಯವಸ್ಥೆ ಕಲ್ಪಿಸುವ ಕುರಿತು ಮಂಕಿಭಾಗದ ವಿದ್ಯಾರ್ಥಿಗಳು ಶುಕ್ರವಾರದಂದು ಭಟ್ಕಳ ಕೆ.ಎಸ್.ಆರ್.ಟಿ.ಸಿ. ಡಿಪೋ ಮ್ಯಾನೇಜರ್‌ಗೆ ಮನವಿ ಸಲ್ಲಿಸಿದರು. ಮಂಕಿ ವ್ಯಾಪ್ತಿಯ ಸರಿಸುಮಾರು ನೂರಕ್ಕೂ ಅಧಿಕ ಶಾಲಾ ಕಾಲೇಜು ವಿದ್ಯಾರ್ಥಿಗಳು ಪ್ರತಿನಿತ್ಯ ಬಸ್ ಮೂಲಕ ಭಟ್ಕಳಕ್ಕೆ ಬಂದು ಭಟ್ಕಳದ ವಿವಿಧ ಶಾಲಾ ಕಾಲೇಜುಗಳಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಆದರೆ ಈ ಭಾಗದಿಂದ ಬರುವ ವಿದ್ಯಾರ್ಥಿಗಳಿಗೆ ಸಮಯಕ್ಕೆ ಸರಿಯಾಗಿ ಕಾಲೇಜಿಗೆ ತಲುಪಲು ಸಾಧ್ಯವಾಗುತ್ತಿಲ್ಲ.
ಸದ್ಯಕ್ಕೆ ಬೆಳಿಗ್ಗೆ 7.15 ರಿಂದ 9 ಗಂಟೆಯವರೆಗೆ ಕೇವಲ ಎರಡು ಬಸ್ ಸಂಚರಿಸುತ್ತಿದ್ದು, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ .ಇದರಿಂದ ಅನೇಕ ವಿದ್ಯಾರ್ಥಿಗಳು ಸರಿಯಾದ ಸಮಯಕ್ಕೆ ತರಗತಿ ತಲುಪಲು ಸಾಧ್ಯವಾಗುತ್ತಿಲ್ಲ.
ಸದ್ಯಕ್ಕೆ 7.15 ರಿಂದ 9ಗಂಟೆವರೆಗೆ ಬರುತ್ತಿದ್ದ 2 ಬಸ್ ಗಳ ಜೊತೆಗೆ 7.40 ಮತ್ತು 8.20ಕ್ಕೆ ಬಸ್ ಬಿಟ್ಟಿದ್ದಲ್ಲಿ ವಿದ್ಯಾರ್ಥಿಗಳಿಗೆ ಸರಿಯಾದ ಸಮಯಕ್ಕೆ ತರಗತಿ ತಲುಪಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ. ಮತ್ತು ಈ ಹಿಂದೆ ಸಾಕಷ್ಟು ಬಾರಿ ಕೆಲ ಬಸ್ ಚಾಲಕರು ವಿದ್ಯಾರ್ಥಿಗಳು ಬಸ್ ಗಾಗಿ ಕಾಯುತ್ತಿರುವ ವೇಳೆ ಈ ಬಸ್ಸಿಗೆ ಕೈ ಮಾಡಿದ ವೇಳೆಯಲ್ಲಿ ವಿದ್ಯಾರ್ಥಿಗಳ ಮೇಲೆ ಬಸ್ ಚಾಲಕ ಬಸ್ ಸಾಯಿಸಲು ಪ್ರಯತ್ನಿಸಿದ ಘಟನೆಗಳು ಕೆಲವು ಬಾರಿ ನಡೆದಿದೆ. ಇಂಥಹ ಚಾಲಕರ ವಿರುದ್ಧ ಅಧಿಕಾರಿಗಳು ಕ್ರಮಕ್ಕೆ ಮುಂದಾಗುವಂತೆಯೂ ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಮನವಿ ಸ್ವೀಕರಿಸಿದ ಡೀಪೋ ಮ್ಯಾನೆಜರ್ ದಿವಾಕರ, ಮಂಕಿಯಿಂದ ಭಟ್ಕಳಕ್ಕೆ ಬರುವ ಕಾಲೇಜು ವಿದ್ಯಾರ್ಥಿಗಳಿಗೆ ಪ್ರತಿದಿನ ಕಾಲೇಜಿಗೆ ಬರಲು ಬಸ್ ಸಮಸ್ಯೆ ಇರುವ ಬಗ್ಗೆ ಮನವಿ ನೀಡಿದ್ದಾರೆ. ಸದ್ಯ ಬರುತ್ತಿರುವ ಎರಡು ಬಸ್ ಗಳ ನಡುವೆ ಬಹಳ ಸಮಯದ ಅಂತರವಿರುವ ಬಗ್ಗೆ ನಮ್ಮ ಗಮನಕ್ಕೆ ತಂದಿದ್ದು. ಈ ಬಗ್ಗೆ ಈಗಾಗಲೇ ಮೇಲಾಧಿಕಾರಿಗಳೊಂದಿದೆ ಚರ್ಚಿಸಿ ತಡವಾಗಿ ಬರುವ ಬಸ್ ಅನ್ನು ಬೇಗನೆ ಬರುವ ಹಾಗೆ ಮಾಡಿ ವಿದ್ಯಾರ್ಥಿಗಳಿಗೆ ಸೋಮವಾರದಿಂದ ಅನುಕೂಲವಾಗುವಂತೆ ಮಾಡುವುದಾಗಿ ಹೇಳಿದರು.
ಈ ವೇಳೆ ಮಂಕಿ ಭಾಗದ ಕಾಲೇಜು ವಿದ್ಯಾರ್ಥಿಗಳಾದ ಸಾಯಿ ಗಣೇಶ, ಗಣಪತಿ ನಾಯ್ಕ, ವಿವೇಕ ನಾಯ್ಕ, ಶೋನ್ ಡಾಯಸ್, ಮನೋಜ ನಾಯ್ಕ, ಪುನೀತ ನಾಯ್ಕ, ರಂಜನ ನಾಯ್ಕ ಹಾಗೂ ಅನೇಕ ಕಾಲೇಜು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.