ಹೊನ್ನಾವರ : ರಾಷ್ಟ್ರೀಯ ಮೀನುಗಾರರ ಸಂಘಟನೆ ಹಾಗೂ ಅಳ್ಳಂಕಿಯ ಸ್ವಂದನ ಸಮಾಜ ಸೇವಾ ಬಳಗ,ಮತ್ತು ಹೊನ್ನಾವರಕಾಸರಕೋಡಿನ ವಿವಿಧ ಮೀನುಗಾರರ ಸಂಘಟನೆಗಳು ಹಾಗೂ ಗ್ರಾಮ ಪಂಚಾಯತ ಕಾಸರಕೋಡ,ಸ್ನೇಹ ಕುಂಜ ಕಾಸರಕೋಡ, Invayas ಅಳ್ಳಂಕಿ, Tagskill ಕಾರ್ಕಳ, ರಾಯ್ಕರ ಮೆಡಿಕಲ್ಸ್ ಹೊನ್ನಾವರ,ಸಹಯೋಗದಲ್ಲಿ ಕಾಸರಕೋಡಿನಲ್ಲಿ ಏಜೆ ವೈದ್ಯಕೀಯ ಮತ್ತು ದಂತ ಮಹಾವಿದ್ಯಾಲಯದ ತಜ್ಞ ವೈದ್ಯರ ನೇತೃತ್ವದಲ್ಲಿ ರವಿವಾರ ಇಲ್ಲಿ ಆಯೋಜಿಸಿದ
ಉಚಿತ ವೈದ್ಯಕೀಯ ತಪಾಸಣೆ ಮತ್ತು ದಂತ ಚಿಕಿತ್ಸಾ ಶಿಬಿರವು ಅತ್ಯಂತ ಯಶಸ್ವಿಯಾಗಿ ಸಂಪನ್ನಗೊಂಡಿದೆ.
ಭಾನುವಾರ -ಬೆಳಿಗ್ಗೆ 9.00 ಕ್ಕೆ ತಾಲೂಕಿನ ಕಾಸರಕೋಡಿನ ಸ್ನೇಹಕುಂಜದವಿವೇಕಾನಂದ ಆರೋಗ್ಯಧಾಮದಲ್ಲಿ ಆರಂಭಗೊಂಡ ಶಿಬಿರದಲ್ಲಿ 416 ಕ್ಕೂ ಹೆಚ್ಚು ಸಂಖ್ಯೆಯಲ್ಲಿ ಜನರು ತಮ್ಮ ಅರೋಗ್ಯದ ತಪಾಸಣೆಗೆ ಒಳಗಾಗಿ ಹಲವರು ಉಚಿತ ಔಷಧಿ ಪಡೆದರೆ, 82 ಜನ ಕನ್ನಡಕದ ಸೌಲಭ್ಯವನ್ನು ಪಡೆದುಕೊಂಡರು. 94 ಜನರು ಉಚಿತ ದಂತ ಚಿಕಿತ್ಸೆ ಪಡೆದುಕೊಂಡಿದ್ದು 36 ಜನ ಉಚಿತ ಇಸಿಜಿ ಪರಿಕ್ಷೆ ಸೌಲಭ್ಯ ಪಡೆದುಕೊಂಡಿದ್ದಾರೆ.. ಶಿಬಿರದಲ್ಲಿ ಸಾಮಾನ್ಯ ಆರೋಗ್ಯ ತಪಾಸಣೆ, ಮಕ್ಕಳ ಆರೋಗ್ಯ ತಪಾಸಣೆ , ಹೃದಯ ಸಂಬಂದಿಕಾಯಿಲೆ, ಕಣ್ಣಿನ ತಪಾಸಣೆ, ಸಂದು ವಾತ-ಎಲುಬು ಮತ್ತು ಕೀಲುರೋಗ , ಚರ್ಮ ರೋಗ, ಮೂತ್ರಾಂಗ ರೋಗ ಇತ್ಯಾದಿ ಖಾಯಿಲೆಗಳಿಗೆ ಸಂಬಂಧಿಸಿ ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ಸೂಚಿಸಲಾಯಿತು.
ಶಿಬಿರದಲ್ಲಿ ಇಸಿಜಿ ಮತ್ತು ಮಧುಮೇಹ/ ( ಕಾಯಿಲೆ) ಪರಿಕ್ಷೆ , ನಡೆಸಿ ಕೆಲವು ಔಷಧಿಗಳನ್ನು ಉಚಿತವಾಗಿ ನೀಡಿದ್ದು 82 ಶಿಬಿರಾರ್ಥಿಗಳಿಗೆ ಉಚಿತ ಕನ್ನಡಕವನ್ನು ಪೂರೈಸಲು ಸ್ಪಂದನದ ಚಂದ್ರಕಾಂತ ಕೊಚರೇಕರ್ ನೇತ್ರತ್ವದಲ್ಲಿ ವಿವಿಧ ಸಂಘಟನೆಗಳು ಮತ್ತು ಕೆಲವರು ಸಹಕಾರ ನೀಡಿದ್ದು, ಶಿಬಿರ ಯಶಸ್ವಿಯಾಗಿ ಸಂಪನ್ನಗೊಂಡಿದೆ. ಕಾಸರಕೋಡಗ್ರಾಮ ಪಂಚಾಯತಿ ಅಧ್ಯಕ್ಷ ಮಂಜು ಗೌಡ, ತಾವು ಕಣ್ಣಿನ ತಪಾಸಣೆ ಮಾಡಿಕೊಳ್ಳುವ ಮೂಲಕ ಶಿಬಿರಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು.
ಈ ಸುದ್ದಿಗಳನ್ನೂ ಓದಲು ಸುದ್ದಿಗಳ ಮೇಲೆ ಕ್ಲಿಕ್ ಮಾಡಿ.
ಸ್ಪಂದನ ಬಳಗದ ಅಧ್ಯಕ್ಷ ಚಂದ್ರಕಾಂತ ಕೊಚರೇಕರ್ ,ಸ್ಥಳೀಯ ಮೀನುಗಾರ ಸಂಘಟನೆಗಳ ರಾಜೇಶ ತಾಂಡೇಲ , ಸ್ನೇಹ ಕುಂಜದ ಡಾ. ನಾರಾಯಣ ಹೆಗಡೆ, ಏಜೆ ಆಸ್ಪತ್ರೆಯ ಇನ್ಚಾರ್ಜ ಡಾ. ಶಂಭುಲಿಂಗ, ಕೊರ್ಡಿನೇಟರನವೀನ ಕುಮಾರ್ ಮತ್ತು ರಾಜೇಶ, ಡಾ. ಪ್ರವೀಣ, ಡಾ. ಶೃತಿ , ಡಾ.ದೀಪಕ ನಾಯಕ,ಸ್ಥಳೀಯ ಧುರೀಣರಾದ ಗಣಪತಿ ತಾಂಡೇಲ, ಪ್ರೀತಿ ತಾಂಡೇಲ, ಜಗದೀಶ ತಾಂಡೆಲ . ವಿವನಫನಾಂಡಿಸ್, ಸ್ಪಂದನದ ಜಿ.ಟಿ. ಹಳ್ಳೇರ, ನಾರಾಯಣ ನಾಯ್ಕ, ಎಂ.ಟಿ.ನಾಯ್ಕ, ಸಿಸ್ಟರ್ ಸರಿತಾ, ರೇಣುಗಂಪಾ, ದಮಯಂತಿ,ಮತ್ತು ಹೆಲ್ಪ ಗ್ರೂ ಫ್ ತಂಡ ಮತ್ತು ಸ್ನೇಹ ಕುಂಜದ ಸಿಬ್ಬಂದಿ ಬಳಗ ಇನ್ನು ಮುಂತಾದವರು ಶಿಬಿರದ ನೇತ್ರತ್ವ ವಹಿಸಿ ಸಹಕರಿಸಿದರು.