ಈ ಸಾಲಿನ ಕರ್ನಾಟಕ ಸರ್ಕಾರದ ರಾಜ್ಯೋತ್ಸವ ಪ್ರಶಸ್ತಿಯನ್ನು ಪಡೆದಿರುವ ಯಕ್ಷಗಾನ ಕ್ಷೇತ್ರದ ಅಗ್ರಗಣ್ಯ ಭಾಗವತ ಶ್ರೀ ಸುಬ್ರಹ್ಮಣ್ಯ ಧಾರೇಶ್ವರರಿಗೆ ಅವರ ಅಭಿಮಾನಿಗಳು ಹಾಗೂ ಧಾರೇಶ್ವರದ ನಾಗರಿಕರಿಂದ ಸನ್ಮಾನ ನಡೆಯಿತು. ಸಭೆಯ ಮುಖ್ಯ ಅತಿಥಿಗಳಾದ ಶ್ರೀ ನಾಗರಾಜ ನಾಯಕ ತೊರ್ಕೆ, ಶ್ರೀ ಎಂ ಜಿ ಭಟ್ಟ, ಊರ ಹಿರಿಯರಾದ ಶ್ರೀ ವಿ ಕೆ ಭಟ್ಟ, ಡಾ. ಶ್ರೀ ಶಂಕರ ಭಟ್ಟ ಹಾಗೂ ಇನ್ನಿತರ ನಾಗರಿಕರು ಈ ಸನ್ಮಾನವನ್ನು ಗೈದರು.
ಸನ್ಮಾನ ಸ್ವೀಕರಿಸಿದ ಭಾಗವತರು ತಮ್ಮ ಬಾಲ್ಯದ ದಿನವನ್ನು ನೆನೆಯುತ್ತಾ ಕಷ್ಟ ಹಾಗೂ ಸಂಘರ್ಷದ ಬದುಕಲ್ಲಿ ಬೆಳೆದು ಬಂದ ದಿನಗಳನ್ನು ಅಭಿಮಾನಿ ದೇವರುಗಳೆದುರು ತೆರೆದಿಟ್ಟರು. ಉತ್ತರ ಕನ್ನಡದ ವಿಭಾಗದಲ್ಲೇ ಗುರುತಿಸಿ ಪ್ರಶಸ್ತಿ ಕೊಟ್ಟು ಸರ್ಕಾರಕ್ಕೆ ಧನ್ಯವಾದ ಹೇಳುತ್ತಾ ಪ್ರಶಸ್ತಿಯ ನಂತರ ಉತ್ತರ ಕನ್ನಡದ ಮೊದಲ ಸನ್ಮಾನ ಧಾರೇಶ್ವರದಲ್ಲೇ ಆಗುತ್ತಿರುವುದಕ್ಕೆ ಸಂತಸ ಪಟ್ಟು ಸಂಘಟಕರನ್ನು ಆಹಾರದಿಂದ ಸ್ಮರಿಸಿದರು.
ಅತಿಥಿಗಳು ಹಾಗೂ ಹಿರಿಯರು ಅವರು ಜೀವನ ಇನ್ನೂ ಹೆಚ್ಚು ಯಶಸ್ಸಾಗಲೆಂದು ಶುಭ ಕೋರಿದರು, ಪದ್ಮಶ್ರೀ ಪ್ರಶಸ್ತಿಯೂ ಮುಂದಿನ ದಿನಗಳಲ್ಲಿ ಇವರನ್ನು ಅರಸಿ ಬದಲೀ ಎಂದು ಹಾರೈಸಿದರು. ಈ ಸುಂದರ ಸಭೆಗೆ ನೂರಾರು ಅಭಿಮಾನಿಗಳು ಸಾಕ್ಷಿಯಾಗಿದ್ದರು.
ಈ ಸುದ್ದಿಯನ್ನೂ ಓದಿ – ರಾತ್ರೋ ರಾತ್ರಿ ನಡೆಯಿತು ಅಪಘಾತ : ಓರ್ವನ ದುರ್ಮರಣ
ಸಭೆಯಲ್ಲಿ ಶ್ರೀ ಎಂ ಪಿ ಭಂಡಾರಿ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರೆ ಶ್ರೀ ಉದಯ ಭಟ್ಟ ರು ಸನ್ಮಾನ ಪತ್ರವನ್ನು ವಾಚಿಸಿದರು. ಶ್ರೀ ಗಜಾನನ ಶ್ಯಾನಭಾಗ ನಿರೂಪಿಸಿದರು. ಸಂಘಟಕ ಶ್ರೀ ರಾಮು ಅಡಿ ವಂದನಾರ್ಪಣೆ ಗೈದರು.
ಇದೇ ವೇಳೆ ಶ್ರೀ ಧಾರೇಶ್ವರರು ಹಾಗೂ ಶ್ರೀ ಬ್ರಹ್ಮೂರು ಶಂಕರ ಭಾಗವತರು ನಡೆಸಿಕೊಟ್ಟ ಗಾನ ವೈಭವ ವು ನೆರೆದಿರುವ ಎಲ್ಲರೂ ಮನವನ್ನೂ ರಂಜಿಸಿ ಮುದಗೊಳಿಸಿತು.