ಕುಮಟಾ: ವಿದ್ಯಾರ್ಥಿ ದೆಸೆಯಲ್ಲಿರುವಾಗಲೇ ಸಾಹಿತ್ಯ ಕೃಷಿಯನ್ನು ಪರಿಚಯಿಸಿಕೊಂಡರೆ, ತಂತಾನೆ ಸಾಹಿತ್ಯಾಸಕ್ತಿ ಕುದುರಿ ಓದುವ ಹವ್ಯಾಸ ರೂಢಿಯಾಗುತ್ತದೆ. ಕವನ ರಚನೆಯ ಪ್ರಕ್ರಿಯೆ ಮಕ್ಕಳಲ್ಲಿ ಸ್ವಂತಿಕೆಯ ಅಭಿವ್ಯಕ್ತಿ ಬಿಂಬಿಸಬಲ್ಲದೆAದು ನಿವೃತ್ತ ಮುಖ್ಯಾಧ್ಯಾಪಕ ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕಾಧ್ಯಕ್ಷ ಎನ್. ಆರ್. ಗಜು ಅಭಿಪ್ರಾಯಪಟ್ಟರು. ಅವರು ಕುಮಟಾ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಮಹಾತ್ಮಾ ಗಾಂಧಿ ಪ್ರೌಢ ಶಾಲೆ ಚಿತ್ರಿಗಿ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಕನ್ನಡ ಕಾರ್ತಿಕ ಕಾರ್ಯಕ್ರಮದಡಿಯಲ್ಲಿ ಹಮ್ಮಿಕೊಂಡ ಮಕ್ಕಳ ಕವಿಗೋಷ್ಠಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದರು.
ಮುಖ್ಯ ಅತಿಥಿ ಕಸಾಪ ಕಾರ್ಯಕಾರಿ ಸಮಿತಿ ಸದಸ್ಯ ಸುರೇಶ ಭಟ್ ಮಕ್ಕಳು ರಚಿಸಿದ ಕವಿತೆಗಳು ಕನ್ನಡದ ಅಭಿಮಾನಕ್ಕೆ ಹಿಡಿದ ಕೈಗನ್ನಡಿಯಂತಿವೆ ಎಂದರು. ಇನ್ನೋರ್ವ ಅತಿಥಿ ನಿವೃತ್ತ ಮುಖ್ಯಾಧ್ಯಾಪಕ ಎಸ್. ಬಿ. ನಾಯ್ಕ ಮಕ್ಕಳ ಸೃಜನಶೀಲತೆಯನ್ನು ಪ್ರೋತ್ಸಾಹಿಸಿ ಮಾತನಾಡಿದರು. ೧೧ ವಿದ್ಯಾರ್ಥಿಗಳು ಕನ್ನಡ ನಾಡು ನುಡಿಗೆ ಸಂಬAಧಿಸಿ ರಚಿಸಿದ ಕವಿತೆ ವಾಚಿಸಿ ಗಮನ ಸೆಳೆದರು. ಅಧ್ಯಕ್ಷತೆ ವಹಿಸಿದ್ದ ಮುಖ್ಯಾಧ್ಯಾಪಕ ಪಾಂಡುರAಗ ವಾಗ್ರೆಕರ್ ಕನ್ನಡ ಭಾಷೆಯ ವಿಶೇಷತೆಯ ಕುರಿತು ಕಾವ್ಯಾತ್ಮಕವಾಗಿ ನುಡಿದರು.
ನಾಡಗೀತೆಯೊಂದಿಗೆ ಕಾರ್ಯಕ್ರಮ ಆರಂಭಿಸಲಾಯಿತು. ಕಸಾಪ ಗೌರವ ಕಾರ್ಯದರ್ಶಿ ಪ್ರದೀಪ ನಾಯಕ ಸ್ವಾಗತಿಸಿದರು. ಕಾರ್ಯದರ್ಶಿ ಪ್ರೊ. ಪ್ರಮೋದ್ ನಾಯ್ಕ ವಂದಿಸಿದರು. ಕೋಶಾಧ್ಯಕ್ಷ ಪ್ರೊ. ವನ್ನಳ್ಳಿ ಗಿರಿ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವಿ. ಎನ್ ಭಟ್ ಹಾಗೂ ಶಿಕ್ಷಕ ಎಸ್. ಎಸ್. ಪೈ ಹಾಗೂ ಉಳಿದ ಅಧ್ಯಾಪಕ ವೃಂದದವರು ಸಹಕರಿಸಿದರು. ಭಾಗವಹಿಸಿದ ಎಲ್ಲ ಕವಿಗಳಿಗೆ ಅಭಿನಂದನಾ ಪತ್ರ ಹಾಗೂ ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು.