ಸಿದ್ದಾಪುರ : ಬೀಟ್ ಗೆ ಹೋದ ಸಂದರ್ಭದಲ್ಲಿ ಅರಣ್ಯ ಉಪವಲಯ ಅಧಿಕಾರಿಯ ಮೇಲೆ ಮಾರಣಾಂತಿಕವಾಗಿ ಹಲ್ಲೆಗೆ ಯತ್ನ ನಡೆದಿದ್ದು, ಇದೀಗ ಈ ಸುದ್ದಿ ಕಾಡ್ಗಿಚ್ಚಿನಂತೆ ಎಲ್ಲೆಡೆ ಹಬ್ಬುತ್ತಿದೆ. ತಾಲೂಕಿನ ಕಾನಸೂರು ಉಪ ವಲಯ ಅರಣ್ಯಾಧಿಕಾರಿ ಮೇಲೆ ಮಾರಾಣಾಂತಿಕ ಹಲ್ಲೆ ನಡೆದ ಬಗ್ಗೆ ವರದಿಯಾಗಿದೆ. ಗಾಯಾಳು ಅಧಿಕಾರಿ ವಿ.ಟಿ. ನಾಯ್ಕ ಎಂದು ಗುರುತಿಸಲಾಗಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿದುಬಂದಿದೆ. ಆರೋಪಿ ಮಾಬ್ಲಾ ಮರಾಠಿ ಎಂಬುವವನ್ನು ಪೊಲೀಸರು ಬಂಧಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಭೀಕರ ಅಪಘಾತ : ಸ್ಥಳದಲ್ಲಿಯೇ ಓರ್ವ ಸಾವು.

ತಾಲೂಕಿನ ಕಾನಸೂರು ಸಮೀಪದ ಬಿಳಗೋಡ ನಲ್ಲಿ ಈ ಘಟನೆ ನಡೆದಿದ್ದು, ಬೀಟ್ ಗೆ ಎಂದು ಹೋದ ಸಂದರ್ಭದಲ್ಲಿ ಕತ್ತಿಯಿಂದ ಹೊಡೆದು ಕೊಲ್ಲಲು ಯತ್ನ ನಡೆಸಿದ ಘಟನೆ ಇದಾಗಿದೆ. ಈ ಘಟನೆ ಮುಂಜಾನೆ ನೆಡೆದಿದೆ. ಅರಣ್ಯ ರಕ್ಷಕ ವಿ.ಟಿ.ನಾಯ್ಕ ಅವರು ಈ ಹಿಂದೆ ಶಿರಸಿ ಉಪವಿಭಾಗದಲ್ಲಿ ಹಲವಾರು ಕಡೆ ಒಳ್ಳೆಯ ಕೆಲಸ ಮಾಡಿ ಹೆಸರು ಪಡೆದಿದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲಿಗೆ ಕರೆದೊಯ್ದಿದ್ದಾರೆ. ಯಾವ ಕಾರಣಕ್ಕಾಗಿ ಈ ಘಟನೆ ನಡೆಯಿತು ಇದರ ಹಿಂದಿನ ಉದ್ದೇಶವೇನು ಎಂಬುದು ಪೊಲೀಸ್ ತನಿಖೆಯಿಂದ ತಿಳಿದು ಬರಬೇಕಿದೆ.

RELATED ARTICLES  ಜಿಲ್ಲೆಯ ಕೀರ್ತಿ ಬೆಳಗಿದ ಸುಪ್ರೀಯಾ ಶಂಕರ ಗೌಡ

ಈ ಸುದ್ದಿಗಳನ್ನೂ ಓದಿ