ಯಲ್ಲಾಪುರ : ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ ವ್ಯಕ್ತಿಯೊಬ್ಬ ಗ್ರಾಮದ ಹೊರವಲಯದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ತಾಲೂಕಿನ ನಂದಿಗಟ್ಟ ಗ್ರಾಮದಲ್ಲಿ ಜರುಗಿದೆ. ಮಬೂಬಸಾಬ ಅತ್ತಿವೇರಿ(47) ಎಂಬುವವನೆ ಶವವಾಗಿ ಪತ್ತೆಯಾದವರಾಗಿದ್ದಾರೆ. ಈತ ಎರಡು ದಿನಗಳ ಹಿಂದೆ ಮನೆಯಿಂದ ನಾಪತ್ತೆಯಾಗಿದ್ದನು.ಅನಾರೋಗ್ಯದಿಂದ ಬಳಲುತ್ತಿದ್ದ ಈತ ಕಳೆದ ಎರಡು ದಿನಗಳ ಹಿಂದೆ ನಾಪತ್ತೆಯಾಗಿದ್ದ. ಈತನನ್ನು ಕುಟುಂಬದವರು ಹುಡುಕಾಡುತ್ತಿದ್ದರು. ಇಂದು ಗ್ರಾಮದ ಬಳಿಯ ಕೆರೆಯಲ್ಲಿ ಈತನ ಶವ ಪತ್ತೆಯಾಗಿದ್ದು ಈ ಕುರಿತು ಪೊಲೀಸರು ತನಿಖೆ ಕೈಗೊಂಡಿದ್ದಾರೆ.