ಸಿಗಂದೂರು: ಉಪೇಂದ್ರ ಪೈ ಸೇವಾ ಟ್ರಸ್ಟ್ ಅಧ್ಯಕ್ಷ ಉಪೇಂದ್ರ ಪೈ ಅವರು ತಮ್ಮ ಸ್ನೇಹಿತರೊಂದಿಗೆ ಶ್ರೀ ಕ್ಷೇತ್ರ ಸಿಗಂದೂರ ಚೌಡೇಶ್ವರಿ ದೇವಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಮಂಡಳಿಯ ಧರ್ಮಾಧಿಕಾರಿ ರಾಮಪ್ಪ ಅವರು ಉಪೇಂದ್ರ ಪೈ ಹಾಗೂ ಅವರ ಸ್ನೇಹಿತರನ್ನು ಶ್ರೀ ದೇವಿಯ ಭಾವಚಿತ್ರವನ್ನು ನೀಡಿ ಶಾಲ ಹೊದಿಸಿ ಸನ್ಮಾನಿಸಿ ಗೌರವಿಸಿ, ಪೈ ಹಾಗೂ ಅವರ ಸ್ನೇಹಿತರಿಗೆ ಸಿಗಂದೂರ ತಾಯಿ ಒಳ್ಳೆಯದನ್ನಾಗಿ ಮಾಡಲಿ ಎಂದು ಶ್ರೀ ರಾಮಪ್ಪ ಅವರು ಆಶೀರ್ವಾದಿಸಿದರು. ಈ ಸಂದರ್ಭದಲ್ಲಿ ಸುಭಾಷ ನಾಯ್ಕ ಕಾನಸೂರು, ಆದರ್ಶ ನಾಯ್ಕ, ಶ್ರವಣ ಕುಮಾರ್ ಹೊಸೂರು, ಗಜೇಂದ್ರ ದಿವೇಕರ, ಹೇಮ್ಮನ ಬೈಲ ದಿವಾಕರ್ ನಾಯ್ಕ ಉಪಸ್ಥಿತರಿದ್ದರು.
ಈ ಸುದ್ದಿಗಳನ್ನೂ ಓದಿ.