ಕಾರವಾರ : ಒಮ್ಮೆ ನೋಡಿದರೆ ಎಲ್ಲರೂ ಭಯಪಡುವ ಘಟನಾವಳಿಗಳು ಅಲ್ಲಲ್ಲಿ ಕಾಣುತ್ತದೆ. ಕರಾವಳಿಯಲ್ಲಿ ಶಂಕಿತ ಉಗ್ರರು ನುಸುಳಿದ್ದು, ಅವರೊಂದಿಗೆ ಬಾಂಬ್‌ಗಳೂ ಇವೆ ಎಂದು ತಿಳಿದಂತೆ ಭದ್ರತಾ ಪಡೆಗಳು ಅಲರ್ಟ್ ಆಗಿ ತಮ್ಮ ಕಾರ್ಯಾಚರಣೆಗಳನ್ನು ಚುರುಕುಗೊಳಿಸಿದ ಹಾಗೂ ತಮ್ಮ ಸಾಮರ್ಥ್ಯ ಪರೀಕ್ಷೆಗೆ ಮುಂದಾದ ಘಟನಾವಳಿ ಸುತ್ತುಮುತ್ತಲ ಜನತೆಗೆ ಒಮ್ಮೆ ಇದೇನಾಯ್ತು ಎಂಬುದು ಗೋಚರಿಸಿದಂತೆ ಹಾಗೆ ಆಗಿಬಿಟ್ಟಿತು. ಕರಾವಳಿಯುದ್ದಕ್ಕೂ ಸಾರ್ವಜನಿಕ ಸ್ಥಳಗಳಲ್ಲಿ, ರಸ್ತೆಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಪೊಲೀಸರಿಂದ ಶೋಧ ಕಾರ್ಯ ನಡೆಯುತ್ತಿದ್ದಂತೆ ಜನ ದಂಗಾಗಿದ್ದು ಹೌದು.
ಅಷ್ಟಕ್ಕೂ ನೀವೆಲ್ಲಾ ಈ ಸುದ್ದಿ ಓದಿ ಭಯ ಪಡಬೇಡಿ. ಶಂಕಿತ ಉಗ್ರರಾರೂ ಕರಾವಳಿಗೆ ಬಂದಿಲ್ಲ. ಇದು ಜಿಲ್ಲೆಯ ಕರಾವಳಿ ಭಾಗದಲ್ಲಿ ನಡೆಯುತ್ತಿರುವ ಸಾಗರ ಕವಚ, ಅಂದರೆ, ಸೀ ವಿಜಿಲ್ ಅಣಕು ಕಾರ್ಯಾಚರಣೆಯ ಒಂದು ಸನ್ನಿವೇಶ, ಕರಾವಳಿ ಪ್ರದೇಶದಲ್ಲಿ ಭದ್ರತೆಯನ್ನ ಹೆಚ್ಚಿಸುವ ಹಾಗೂ ಪರಿಶೀಲಿಸುವ ಸಲುವಾಗಿ ವಿವಿಧ ಭದ್ರತಾ ಪಡೆಗಳು ಸಂಯುಕ್ತವಾಗಿ ಈ ಕಾರ್ಯಾಚರಣೆ ಹಮ್ಮಿಕೊಂಡಿವೆ. ನೌಕಾಪಡೆ, ಕೋಸ್ಟ್ ಗಾರ್ಡ್, ಕರಾವಳಿ ಕಾವಲು ಪೊಲೀಸರು ಹಾಗೂ ಜಿಲ್ಲಾ ಪೊಲೀಸರು ಈ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ. ಇದರಲ್ಲಿ ರೆಡ್ ಫೋರ್ಸ್ ಹಾಗೂ ಬ್ಲೂ ಫೋರ್ಸ್ ಎಂದು ಎರಡು ಗುಂಪುಗಳನ್ನು ಮಾಡಲಾಗಿದ್ದು, ‘ರೆಡ್ ಫೋರ್ಸ್’ನ ನೌಕಾ ಸಿಬ್ಬಂದಿ ಮಾರುವೇಷದಲ್ಲಿ ಬಂದು ಬಾಂಬ್ ಮಾದರಿಯ ಪೆಟ್ಟಿಗೆಗಳನ್ನು ಆಯ್ದ ಸ್ಥಳಗಳಲ್ಲಿ ಇಡಲಿದ್ದಾರೆ.
‘ಬ್ಲೂ ಪೋರ್ಸ್’ನ ಪೊಲೀಸ್ ಸಿಬ್ಬಂದಿಗೆ ಅದನ್ನು ಪತ್ತೆಹೆಚ್ಚುವ ಜವಾಬ್ದಾರಿಯನ್ನು ನೀಡಲಾಗಿದೆ. ಇದರಲ್ಲಿ ಪೊಲೀಸರು ವಿಫಲರಾದರೆ ಭದ್ರತೆ ಹೆಚ್ಚಿಸುವ ಕುರಿತು ಗಮನ ನೀಡಲಾಗುತ್ತದೆ. ವರ್ಷದಲ್ಲಿ ಎರಡು ಬಾರಿ ಈ ಕಾರ್ಯಾಚರಣೆ ನಡೆಸಲಾಗುತ್ತದೆ. ಈ ಬಾರಿಯ ಕಾರ್ಯಾಚರಣೆ ನಿನ್ನೆ ಆರಂಭಗೊಂಡಿದ್ದು,
ಇಂದು ಸಮಾಪ್ತಿಗೊಳ್ಳಲಿದೆ.
ಈ ಸುದ್ದಿಗಳನ್ನೂ ಓದಲು ಸುದ್ದಿಯನ್ನು ಕ್ಲಿಕ್ಕಿಸಿ.
ರಾಷ್ಟ್ರೀಯ ಹೆದ್ದಾರಿಯ ಅಲ್ಲಲ್ಲಿ ತಾತ್ಕಾಲಿಕ ನಾಕಾಬಂದಿಗಳನ್ನು ನಿರ್ಮಿಸಿ, ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾರೆ. ಕಡಲಿನಲ್ಲಿ ತಟ ರಕ್ಷಕ ದಳ ಹಾಗೂ ಕರಾವಳಿ ಕಾವಲು ಪಡೆ ಪೊಲೀಸರು ಗಸ್ತು ತಿರುಗುತ್ತಿದ್ದು, ಎಷ್ಟು ಮಂದಿಯನ್ನ ವಶಕ್ಕೆ ಪಡೆಯಲಿದ್ದಾರೆಂಬುದು ಕಾದುನೋಡಬೇಕಿದೆ.