ಕುಮಟಾ : ಹವ್ಯಕ ಮಹಾಮಂಡಲದ ನಿರ್ದೇಶನದಂತೆ ಕುಮಟಾ ಮಂಡಲಾಂತರ್ಗತ ಮೂರೂರು ಕಲ್ಲಬ್ಬೆ ವಲಯದ ವಲಯ ಮಟ್ಟದ ಪ್ರತಿಭಾದರ್ಶನ ಕಾರ್ಯಕ್ರಮವು ದಿನಾಂಕ 13/11/22 ರಂದು ಪ್ರಗತಿ ವಿದ್ಯಾಲಯದಲ್ಲಿ ಯಶಸ್ವಿಯಾಗಿ ನೆರವೇರಿತು. ಜ್ಯೋತಿ ಬೆಳಗಿ, ಗುರುವಂದನೆ, ಫಲಸಮರ್ಪಣೆಯೊಂದಿಗೆ ಕಾರ್ಯಕ್ರಮವನ್ನು ಆರಂಭಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮಕ್ಕೆ ಶಿಕ್ಷಕರಾದ ಶ್ರೀ ಮಂಜುನಾಥ ಹೆಗಡೆ ಕಲ್ಲಬ್ಬೆ ಎಲ್ಲರನ್ನೂ ಸ್ವಾಗತಿಸಿದರು. ಕುಮಟಾ ಮಂಡಲದ ಉಪಾಧ್ಯಕ್ಷರಾದ ಶ್ರೀ ಎಸ್ ವಿ ಹೆಗಡೆ ಭದ್ರನ್ ಇವರು ಪ್ರತಿಭಾ ದರ್ಶನದ ಉದ್ದೇಶವನ್ನು ಸಭೆಗೆ ತಿಳಿಸಿದರು. ಅಶೋಕೆಯ ವಿ ವಿ ವಿ ಪೀಠದ ಉಪಾಧ್ಯಕ್ಷರಾದ ಶ್ರೀ ಸುಬ್ರಾಯ ಭಟ್ಟ ಕೋಣಾರೆ ಅವರು ವಿದ್ಯಾರ್ಥಿಗಳು ಮತ್ತು ಯುವಕರಿಗೆ ಪ್ರೋತ್ಸಾಹದ ಮಾತುಗಳನ್ನಾಡಿದರು.

ಕಾರ್ಯಕ್ರಮದ ಮುಖ್ಯ ಸಂಚಾಲಕರಾದ ಶ್ರೀ ಎಮ್ ಐ ಭಟ್ಟ ಕಲ್ಲಬ್ಬೆ ಅವರು ಸ್ಪರ್ಧೆಯ ನಿಯಮಗಳು ಹಾಗೂ ಸ್ಪರ್ಧೆಯ ವಿಷಯಗಳನ್ನು ಮಕ್ಕಳಿಗೆ ಹಾಗೂ ನಿರ್ಣಾಯಕರಿಗೆ ತಿಳಿಸಿದರು. ಸಭೆಯ ಅಧ್ಯಕ್ಷತೆ ವಹಿಸಿದ್ದ ವಲಯ ಅಧ್ಯಕ್ಷರೂ ಆದ ಶ್ರೀ ಎಲ್ ಆರ್ ಹೆಗಡೆ ಅವರು ಮಾತನಾಡಿ ಸ್ಪರ್ಧಿಗಳು ಮಹಾಮಂಡಲದ ಮಟ್ಟದವರೆಗೂ ತಲುಪಿ ಅಲ್ಲಿಯೂ ಗೆದ್ದು ಬರುವಂತೆ ಹಾರೈಸಿದರು. ವಲಯದವರೆಲ್ಲ ಸೇರಿ ವಲಯ/ಮಂಡಲ/ಮಹಾಮಂಡಲ ಮಟ್ಟದವರೆಗೂ ಇದಕ್ಕೆ ಬೇಕಾದ ಸಂಪೂರ್ಣ ಸಹಕಾರ ನೀಡೋಣ ಎಂದರು.ಕಾರ್ಯಕ್ರಮದ ಸಂಘಟಕರಾದ ಕುಮಟಾ ಮಂಡಲ ಸೇವಾ ಪ್ರಧಾನ ಹಾಗೂ ವಲಯದಲ್ಲಿ ಗುರಿಕಾರರಾದ ಶ್ರೀ ಸುಬ್ರಹ್ಮಣ್ಯ ಹೆಗಡೆ (ಬಾಬಣ್ಣ) ಸಭೆಯಲ್ಲಿ ಉಪಸ್ಥಿತರಿದ್ದರು. ನಂತರ ಮಕ್ಕಳ ಪ್ರತಿಭಾ ದರ್ಶನ ಕಾರ್ಯಕ್ರಮ ನಡೆಯಿತು.ಹಲವಾರು ವಿಭಾಗಗಳಲ್ಲಿ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಸ್ಪರ್ಧಾತ್ಮಕ ಪ್ರದರ್ಶನ ನೀಡಿದರು.

RELATED ARTICLES  ಜ 23 ಕ್ಕೆ ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಸಲ್ಲಿಸಿದ ಅರ್ಜಿ ತೀವ್ರ ವಿಲೇವಾರಿ ಆಗಬೇಕೆಂದು ಆಗ್ರಹಿಸಿ ಬೃಹತ್ ಪ್ರತಿಭಟನಾ ರ್ಯಾಲಿ.

ತಂಡವಾಗಿ ನಡೆಸುವ ಕ್ರೀಡೆಗಳನ್ನು ಹೊರತುಪಡಿಸಿ ವೈಯಕ್ತಿಕ ಸ್ಪರ್ಧೆಗಳನ್ನು ನಡೆಸಲಾಯಿತು. ವಿವಿಧ ವಿಭಾಗಗಳಿಂದ ಮಕ್ಕಳು/ಯುವಕರು ಭಾಗವಹಿಸಿ ಮಂಡಲ ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾದರು. ಸ್ಪರ್ಧೆಗಳ ನಂತರ ಭಾಗವಹಿಸಿದ ಎಲ್ಲ ಮಕ್ಕಳಿಗೂ ಶ್ರೀ ಮಠದ ಗವ್ಯೋತ್ಪನ್ನ ವಸ್ತುಗಳನ್ನು ನೀಡಿ ಗೌರವಿಸಲಾಯಿತು.

ಈ ಸುದ್ದಿಗಳನ್ನೂ ಓದಲು ಸುದ್ದಿಯ ಮೇಲೆ ಕ್ಲಿಕ್ಕಿಸಿ.

ಕಾರ್ಯಕ್ರಮದಲ್ಲಿ ನಿರ್ಣಾಯಕರುಗಳಾಗಿ ವಲಯ ಧಾರ್ಮಿಕ ವಿಭಾಗದ ಶ್ರೀ ವಿನಾಯಕ ಭಟ್ಟ ಕಿನ್ನೀರು,ಶಿಕ್ಷಕರಾದ ಶ್ರೀ ಮಧುಕರ ಗಜಾನನ ಹೆಗಡೆ,ಶಿಕ್ಷಕರಾದ ಶ್ರೀ ಭರತ ಹೇರಂಭ ಭಟ್ಟ,ಶಿಕ್ಷಕರಾದ ಶ್ರೀ ಮಂಜುನಾಥ ಹೆಗಡೆ ಕಲ್ಲಬ್ಬೆ,ಶಿಕ್ಷಕರಾದ ಶ್ರೀ ಮಹೇಶ ಭಟ್ಟ ಕಲ್ಲಬ್ಬೆ, ಶಿಕ್ಷಕರಾದ ಶ್ರೀ ರಾಘವೇಂದ್ರ ಹೆಗಡೆ, ಮಾತೃವಿಭಾಗದಿಂದ ಶ್ರೀಮತಿ ಲತಾ ಗಣಪತಿ ಹೆಗಡೆ, ಶ್ರೀಮತಿ ಪ್ರತಿಭಾ ವಿಷ್ಣು ಹೆಗಡೆ ಇವರುಗಳು ತಮ್ಮ ತೀರ್ಪು ನೀಡಿ ಮುಂದಿನ ಹಂತಗಳಿಗೆ ಮಾರ್ಗದರ್ಶನ ನೀಡಿದರು.

RELATED ARTICLES  ಸತ್ಯವಾನ್ ಸಾವಿತ್ರಿ ಯಕ್ಷಗಾನ ಪ್ರದರ್ಶನ

ವಲಯದ ಕಾರ್ಯದರ್ಶಿ ಶ್ರೀ ರವಿ ಹೆಗಡೆ,ವಲಯದ ಕೋಶಾಧ್ಯಕ್ಷರಾದ ಶ್ರೀ ಭಾಸ್ಕರ ಭಟ್ಟ ,ವಲಯದ ಯುವ ಪ್ರಧಾನ ಶ್ರೀ ಸುರೇಶ ಭಟ್ಟ , ಗುರಿಕಾರರುಗಳು ಹಾಗೂ ಮಕ್ಕಳ ಪಾಲಕರು ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.

ಉಪಸ್ಥಿತರಿದ್ದ ಎಲ್ಲರಿಗೂ ಅಧ್ಯಕ್ಷರಾದ ಎಲ್ ಆರ್ ಹೆಗಡೆ ಅವರ ವತಿಯಿಂದ ಲಘು ಉಪಾಹಾರ ನೀಡಲಾಯಿತು.ಸಿಹಿ ತಿಂಡಿ ತಯಾರಕರು ಶ್ರೀ ವಿದ್ಯಾಧರ ಭಟ್ಟ ಯದ್ರಮಕ್ಕಿ.
ಶ್ರೀ ಜಿ ಎಮ್ ಹೆಗಡೆ ಹೊಸಾಡ ಇವರು ನೆನಪಿನ ಕಾಣಿಕೆ ಪ್ರಾಯೋಜಕತ್ವ ವಹಿಸಿದರು.

ಕಾರ್ಯಕ್ರಮದ ಕೊನೆಯಲ್ಲಿ ಶ್ರೀ ಮಧುಕರ ಹೆಗಡೆ ತಮ್ಮ ಅಭಿಪ್ರಾಯ ಹಂಚಿಕೊಂಡರು. ಸಭಾ ನಿರ್ವಹಣೆಯನ್ನು ರಾಘವೇಂದ್ರ ಹೆಗಡೆ ಕಲ್ಲಬ್ಬೆ ನಡೆಸಿಕೊಟ್ಟರು. ಕೊನೆಯಲ್ಲಿ ಮಹೇಶ ವಿ ಭಟ್ಟ ಕಲ್ಲಬ್ಬೆ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು. ವಲಯದಲ್ಲಿ ವಿದ್ಯಾ ಪ್ರಧಾನ ಹಾಗೂ ಮಂಡಲ ಉಪಾಧ್ಯಕ್ಷರಾದ ಎಸ್ ವಿ ಹೆಗಡೆ ಅವರ ನಿರ್ದೇಶನದಂತೆ ಕುಮಟಾ ಮಂಡಲ ಸೇವಾ ಪ್ರಧಾನ ಹಾಗೂ ವಲಯದಲ್ಲಿ ಗುರಿಕಾರರಾದ ಶ್ರೀ ಸುಬ್ರಹ್ಮಣ್ಯ ಹೆಗಡೆ ಇವರು ಕಾರ್ಯಕ್ರಮದ ಪೂರ್ವ ಸಿದ್ಧತಾ ಸಭೆಯಿಂದ ಇಂದಿನವರೆಗಿನ ಸಂಪೂರ್ಣ ಉಸ್ತುವಾರಿ ವಹಿಸಿದ್ದರು.