ಕಾರವಾರ : ತಾಲೂಕಿನಲ್ಲಿ ಸಣ್ಣ ನೀರಾವರಿ ಇಲಾಖೆಯಿಂದ 12 ಕೋಟಿ ರೂ. ವೆಚ್ಚದಲ್ಲಿ ಖಾರಲ್ಯಾಂಡ್ ಕಾಮಗಾರಿ ನಡೆಯುತ್ತಿದ್ದು ಇಂದು ಸಣ್ಣ ನೀರಾವರಿ ಸಚಿವ ಜೆಸಿ ಮಾಧುಸ್ವಾಮಿ ಶಿಲಾನ್ಯಾಸ ನೆರವೇರಿಸಿ ಮಾತನಾಡಿದರು. ಖಾರಲ್ಯಾಂಡ್ ಕಾಮಗಾರಿಯಿಂದ ಉತ್ತರ ಕನ್ನಡದ ಕರಾವಳಿಯಲ್ಲಿ 25 ಸಾವಿರ ಎಕರೆ ಕೃಷಿ ಭೂಮಿಯನ್ನು ಉಳಿಸುತ್ತಿದ್ದೇವೆ ಉಪ್ಪು ನೀರು ನುಗ್ಗಿ ಸಮಸ್ಯೆಗೊಳಗಾದ ಜಮೀನಿನ ಪುನಶ್ಚೇತನಗೊಳಿಸುವ ಕಾರ್ಯಕ್ರಮ ಇದಾಗಿದೆ. ಇದರೊಟ್ಟಿಗೆ ನೀರು ಕೊಡುವ ಕೆಲಸವೂ ಆಗಲಿದೆ. 100, 200 ಎಕರೆಗಳಷ್ಟು ಅಚ್ಚುಕಟ್ಟು ಕೂಡ ಅಭಿವೃದ್ಧಿಯಾಗಲಿದೆ. ಈ ಕಾಮಗಾರಿಯಿಂದ ಜನತೆಗೆ ಓಡಾಡಕ್ಕೆ ದಾರಿ ಕೂಡ ಲಭ್ಯವಾಗಲಿದೆ. ಸುತ್ತು ಬಳಸಿ ಬರಬೇಕಿದ್ದಲ್ಲಿ ನೇರವಾಗಿ ದಾರಿ ಲಭ್ಯವಾಗಲಿದೆ. ನೀರು ಜಾಸ್ತಿ ಇದ್ದಲ್ಲಿ ಸೇತುವೆ, ಬ್ಯಾರೇಜ್ ಕೂಡ ನಿರ್ಮಾಣ ಮಾಡುತ್ತೇವೆ. ಜನತೆಗೆ ಸಂಚಾರಕ್ಕೂ ಅನುಕೂಲ ಕಲ್ಪಿಸುತ್ತೇವೆ ಎಂದು ಹೇಳಿದರು.

ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡದಲ್ಲಿ ಬೃಹತ್ ನೀರಾವರಿ ಯೋಜನೆ ರೂಪಿಸಲು ಅವಕಾಶ ಇಲ್ಲ. ಇಲ್ಲಿ ಸಣ್ಣ ನೀರಾವರಿ ಇಲಾಖೆಯಿಂದಲೇ ರೈತರಿಗೆ ಅನುಕೂಲ ಕಲ್ಪಿಸುವ ಪ್ರಯತ್ನ ನಡೆಯಬೇಕು. ಆ ದಿಸೆಯಲ್ಲಿ ಪ್ರಯತ್ನ ಆರಂಭವಾಗಿದೆ. ಇಲ್ಲಿ ನೀರಾವರಿ ಕೆರೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲ. ಕೆರೆಗಳಿದ್ದರೆ ಇನ್ನಷ್ಟು ಅನುಕೂಲವಾಗುತ್ತಿತ್ತು ಎಂದರು.

RELATED ARTICLES  ಸೇತುವೆ ಕುಸಿತದ ಪರಿಣಾಮ:ಅಂಕೋಲಾದಲ್ಲಿ ನದಿಯಲ್ಲಿ ಶವ ಸಾಗಿಸಿದ ಜನರು

ಇಡೀ ರಾಜ್ಯ ಸರ್ವಾಂಗೀಣ ಅಭಿವೃದ್ಧಿ ಆಗದೆ ಇದ್ದಲ್ಲಿ ನಾವು ಅಭಿವೃದ್ಧಿಯಾಗಿದ್ದೇವೆ ಎಂದು ತಿಳಿದುಕೊಳ್ಳಲು ಸಾಧ್ಯವಿಲ್ಲ. ಪ್ರತಿ ಮನುಷ್ಯ ಇನ್ನೊಬ್ಬರ ಹಂಗಿನಲ್ಲಿ ಇರದೇ ಸ್ವಾವಲಂಬಿಯಾಗಿ ಬದುಕಬಲ್ಲೆ. ಸ್ವಾಭಿಮಾನಿಯಾಗಿ ಬಾಳಬಲ್ಲೆ ಎಂದಾದಾಗ ಸ್ವತಂತ್ರರು ಎಂದು ಹೇಳಿಕೊಳ್ಳಲು ಸಾಧ್ಯ. ಆಳುತ್ತಿರುವವರು ಆಳುತ್ತಲೇ ಇದ್ದಾರೆ. ಉಳುಮೆ ಮಾಡುವವರು ಉಳುಮೆ ಮಾಡುತ್ತಲೇ ಇದ್ದಾರೆ. ಈ ಸ್ಥಿತಿ ಮುಂದುವರಿಯಬಾರದು. ಪ್ರತಿಯೊಬ್ಬರೂ, ಪ್ರತಿಯೊಂದು ಕ್ಷೇತ್ರದಲ್ಲೂ ಪ್ರಗತಿಯಾಗಬೇಕು ಎಂದು ಅವರು ಅಭಿಪ್ರಾಯಪಟ್ಟರು.

ಮಾಧ್ಯಮದವರ ಮೇಲೆ ಗರಂ..!

ಖಾರ್‌ಲ್ಯಾಂಡ್ ಕಾಮಗಾರಿ ಭೂಮಿ ಪೂಜೆಗೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಮೂರು ಗಂಟೆ ತಂಡವಾಗಿ ಆಗಮಿಸಿದ್ದಲ್ಲದೆ, ಪ್ರಶ್ನಿಸಿದ ಮಾಧ್ಯಮಗಳ ಮೇಲೆ ಹರಿಹಾಯ್ದರು. ಕಣಸಗಿರಿಯಲ್ಲಿ ಬೆಳಿಗ್ಗೆ 8.50ಕ್ಕೆ ಖಾರಲ್ಯಾಂಡ್ ಕಾಮಗಾರಿ ಶಂಕುಸ್ಥಾಪನೆ ಕಾರ್ಯಕ್ರಮ ನಿಗದಿಯಾಗಿತ್ತು. ಮಾಧುಸ್ವಾಮಿಯವರು ಬೆಂಗಳೂರಿನಿಂದ ಗೋವಾ ಮೂಲಕ ಕಾರವಾರದ ಕಾರ್ಯಕ್ರಮಕ್ಕೆ ಆಗಮಿಸಿ ಶಂಕುಸ್ಥಾಪನೆ ನೆರವೇರಿಸಬೇಕಿತ್ತು. ಆದರೆ ಸಚಿವರು ಮೂರು ಗಂಟೆ ತಡವಾಗಿ ಆಗಮಿಸಿದ್ದಾರೆ. ಇದರಿಂದಾಗಿ ಸಚಿವ ಮಾಧುಸ್ವಾಮಿ ಇಂದು ಮತ್ತೊಮ್ಮೆ ಚರ್ಚೆಗೆ ಕಾರಣವಾಗಿದ್ದಾರೆ. ಅಂತು ಇಂತೂ ಸಚಿವರು ಆಗಮಿಸಿದ್ದಾರೆ ಮಾದ್ಯಮದವರು ವಿಳಂಬವಾಗಿದ್ದಕ್ಕೆ ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಸೌಜನ್ಯ ಮರೆತು ವರ್ತಿಸಿದ್ದಾರೆ ಎನ್ನಲಾಗಿದೆ.

RELATED ARTICLES  ಕುಮಟಾ ಸಾರಿಗೆ ಘಟಕಕ್ಕೆ ಇನ್ನೆರಡು ಬಸ್ ಸೇರ್ಪಡೆ

ವಿಮಾನ ತಡವಾಗಿದ್ದಕ್ಕೆ ನನ್ನನ್ನೆಕೆ ಪ್ರಶ್ನಿಸುತ್ತಿರಿ ಎಂದಿದ್ದಾರೆ ಮೂರು ತಾಸು ತಡವಾಗಿ ಬಂದು ಸಾರ್ವಜನಿಕರನ್ನ ಸತಾಯಿಸಿದ ಸಚಿವರು ಮಾದ್ಯಮದವರ ಹತ್ತಿರ ನಮಗೆ ಜನಗಳು ಮುಖ್ಯ ನೀವಲ್ಲ ಎಂದಿದ್ದಾರೆ ಇದು ಸ್ಥಳದಲ್ಲಿಯೇ ಇದ್ದ ಶಾಸಕಿ ರೂಪಾಲಿ ನಾಯ್ಕ ಮತ್ತು ಪರಿಷತ್ ಸದಸ್ಯ ಗಣಪತಿ ಉಳ್ವೇಕರ್ ಅವರಿಗೆ ಅನಿವಾರ್ಯವಾಗಿ ಮೌನಕ್ಕೆ ಶರಣಾಗುವಂತೆ ಮಾಡಿದೆ.

ಇದನ್ನೂ ಓದಿ.

ಕುಮಟಾದಲ್ಲಿಯೂ ಅದೇ ಪರೀಸ್ಥಿತಿ ಆಗಿದ್ದು 12/30 ಕ್ಕೆ ಬೆರಬೇಕಿದ್ದ ಸಚೀವರು ಎರಡು ಗಂಟೆಗೂ ಬರದೆ ಇದ್ದಾಗ ಕುಮಟಾದ ಬೇರೆ ಬೇರೆ ಭಾಗಗಳಿಂದ ಶಾಸಕರ ಆಗ್ರಹದ ಮೇಲೆ ಬಂದಿದ್ದ ಜನರು ಕಾದು ಕಾದು ಸುಸ್ತಾಗಿದ್ದಾರೆ.
ಚುನಾವಣಾ ಪೂರ್ವ ತಯಾರಿ ಎಂಬಂತೆ ಸಚಿವ ಮಾಧುಸ್ವಾಮಿ ಕಾರ್ಯಕ್ರಮಕ್ಕೆ ಒಂದು ವಾರದಿಂದ ಅದ್ದೂರಿ ತಯಾರಿ ನಡೆಸಲಾಗಿತ್ತು, ಕ್ಷೇತ್ರದ ಬೇರೆ ಬೇರೆ ಕಡೆಗಳಿಂದ ವಾಹನಗಳಲ್ಲಿ ಜನರನ್ನ ಕರೆಸಲಾಗಿತ್ತು ಎಲ್ಲಾ ಕಡೆ ಕಟೌಟ್, ಬೆನರ್ ಗಳು, ಜಾಹಿರಾತುಗಳನ್ನ ನೀಡಿ ಶಕ್ತಿ ಪ್ರದರ್ಶನಕ್ಕೆ ಹೊರಟ ಬಿ.ಜೆ.ಪಿ ಶ್ರಮಕ್ಕೆ ಸಚಿವರ ವಿಳಂಬ ತಣ್ಣೀರೆರಚಿದಂತಾಗಿದೆ ಎನ್ನುವ ಮಾತುಗಳೂ ಕೇಳಿಬಂದಿದೆ.