ಭಟ್ಕಳ: ಶ್ರೀ ಗುರು ಸುಧೀಂದ್ರ ಕಾಲೇಜು ಸಿಬ್ಬಂದಿಗಳು ಪದವಿ ಕಾಲೇಜಿನ ವಿದ್ಯಾರ್ಥಿಗಳು, ಪಾಲಕರಿಗೆ, ಸಾರ್ವಜನಿಕರಿಗೆ ಟ್ರಾಫಿಕ್ ಬಗ್ಗೆ ಅರಿವು ಮೂಡಿಸುವ ಜೊತೆಯಲ್ಲಿ ವಿಶೇಷವಾಗಿ ದ್ವಿಚಕ್ರ ವಾಹನ ಸವಾರರು ಹೆಲ್ಮೆಟ್ (ಶಿರಸ್ತ್ರಾಣ) ಧರಿಸಿ ವಾಹನ ಚಲಾಯಿಸುವಂತೆ ಪ್ರೇರೇಪಿಸಿದರು. ಕಾಲೇಜಿನ ಶೇ.100 ಸಿಬ್ಬಂದಿಗಳು ಪ್ರತಿದಿನ ಹೆಲ್ಮೆಟ್ ಧರಿಸಿ,ದ್ವಿಚಕ್ರ ವಾಹನ ಚಲಾಯಿಸಿ ವಿದ್ಯಾರ್ಥಿಗಳಿಗೂ ಹೆಲ್ಮೆಟ್ ಧರಿಸುವಂತೆ ಪ್ರೇರೇಪಿಸುತ್ತಿದ್ದು ಇಂದು ತಮ್ಮ ತಮ್ಮ ದ್ವಿಚಕ್ರ ವಾಹನದ ಜೊತೆಯಲ್ಲಿ, ಹೆಲ್ಮೆಟ್ ಸಹಿತ ನಿಂತುಕೊಂಡು ಸರ್ವರಿಗೂ ಪ್ರೇರೇಪಿಸಿದರು.