ಕುಮಟಾ ; ಭಾರತೀಯ ಗೋ ತಳಿಗಳನ್ನು ಉಳಿಸಿ ಬೆಳೆಸುವ ದೃಷ್ಟಿಯಿಂದ ಗೋ ಸಂಜೀವಿನಿ ಹಾಗೂ ಅಭಯಾಕ್ಷರ ಅಭಿಯಾನ ಕಾರ್ಯಕ್ರಮವನ್ನು ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಶ್ರೀ ಶಾಂತಿಕಾ ಪರಮೇಶ್ವರಿ ದೇವಾಲಯದಲ್ಲಿ ಆಯೋಜಿಸಲಾಗಿತ್ತು. ಗೋ ಸಂಜಿವಿನಿ ಹಾಗೂ ಅಭಯಾಕ್ಷರ ಅಭಿಯಾನಕ್ಕೆ ಹಳದೀಪುರ ಮಠದ ಶ್ರೀ ಶ್ರೀ ವಾಮನಾಶ್ರಮ ಸ್ವಾಮೀಜಿಗಳು ದೀಪ ಪ್ರಜ್ವಲನ, ಅಭಯಾಕ್ಷರ, ಹಾಗೂ ಗೋ ಸಂಜೀವಿನಿಗೆ ಸಮರ್ಪಣೆ ಮಾಡುವ ಮೂಲಕ ಅಭಿಯಾನವನ್ನು ಉದ್ಘಾಟಿಸಿದರು.

IMG 20171002 123253

ನಂತರ ಗೋ ಸಂದೇಶ ನೀಡಿದ ಅವರು “ಗೋವು ನಮ್ಮ ತಾಯಿ, ಅದನ್ನು ಉಳಿಸುವ ಗುರುತರ ಜವಾಬ್ಧಾರಿ ನಮ್ಮ ಮೇಲಿದೆ. ನಮ್ಮನ್ನು ಆಳುವವರು ಹುಲಿಗೆ ನೀಡಿದ ಮಹತ್ವವನ್ನು ಗೋವಿಗೆ ನೀಡುತ್ತಿಲ್ಲ. ಈ ಮನಸ್ಥಿತಿ ಬದಲಾಗಬೇಕು. ಗೋವಿಲ್ಲದೇ ನಾವಿಲ್ಲ ಎಂಬ ಅರಿವು ಎಲ್ಲರಲ್ಲಿ ಮೂಡಬೇಕು. ಗೋ ಸಂರಕ್ಷಣೆಯಲ್ಲಿ ಭಾರತದ ಸಂರಕ್ಷಣೆಯಿದೆ. ಭಾರತೀಯ ಗೋವು ಅದು ಕಾಮಧೇನು ವಿದ್ದಂತೆ ಅದರ ಹಾಲು, ಗೋಮೂತ್ರ, ಗೋಮಯಗಳಿಗೆ ಬಹಳ ಮಹತ್ವ ವಿದೆ. ರಾಘವೇಶ್ವರ ಶ್ರೀ ಗಳ ಈ ಮಹಾ ಅಭಿಯಾನದಲ್ಲಿ ಕೈ ಜೋಡಿಸುವ ಮೂಲಕ ಗೋ ಸಂತತಿಯನ್ನು ಉಳಿಸಿ ಎಂದು ಕರೆ ನೀಡಿದರು. ರಾಜ್ಯ ಗೋ ಪರಿವಾರದ ಮುರಳೀಧರ ಪ್ರಭು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಶ್ರೀಧರ ಭಟ್ಟ ಗೋ ಪೂಜೆ ನಡೆಸಿಕೊಟ್ಟರು. ರವೀಂದ್ರ ಭಟ್ಟ ಸೂರಿ ಕಾರ್ಯಕ್ರಮ ನಿರೂಪಿಸಿದರು. ಸುಬ್ರಾಯ ಭಟ್ಟ ವಂದಿಸಿದರು. ನಂತರ ಕುಮಟಾ ಪಟ್ಟಣದಾದ್ಯಂತ ಮೆರವಣಿಗೆಯಲ್ಲಿ ಸಾಗಿ ಅಭಿಯಾನ ನಡೆಸಲಾಯಿತು. ಅಭಿಯಾನದಲ್ಲಿ ಸಂಗ್ರಹವಾದ ಗೋ ಸಂಜೀವಿನಿ ಕಾಣಿಕೆಯನ್ನು ಕೆಕ್ಕಾರಿನ ಶ್ರೀ ರಘೂತ್ತಮ ಮಠದಲ್ಲಿ ಕುಮಟಾ ಗೋ ಪರಿವಾರದ ಅಧ್ಯಕ್ಷ ಕಿಶನ್ ವಾಳ್ಕೆ ಹಾಗೂ ಸದಸ್ಯರು ರಾಘವೇಶ್ವರ ಶ್ರೀ ಗಳಿಗೆ ಸಮರ್ಪಿಸಿದರು. ಸ್ವೀಕರಿಸಿ ಮಾತನಾಡಿದ ಶ್ರೀ ಗಳು ಶ್ರೀ ಮಠ ಈಗಾಗಲೇ 1100 ಗೋವುಗಳನ್ನು ಈ ಯೋಜನೆಯಲ್ಲಿ ಖರೀದಿಸಿದ್ದು 1 ಕೋಟಿಗೂ ಅಧಿಕ ಹಣವನ್ನು ವೆಚ್ಚಮಾಡಲಾಗಿದೆ. ಕಸಾಯಿಖಾನೆಗೆ ಹೋಗುವ ಗೋವನ್ನು ಖರೀದಿಸುವ ,ಅದಕ್ಕೆ ಬದುಕುವ ಅವಕಾಶ ನೀಡುವ ಯೋಜನೆಯಲ್ಲಿ ಎಲ್ಲರೂ ಪಾಲ್ಗೊಳ್ಳುವಂತಾಗಲಿ. ಕುಮಟಾ ಗೋ ಪರಿವಾರದ ಈ ಕಾರ್ಯ ಶ್ಲಾಘನೀಯ ಎಂದರು.

RELATED ARTICLES  ಸುಗಮ ಸಂಗೀತ ಪರಿಷತ್ ಸುಗಮ ಸಂಗೀತವನ್ನು ಉಳಿಸಿಕೊಂಡು ಹೋಗಲು ಚಳುವಳಿ ರೂಪದಲ್ಲಿ ಕೆಲಸ ಮಾಡಿದೆ

ಈ ವೇಳೆ ರಾಜ್ಯ ಗೋ ಪರಿವಾರದ ಖಜಾಂಚಿ ಮುರಳೀಧರ ಪ್ರಭು ಮಾತನಾಡಿ ಗೋವಿನ ರಕ್ಷಣೆ ಕೇವಲ ಮಠದಿಂದ ಸಾಧ್ಯವಾಗದ ಕಾರಣ ಸಮುದಾಯದ ಬೆಂಬಲ ಬೇಕಾಗಿರುವುದರಿಂದ ಗೋ ಸಂಜಿವಿನಿ ಅಭಿಯಾನ ಹಮ್ಮಿಕೊಂಡಿದ್ದೇವೆ ಎಂದರು. ಇನ್ನೊಂದೆಡೆ, ಗೋ ಸಂಜೀವಿನಿ ಅಭಿಯಾನದ ರ್ಯಾಲಿ ಕುಮಟಾ ಪಟ್ಟಣದ ಮಧ್ಯೆ ಸಂಚರಿಸಿ ಕೊಲ್ಲುವ ಕೈಗಳಿಂದ ಕಾಯುವ ಕೈಗೆ ಒಪ್ಪಿಸುವ ಮಹತ್ಕಾರ್ಯದಲ್ಲಿ ಜನತೆ ಪಾಲ್ಗೊಂಡರು. ಈ ಅಭಿಯಾನದಲ್ಲಿ ಶ್ರೀ ಎನ್ ಆರ್ ಮುಕ್ರಿ, ದಿನಕರ ಶೆಟ್ಟಿ, ಸೂರಜ ನಾಯ್ಕ ಸೋನಿ ಹಾಗೂ ಇನ್ನಿತರ ಗಣ್ಯರು ಪಾಲ್ಗೋಡರು.

RELATED ARTICLES  ಚಿತ್ರಿಗಿ: ಹಬ್ಬದ ಖಾದ್ಯ ಸವಿದ ಸಂಭ್ರಮ: ನೈರ್ಮಲ್ಯ ಪಾಠ ಕಲಿಸಿದ ಮಕ್ಕಳ ಸಂತೆ