ಕುಮಟಾ: ಇಲ್ಲಿನ ಪ್ರತಿಷ್ಠಿತ ಕೊಂಕಣ ಎಜ್ಯುಕೇಶನ್ ಟ್ರಸ್ಟ್ನ ಸಿವಿಎಸ್‌ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಇತ್ತೀಚೆಗೆ ಕತಗಾಲಿನ ಎಸ್‌ಕೆಪಿ ಪ್ರೌಢಶಾಲೆಯಲ್ಲಿ ಜರುಗಿದ ತಾಲೂಕಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ವಿಜೇತರಾಗಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಗುಂಪು ಹಾಗೂ ವೈಯಕ್ತಿಕ ಸ್ಪರ್ಧೆಗಳ ಪ್ರತ್ಯೇಕ ವಿಭಾಗಗಳಲ್ಲಿ ಸಿವಿಎಸ್‌ಕೆ ವಿದ್ಯಾರ್ಥಿಗಳು ಅಮೋಘ ಸಾಧನೆಗೈದಿದ್ದಾರೆ.
ಗುಂಪು ಸ್ಪರ್ಧೆಯಲ್ಲಿ ೧೦ ನೇ ವರ್ಗದ ವಿದ್ಯಾರ್ಥಿಗಳಾದ ಕುಮಾರ ಪ್ರತೀಕ ನಾಯ್ಕ ಹಾಗೂ ಕುಮಾರ ಗಗನ ಕಿಮಾನಿಕರ ಇವರ ತಂಡ ಎಂಜಿನೀಯರಿಂಗ್ ಎಂಡ್ ಕಂಪ್ಯೂಟರ್ ಸೈನ್ಸ್ ವಿಷಯವನ್ನಾಧರಿಸಿ ತಯಾರಿಸಿದ ಪೈಥಾನ್ ಅಪ್ಲಿಕೇಶನ್‌ಗೆ ಪ್ರಥಮ ಸ್ಥಾನ, ೯ನೇ ವರ್ಗದ ವಿದ್ಯಾರ್ಥಿಗಳಾದ ಕುಮಾರಿ ಕೃತಿಕಾ ಗಾಂವಕರ ಹಾಗೂ ಕುಮಾರಿ ರಚನಾ ನಾಯ್ಕ ತಂಡ ರಸಾಯನಶಾಸ್ತç ವಿಷಯವನ್ನಾಧರಿಸಿ ತಯಾರಿಸಿದ ಡೆವೆಲಪ್‌ಮೆಂಟ್ ಆಫ್ ಹೀಟ್ ರಿಕವರಿ ಸಿಸ್ಟಂ ಟು ಎಲ್‌ಪಿಜಿ ಸ್ಟವ್ ಮಾದರಿಗೆ ಪ್ರಥಮ ಸ್ಥಾನ, ೯ನೇ ತರಗತಿಯ ವಿದ್ಯಾರ್ಥಿಗಳಾದ ಕುಮಾರಿ ಸಂಜನಾ ಪಂಡಿತ್ ಹಾಗೂ ಕುಮಾರಿ ಪಾವನಿ ನಾಯ್ಕ ಇವರ ತಂಡ ಭೌತಶಾಸ್ತç ವಿಷಯವನ್ನಾಧರಿಸಿ ತಯಾರಿಸಿದ ಸ್ಪೀಡ್ ಬ್ರೇಕರ್ ಪವರ್ ಜನರೇಟರ್ ವಿಜ್ಞಾನ ಮಾದರಿಗೆ ದ್ವಿತೀಯ ಸ್ಥಾನ ದೊರೆತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ವೈಯಕ್ತಿಕ ಸ್ಪರ್ಧೆಯಲ್ಲಿ ೧೦ನೇ ವರ್ಗದ ವಿದ್ಯಾರ್ಥಿ ಕುಮಾರ ಸುಮಂತ ಶಾಸ್ತಿç ಈತನ ಗಣಿತ ವಿಷಯವನ್ನಾಧರಿಸಿ ತಯಾರಿಸಿದ ಜ್ಯಾಮೆಟ್ರಿಕಲ್ ಫಿಗರ್ಸ್ ಮಾದರಿ ಹಾಗೂ ೮ನೇ ವರ್ಗದ ವಿದ್ಯಾರ್ಥಿ ಕುಮಾರ ಪ್ರಥಮ ಗೌಡ ಈತನ ಬಯೋ ಸೈನ್ಸ್ ಎಂಡ್ ಬಯೋ ಕೆಮಿಸ್ಟ್ರಿ ವಿಷಯವನ್ನಾಧರಿಸಿ ತಯಾರಿಸಿದ ಮೈಕ್ರೋಸ್ಕೋಪ್ ಮಾದರಿಗೆ ಪ್ರಥಮ ಸ್ಥಾನ ದೊರೆತು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.
ಅದಲ್ಲದೆ, ೧೦ನೇ ತರಗತಿಯ ಕುಮಾರಿ ಪ್ರೀತಿ ಶೇಟ್ ಹಾಗೂ ಕುಮಾರಿ ಸೃಷ್ಟಿ ತಲಹಳ್ಳಿ ಇವರ ತಂಡ ಅರ್ಥ್ ಎಂಡ್ ಸ್ಪೇಸ್ ಸೈನ್ಸ್ ವಿಷಯದಡಿ ತಯಾರಿಸಿದ ಡೇ ಎಂಡ್ ನೈಟ್ ಮಾದರಿಗೆ ತೃತೀಯ ಸ್ಥಾನ ದಕ್ಕಿದೆ.
ಸಾಧನೆಗೈದ ಈ ಎಲ್ಲಾ ವಿದ್ಯಾರ್ಥಿಗಳಿಗೆ ಶಾಲೆಯ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ ಅಭಿನಂದಿಸಿ ಮುಂದಿನ ಹಂತದ ಸ್ಪರ್ಧೆಗೆ ಶುಭ ಹಾರೈಸಿದ್ದಾರೆ. ಸಿವಿಎಸ್‌ಕೆ ಶಾಲೆಯ ಅನುಭವಿ ಹಾಗೂ ನುರಿತ ವಿಜ್ಞಾನ ಶಿಕ್ಷರುಗಳಾದ ಅಮಿತಾ ಗೋವೆಕರ್, ಜ್ಯೋತಿ ಪಟಗಾರ, ಭಾಸ್ಕರ ಹೆಗಡೆ, ಹಾಗೂ ಅರ್ಚನಾ ನಾಯ್ಕ ಮಾರ್ಗದರ್ಶನದಲ್ಲಿ ಹೊಮ್ಮಿದ ವಿದ್ಯಾರ್ಥಿಗಳ ಈ ಸಾಧನೆ ನಿಜಕ್ಕೂ ಸಂಸ್ಥೆಯ ಗರಿಮೆಯನ್ನು ಇನ್ನಷ್ಟು ಹೆಚ್ಚಿಸಿದಂತಾಗಿದೆ.