ಸಿದ್ದಾಪುರ- ಮೇರಾ ಭಾರತ ಪ್ರತಿಷ್ಠಾನದ ಕಾರ್ಯಕರ್ತರು SDMC ಸದಸ್ಯರು,ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಹೊಸಗದ್ದೆಯ ಹಿರಿಯ ಪ್ರಾಥಮಿಕ ಶಾಲೆಯ ಪರಿಸರದಲ್ಲಿ ಸ್ವಚ್ಛತಾ ಅಭಿಯಾನವನ್ನು ಮಾಡಿದರು. ಇದಕ್ಕು ಮೊದಲು ಮಹಾತ್ಮಾ ಗಾಂಧಿಜೀಯವರು ಮತ್ತು ಲಾಲ್ ಬಹದ್ದೂರ್ ಶಾಸ್ತ್ರಿಜೀ ಅವರ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಲೆಯ SDMC ಅದ್ಯಕ್ಷರಾದ ಉಮೇಶ ಭಟ್ ಅವರು ಗಾಂಧಿಜೀ ಅವರ ಕನಸು ಸ್ವಚ್ಛ ಭಾರತವನ್ನು ನನಸು ಮಾಡುವತ್ತ ಮೇರಾ ಭಾರತ ಪ್ರತಿಷ್ಠಾನದವರು ಮಾಡುತ್ತಿರುವ ಕೆಲಸ ಅತ್ಯಂತ ಶ್ಲಾಘನಿಯ ಎಂದರು.

RELATED ARTICLES  ಆಟೋ ಚಾಲಕರ ಪ್ರಾಮಾಣಿಕತೆ ಮತ್ತು ನಿಷ್ಠೆ ಶ್ಲಾಘನೀಯ-ಸಚಿವ ದೇಶಪಾಂಡೆ

ಇದೆ ಸಂದರ್ಭದಲ್ಲಿ ಮಾತನಾಡಿದ ಪ್ರತಿಷ್ಠಾನದ ಕಾರ್ಯಕರ್ತ ಚಿದಂಬರ ಹೆಗಡೆಯವರು ಇಂದಿನ ಮಕ್ಕಳ ದಿಶೆ ಉತ್ತಮವಾಗಿಸಲು ಶಿಕ್ಷಕರ ಪಾತ್ರ ಮಹತ್ವದ್ದಾಗಿದೆ ಆದ್ದರಿಂದ ಅವರು ಮಕ್ಕಳಿಗೆ ದಿನದ ಒಂದು ತರಗತಿಯನ್ನಾದರು ಈ ದೇಶದ ನಿಜವಾದ ಇತಿಹಾಸ ತಿಳಿಸಲು ಬಳಸ ಬೇಕುಎಂದರು ಮುಂದುವರೆದು ಮಕ್ಕಳಿಗೆ ಸ್ವಚ್ಛತೆಯ ಬಗ್ಗೆ ಗಮನ ಹರಿಸುವಂತೆ ಕರೆ ಕೊಟ್ಟರು. ಅನಂತರ ಮಾತನಾಡಿದ ನಾಗರಾಜ ಹೆಗಡೆ ಅವರು ಮೇರಾ ಭಾರತ ಪ್ರತಿಷ್ಠಾನದ ಇಂತಹ ಕೆಲಸಗಳಿಂದ ಎಲ್ಲಾ ಸಾರ್ವಜನಿಕರು ಪ್ರೇರೇಪಿತರಾಗಬೇಕಿದೆ ಎಂದರು. ಈ ಸಂದರ್ಭದಲ್ಲಿ ಪ್ರತಿಷ್ಠಾನದ ಕಾರ್ಯಕರ್ತರು, SDMC ಸದಸ್ಯರು,ಶಾಲಾ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಭಾಗವಹಿಸಿದ್ದರು

RELATED ARTICLES  ಡ್ಯಾಂಮ್ ಗೆ ಹಾರಿ ಆತ್ಮಹತ್ಯೆಗೆ ಶರಣಾದ ಮಹಿಳೆ