ಕುಮಟಾ: ಪಿಯು ವಿದ್ಯಾರ್ಥಿಗಳ ತಾಲ್ಲೂಕು ಮಟ್ಟದ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ.ಕೆ.ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನ ಪ್ರಥಮ ಮತ್ತು ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ಅತ್ಯದ್ಭುತ ಸಾಧನೆ ಮಾಡಿ ಜಿಲ್ಲಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.
ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕು. ಅದ್ವೈತ ಮತ್ತು ಕು. ರಂಗನಾಥ ಪ್ರಥಮ ಸ್ಥಾನ, ಇಂಗ್ಲೀಷ್ ಪ್ರಬಂಧದಲ್ಲಿ ಕು. ಆ್ಯಂಡ್ರಿಯಾ ವಿ. ಪ್ರಥಮ ಸ್ಥಾನ, ಕನ್ನಡ ಭಾಷೆಯ ಚರ್ಚಾ ಸ್ಪರ್ಧೆಯಲ್ಲಿ ಕು. ಅನೀಷಾ ಪ್ರಥಮ ಸ್ಥಾನ, ಇಂಗ್ಲೀಷ್ ಭಾಷೆಯ ಚರ್ಚಾ ಸ್ಪರ್ಧೆಯಲ್ಲಿ ಕು. ಆ್ಯಂಡ್ರಿಯಾ ಜಿ. ಪ್ರಥಮ ಸ್ಥಾನ, ಚಿತ್ರಕಲೆಯಲ್ಲಿ ಸೊನಾಲಿ ಪ್ರಥಮ ಸ್ಥಾನ, ಏಕಪಾತ್ರಾಭಿನಯದಲ್ಲಿ ಕು. ಶಿವಾನಿ ದ್ವಿತೀಯ ಸ್ಥಾನ ಹಾಗೂ ಜಾನಪದಗೀತೆಯಲ್ಲಿ ಕು. ಗ್ರೀಷ್ಮಾ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗಾಗಿ ನಡೆದ ರಸಪ್ರಶ್ನೆ ಸ್ಪರ್ಧೆಯಲ್ಲಿ ಕು. ಪ್ರಾಪ್ತಿ ಮತ್ತು ಕು. ರಾಹುಲ್ ಪ್ರಥಮ ಸ್ಥಾನ, ಇಂಗ್ಲೀಷ್ ಭಾಷೆಯ ಚರ್ಚಾ ಸ್ಪರ್ಧೆಯಲ್ಲಿ ಕು. ಅನುಷಾ ಪ್ರಥಮ ಸ್ಥಾನ, ಏಕಪಾತ್ರಾಭಿನಯದಲ್ಲಿ ಕು. ಶುಭಾ ಪ್ರಥಮ ಸ್ಥಾನ, ಜಾನಪದಗೀತೆಯಲ್ಲಿ ಕು. ಅಕ್ಷತಾ ಪ್ರಥಮ ಸ್ಥಾನ, ಭಕ್ತಿಗೀತೆಯಲ್ಲಿ ಕು. ಪೂರ್ವ ಪ್ರಥಮ ಸ್ಥಾನ, ಆಶುಭಾಷಣದಲ್ಲಿ ಕು. ಅನನ್ಯ ಪ್ರಥಮ ಸ್ಥಾನ, ಇಂಗ್ಲೀಷ್ ಪ್ರಬಂಧದಲ್ಲಿ ಕು. ಸಿಂಚನಾ ದ್ವಿತೀಯ ಸ್ಥಾನ ಹಾಗೂ ಚಿತ್ರಕಲೆ ಸ್ಪರ್ಧೆಯಲ್ಲಿ ಕು. ಚಿನ್ಮಯ ದ್ವಿತೀಯ ಸ್ಥಾನ ಪಡೆದಿರುತ್ತಾರೆ.
ಇದನ್ನೂ ಓದಿ
- ಸಂಸದ ಕಾಗೇರಿಯವರ ಮನೆ ಸಮೀಪ ಚಿರತೆ ಪ್ರತ್ಯಕ್ಷ.
- “ತರಂಗ ಫರ್ನಿಚರ್ ಫೆಸ್ಟಿವಲ್” ಪ್ರಾರಂಭವಾಗಿದೆ.
- ಸರಸ್ವತಿ ಪಿ.ಯು ಕಾಲೇಜಿನಲ್ಲಿ ‘ಸಂಸ್ಕಾರಧಾರೆ’ ಅರ್ಥಪೂರ್ಣ ಕಾರ್ಯಕ್ರಮ
- ಸಮುದ್ರದಲ್ಲಿ ಮುಳುಗುತ್ತಿರುವ ನಾಲ್ವರ ರಕ್ಷಣೆ
- ಮೊಬೈಲ್ ರಿಪೇರಿ, ಸೇವೆ ಕುರಿತ ಉಚಿತ ತರಬೇತಿ
ವಿದ್ಯಾರ್ಥಿಗಳ ಈ ಸಾಧನೆಗೆ ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ. ಗುರುರಾಜ ಶೆಟ್ಟಿ, ಪ್ರಾಂಶುಪಾಲರಾದ ಶ್ರೀ. ಕಿರಣ ಭಟ್ಟ, ಉಪಪ್ರಾಂಶುಪಾಲರಾದ ಶ್ರೀಮತಿ. ಸುಜಾತಾ ಹೆಗಡೆ, ಸಾಂಸ್ಕೃತಿಕ ಚಟುವಟಿಕೆಗಳ ಸಂಯೋಜಕರಾದ ಕವಿತಾ ಗೌಡ ಹಾಗೂ ಬೋಧಕ, ಬೋಧಕೆತರ ಸಿಬ್ಬಂದಿಗಳು ಹರ್ಷವನ್ನು ವ್ಯಕ್ತಪಡಿಸಿದ್ದಾರೆ.