ಅಂಕೋಲಾ :- ತಾಲೂಕಿನ ಬಾವಿಕೇರಿ ಗ್ರಾಮ ನಿವಾಸಿಯಾಗಿದ್ದ ಶಾಂತಾ ಧನಂಜಯ ನಾಯಕ (71)ಅವರು ಮಂಗಳವಾರ ನಿಧನರಾದರು. ಕುಮಟಾದ ಲಯನ್ಸ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಯನ್ನು ಸಂಪರ್ಕಿಸಿದ ಇವರ ಕುಟುಂಬವರ್ಗವು ಈ ನಿಧನದ ಸುದ್ಧಿ ತಿಳಿಸಿ ಇವರ ಕಣ್ಣುಗಳನ್ನು ದಾನ ನೀಡುವ ಸದಿಚ್ಛೆ ವ್ಯಕ್ತಪಡಿಸಿದಾಗ ಆಸ್ಪತ್ರೆಯ ವೈದ್ಯಾಧಿಕಾರಿ ನೇತ್ರ ತಜ್ಞ ಡಾ.ಮಲ್ಲಿಕಾರ್ಜುನ ಅವರ ತಂಡವು ರಾತ್ರೋರಾತ್ರಿ ಕುಮಟಾದಿಂದ ಅಂಕೋಲಾ ಬಾವಿಕೇರಿಯಲ್ಲಿರುವ ಮೃತರ ಸ್ವಗೃಹಕ್ಕೆ ತೆರಳಿ ಅವರ ಕಣ್ಣುಗಳನ್ನು ಸಂರಕ್ಷಿಸಿದರು.

RELATED ARTICLES  ಶ್ರೀನಾಗ ಹಾಗೂ ರಜತ ನಾಯಕ ಜಿಲ್ಲಾ ಮಟ್ಟಕ್ಕೆ ಆಯ್ಕೆ.

ಮೃತರ ಪತಿ ಧನಂಜಯ ಬಾಬು ನಾಯಕ ಹಾಗೂ ಪುತ್ರ ಮಧುಸೂದನ ರವರಿಂದ ಮೃತರ ನೇತ್ರಗಳನ್ನು ಆಸ್ಪತ್ರೆಯ ಪರವಾಗಿ ಸ್ವೀಕರಿಸಿದ ಆಸ್ಪತ್ರೆಯ ಆಡಳಿತಾಧಿಕಾರಿ ಜಯದೇವ ಬಳಗಂಡಿ ಅವರು ನೇತ್ರದಾನದ ಈ ಮಹತ್ಕಾರ್ಯಕ್ಕೆ ಕುಟುಂಬದವರನ್ನು ಅಭಿನಂದಿಸಿ ಮೃತರ ಆತ್ಮಕ್ಕೆ ಸದ್ಗತಿ ಕೋರಿದರು.

RELATED ARTICLES  ಬಂಗಾರದ ಪದಕ ಪಡೆದ ಕುಮಾರಿ ಪಲ್ಲವಿ ಮಾರುತಿ ನಾಯ್ಕ.