ಕಾಗಾಲದಲ್ಲಿ ಜರುಗಿದ ಶಾಸಕರ ಅದ್ಧೂರಿ ಕಾರ್ಯಕ್ರಮ.
ಕಕ್ಕಿರಿದ ಸಭೆಯಲ್ಲಿ ಮಕ್ಕಳ ಪ್ರತಿಭೆಗಳನ್ನು ಕೊಂಡಾಡಿದ ಶಾಸಕ ದಿನಕರ ಶೆಟ್ಟಿಯವರಿಂದ ಶಾಲಾಭಿವೃದ್ಧಿ ಸಮಿತಿ ಹಾಗೂ ಶಿಕ್ಷಕ ವೃಂದದ ಪರಿಶ್ರಮದ ಬಗ್ಗೆಯೂ ಮೆಚ್ಚುಗೆ.

ಇಂದು ಕುಮಟಾದ ಕಾಗಾಲ ಗ್ರಾಮಪಂಚಾಯತ ವ್ಯಾಪ್ತಿಯ ಹಿರಿಯ ಪ್ರಾಥಮಿಕ ಶಾಲೆ ಗುಡ್ ಕಾಗಾಲ ಹಾಗೂ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕಾಗಾಲದ ನೂತನ ಕಟ್ಟಡದ ಉದ್ಘಾಟನಾ‌ ಕಾರ್ಯಕ್ರಮ ಜರುಗಿತು.ಈವೇಳೆ ಕಾಗಾಲದಲ್ಲಿ ಜರುಗಿದ ಸಾರ್ವಜನಿಕ ಸಭೆಯಲ್ಲಿ ಮಕ್ಕಳದಿನಾಚರಣೆಯ ಕಾರ್ಯಕ್ರಮವೂ ನೆರವೇರಿತು.ಶಾಲಾ ವಿದ್ಯಾರ್ಥಿಗಳು ಯಕ್ಷಗಾನ ವೇಷಭೂಷಣ ಹಾಗೂ ಮಹಾಪುರುಷರ ವೇಷ ಧರಿಸಿ ಗಮನ ಸೆಳೆದರು. ಈ ಸಂದರ್ಭದಲ್ಲಿ ಕಲಿಕಾ ಚೇತರಿಕೆ ಹಾಗೂ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ವೀಕ್ಷಿಸಿದ ಶಾಸಕರು ವಿದ್ಯಾರ್ಥಿಗಳ ಪ್ರತಿಭೆ ಹಾಗೂ‌ ಶಿಕ್ಷಕರ ಪರಿಶ್ರಮದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ತಮ್ಮ ಅವಧಿಯಲ್ಲಿ ಕಾಗಾಲ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳು ನೆರವೇರಿದ್ದು.ಮುಖ್ಯವಾಗಿ ಕಾಗಾಲ ಲೋಕೇಶ್ವರದಿಂದ ಹಿಣಿ ರಸ್ತೆಯ ಮರು ನಿರ್ಮಾಣಕ್ಕಾಗಿ 30 ಲಕ್ಷ ಮಂಜೂರು ಆಗಿದ್ದು ಶೀಘ್ರವೇ ಕಾಮಗಾರಿ ಆರಂಭ ಆಗಲಿದೆ ಎಂದರು.

RELATED ARTICLES  ಮಾದಕ ದ್ರವ್ಯಗಳು ಹಾಗೂ  ಸಾಮಾಜಿಕ ಜಾಲತಾಣದ ಬಗ್ಗೆ ಎಚ್ಚರದಿಂದಿರಿ : ವಿದ್ಯಾರ್ಥಿಗಳಿಗೆ ತಿಳಿಹೇಳಿದ ಪಿ.ಎಸ್.ಐ ಸಂಪತ್.

ಈ ಸುದ್ದಿಗಳನ್ನೂ ಓದಿ.

RELATED ARTICLES  ಗುಣವಂತೆ ಒಕ್ಕಲಿಗರ ಸಭಾಭವನ ನಿರ್ಮಾಣವಾಗುತ್ತಿರುವ ಸ್ಥಳಕ್ಕೆ ಭೇಟಿ ನೀಡಿದ ಸಚಿವರು


ಇಂದಿನ ಕಾರ್ಯಕ್ರಮವು ಅಚ್ಚುಕಟ್ಟಾಗಿ ಸಂಘಟಿತವಾಗಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರ ವಾಯಿತು. ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ಶಶಿಕಾಂತ ನಾಯ್ಕ ಮಾಜಿ ಅಧ್ಯಕ್ಷೆ ,ಹಾಲಿಸದಸ್ಯೆ ಪಾರ್ವತಿ ಪಟಗಾರ ಮಾಜಿ ಉಪಾಧ್ಯಕ್ಷ ಹಾಗೂ ಹಾಲಿ ಸದಸ್ಯ ರವೀಂದ್ರ ಪಂಡಿತ, ಉಪನಿರ್ದೇಶಕರಾದ ಈಶ್ವರ ನಾಯ್ಕ.ಡಯಟ್ ಪ್ರಾಚಾರ್ಯ ಎನ್ ಜಿ ನಾಯ್ಕ ಕ್ಷೇತ್ರಶಿಕ್ಷಣಾಧಿಕಾರಿ ರಾಜೇಂದ್ರ ಭಟ್ಟ,ಮುಖ್ಯಾಧ್ಯಾಪಕಿ ಜಾನ್ಹವಿ ಹೆಗಡೆ,ಮುಂತಾದವರು ಉಪಸ್ಥಿತರಿದ್ದರು.