ಶಿರಸಿ: ಉತ್ತರ ಕನ್ನಡ ಜಿಲ್ಲೆಗೆ ಕೇಂದ್ರ ಸರಕಾರದ ದೂರಸಂಪರ್ಕ ಇಲಾಖೆಯಿಂದ ಸಂಸದ ಅನಂತಕುಮಾರ ಹೆಗಡೆ ಪ್ರಯತ್ನದಿಂದ 232 ಹೊಸ ಮೊಬೈಲ್ ಟವರ್ ಮಂಜೂರಿ ಆಗಿದೆ. ಅದರಲ್ಲಿ 18 ಟವರ್ ಗಳನ್ನು 2ಜಿ ಇಂದ 3ಜಿ ಮೇಲ್ದರ್ಜೆಗೆ ಏರಿಸಲಾಗಿದ್ದು, ಇದುವರೆಗೂ ಮೊಬೈಲ್ ಸಿಗ್ನಲ್ ಸಿಗದ 196 ಹಳ್ಳಿಗಳನ್ನು ಗುರುತಿಸಿ ಟವರ್ ನಿರ್ಮಾಣಕ್ಕೆ ಅನುಮೋದನೆ ನೀಡಿದೆ.

RELATED ARTICLES  ಆನ್ ಲೈನ್ ಶಾಪಿಂಗ್ ಮಾಡಿ ರಿಟರ್ನ ಮಾಡುವ ವೇಳೆ 7 ಲಕ್ಷ ಕಳೆದುಕೊಂಡ.

ಈಗಾಗಲೇ ಸ್ಥಳ ಗುರುತಿಸುವಿಕೆ ಪ್ರಾರಂಭವಾಗಿದ್ದು ಒಂದು ವರ್ಷದ ಒಳಗೆ ಕಾಮಗಾರಿಗಳನ್ನು ಮುಗಿಸುವಂತೆ ಗಡವು ನೀಡಲಾಗಿದೆ. ಈಗಾಗಲೇ ಜಿಲ್ಲೆಯಲ್ಲಿ 243 2ಜಿ ಹಾಗೂ 217 4ಜಿ ಸೇವೆಯ ಮೊಬೈಲ್ ಟವರಗಳು ಕಾರ್ಯನಿರ್ವಹಿಸುತ್ತಿದ್ದು ಈಗ ಹೊಸದಾಗಿ 196 ಟವರ್ ನಿರ್ಮಾಣದಿಂದ ಜಿಲ್ಲೆಯ ಬಹುತೇಕ ಎಲ್ಲಾ ಹಳ್ಳಿಗಳಲ್ಲಿಯೂ ಮೊಬೈಲ್ ಸಿಗ್ನಲ್ ಸಿಗುವಂತಾಗಲಿದೆ. ಅತೀ ಹೆಚ್ಚು ಅರಣ್ಯ ಪ್ರದೇಶದಿಂದ ಆವೃತವಾದ ಜೊಯಿಡಾ ತಾಲೂಕಿಗೆ 42 ಟವರ್‌ಗಳು ಮಂಜೂರಾಗಿದ್ದು, ಇದರಿಂದ ಕುಗ್ರಾಮಗಳಿಗೂ ಸಂಪರ್ಕ ದೊರೆಯಲಿದೆ.

RELATED ARTICLES  ತೆಂಗಿನಮರದ ಬಳಿ ತೆರಳಿದ ಮಹಿಳೆ ಸಾವು.


ತಾಲೂಕಾವಾರು ಮಂಜೂರಾದ ಟವರ್‌ಗಳ ಸಂಖ್ಯೆಗಳು ಈ ಕೆಳಗಿನಂತಿವೆ ಕಾರವಾರ-08, ಅಂಕೋಲಾ-12, ಕುಮಟಾ-19, ಹೊನ್ನಾವರ-8, ಭಟ್ಕಳ-13, ಸಿದ್ದಾಪುರ -17, ಶಿರಸಿ-24, ಮುಂಡಗೋಡ-10, ಯಲ್ಲಾಪುರ-34, ಹಳಿಯಾಳ-06, ದಾಂಡೇಲಿ-03, ಜೊಯಿಡಾ-42