ಶಿರಸಿ : ಆರು ಬಾರಿ ವಿಧಾನಸಭೆಗೆ ಪಾದಾರ್ಪಣೆ ಮಾಡಿ ಸ್ಪೀಕರ್ ಆಗಿ ಅತ್ಯಂತ ಸಮರ್ಥವಾಗಿ ಎಲ್ಲವನ್ನೂ ನಿಭಾಯಿಸುತ್ತಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ಸರಳತೆಯ ವ್ಯಕ್ತಿತ್ವ ಹೊಂದಿದವರು. ಸಭಾಧ್ಯಕ್ಷರಾಗಿ ಗಾಂಭೀರ್ಯವಾಗಿ ಸಭೆಯನ್ನು ನಡೆಸುವುದರ ಜೊತೆಗೆ ತಪ್ಪು ನಡೆ ಬಂದಲ್ಲಿ ಕಡಾ ಖಂಡಿತವಾಗಿ ಸರಿದಾರಿಗೆ ಪ್ರಯತ್ನ ಮಾಡುವ ಖಡಕ್ ವ್ಯಕ್ತಿತ್ವವು ಹೌದು. ಇಂತಹ ಸ್ಪೀಕರ್ ಸಾಮಾನ್ಯರ ಜೊತೆ ಬೈಕ್ ನಲ್ಲಿ ಹೋಗುವುದರ ಮೂಲಕ ಸರಳತೆ ಮೆರೆದು ಇದೀಗ ಸುದ್ದಿಯಾಗಿದ್ದಾರೆ.
ಇತ್ತೀಚೆಗೆ ಸ್ಪೀಕರ್ ಸಾಹೇಬ್ರು ತಮ್ಮ ಕ್ಷೇತ್ರದ ಕಾರ್ಯಕ್ರಮವೊಂದಕ್ಕೆ ಸ್ವತಃ ಬೈಕ್ ಓಡಿಸಿಕೊಂಡು ಹೋಗಿ ಸುದ್ದಿಯಾಗಿದ್ದಾರೆ.. ಬೈಕ್ ಜೊತೆ ಆಟೋ ಕೂಡಾ ಓಡಿಸಿದ್ದು ಮತ್ತೊಂದು ವಿಶೇಷ. ಶಿರಸಿಯ ಕುಳವೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಉಗ್ರೇಮನೆ ಗ್ರಾಮದ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿದ ಕಾಗೇರಿಯವರು ಉಗ್ರೇಮನೆ ದೇವಸ್ಥಾನಕ್ಕೆ ಸ್ವತಃ ಬೈಕ್ ಓಡಿಸಿಕೊಂಡು ರಸ್ತೆಯಲ್ಲಿ ಹಾಕಿದ ಜಲ್ಲಿ ಕಲ್ಲುಗಳ ನಡುವೆಯೇ ಸವಾರಿ ನಡೆಸಿ ಸರಳತೆ ಮೆರೆದರು.
ತಮ್ಮ ಜೊತೆ ಇನ್ನು ಇಬ್ಬರನ್ನು ಬೈಕ್ ಮೇಲೆ ಕುಳಿಸಿಕೊಂಡು ಬೈಕ್ ಓಡಿಸಿದ್ದಾರೆ. ಆನಂತರ ಉಗ್ರೇಮನೆ ಗ್ರಾಮ ಪಂಚಾಯಿತಿಗೆ ಹೊಸದಾಗಿ ಬಂದ ಕಸವಿಲೇವಾರಿ ಆಟೋವನ್ನು ತಾವೇ ಚಾಲನೆ ಮಾಡುವುದರ ಮೂಲಕ ಉದ್ಘಾಟನೆ ನೆರವೇರಿಸಿದ್ದಾರೆ.
ಈ ಸುದ್ದಿಗಳನ್ನೂ ಓದಿ.
ಅಲ್ಲಿ ನೆರೆದಿದ್ದ ಜನರೆಲ್ಲರ ಜೊತೆ ಬೆರೆತು ಅವರ ಕಷ್ಟ ಸುಖ ಕೇಳಿದ ಸಭಾಧ್ಯಕ್ಷರ ಕಾರ್ಯವೈಖರಿ ಎಲ್ಲರ ಪ್ರಶಂಸೆಗೆ ಪಾತ್ರವಾಗಿದೆ.