ಗೋಕರ್ಣ : ಇಲ್ಲಿನ ಕೋಟಿ ತೀರ್ಥದಲ್ಲಿ ಮುಳುಗಿ ಮಹಿಳೆಯೊಬ್ಬಳು ಸಾವನ್ನಪಿದ ಘಟನೆ ವರದಿಯಾಗಿದೆ. ಸಾವನ್ನಪಿದ ಮಹಿಳೆಯನ್ನು ಸ್ಥಳೀಯ ನಿವಾಸಿ ಸುಧಾ ಅನಂತ ಅಡ್ವೇಕರ್ ಎಂದು ಗುರುತಿಸಲಾಗಿದ್ದು, ಈಕೆ ಹೇಗೆ ನೀರಿನಲ್ಲಿ ಮುಳುಗಿದಳು ಎಂಬ ಬಗ್ಗೆ ಸ್ಪಷ್ಟತೆ ಸಿಗಬೇಕಾಗಿದೆ. ಈಕೆ ಕೋಟಿತೀರ್ಥದ ಸನಿಹವೇ ಇದ್ದು ಕಾರ್ಯ ಮಾಡುತ್ತಿದ್ದಳು ಎನ್ನಲಾಗಿದೆ. ಈಕೆ ಕೋಟಿತೀರ್ಥದ ಸ್ವಚ್ಚತೆ ನೋಡಿಕೊಂಡು ಅಪರ ಕರ್ಮ ಮಾಡಿಸಿದವರ ಬಳಿ ಪಾವತಿ ನೀಡಿ ನಿಗದಿತ ಹಣ ತೆಗೆದುಕೊಂಡು , ಯಾತ್ರಿಕರಿಗೆ ಜಾಗ್ರತಿ ಮೂಡಿಸಿತ್ತ ಅತ್ಯುತ್ತಮ ಸೇವೆ ನೀಡುತ್ತಿದ್ದವಳಾಗಿದ್ದಳು.
ಕೋಟಿತೀರ್ಥ ಸ್ವಚ್ಚತೆಗೆ ಪ್ರಾಮಾಣಿಕ ಕಾಳಜಿವಹಿಸಿ ಸ್ನಾನ ಮಾಡುವವರು, ಬಟ್ಟೆ ತೊಳೆವವರು, ಸೋಪು ಬಳಸದಂತೆ ನೋಡಿಕೊಂಡು ನೀರು ಅತೀ ಹಾಳಾಗದಂತೆ ನೋಡಿಕೊಂಡವರಲ್ಲಿ ಈಕೆ ಅಗ್ರಳಾಗಿದ್ದರು ಎನ್ನಲಾಗಿದೆ.
ಕಳೆದ ಸುಮಾರ 20-25 ವರ್ಷದಿಂದ ದಿನ ಬೆಳಗಿಂದ ಸಾಯಂಕಾಲ ದ ತನಕ ಇಡೀ ಕೋಟಿತೀರ್ಥ ಸುತ್ತುತ್ತ ಇರುತ್ತಿದ್ದ ಸುಧಾ ಅಡಪೇಕರ ನೀರಿನಲ್ಲಿ ಬಿದ್ದು ಸಾವನ್ನಪಿದ್ದಾಳೆ. ಸುಧಾ ಮಧ್ಯರಾತ್ರಿ ಮನೆಯಿಂದ ಬಂದು ಹಾರಿಕೊಂಡಳೋ ಅಥವಾ ಇನ್ಮೇನು ನಡೆದಿದೆ ಎಂಬ ಬಗ್ಗೆ ಪೊಲೀಸ್ ತನಿಕೆಯಿಂದ ತಿಳಿಯಬೇಕಿದೆ. ಪೊಲೀಸರು ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಮುಂದಿನ ಪ್ರಕ್ರಿಯೆ ಕೈಗೊಂಡಿದ್ದಾರೆ. ಪೊಲೀಸ್ ತನಿಖೆ ಪೂರ್ಣವಾಗಿ ವರದಿಯ ನಂತರದಲ್ಲಿಯೇ ಸಾವಿಗೆ ನಿಖರ ಕಾರಣಗಳು ತಿಳಿಯಬೇಕಿದೆ.
……. ಇದನ್ನೂ ಓದಿ ……