ಕಾರವಾರ : ಮನೆಯಲ್ಲಿ ವಾಸವಾಗಿದ್ದ ವೃದ್ದೆಯೊಬ್ಬಳು ಅನ್ನ ನೀರು ಇಲ್ಲದೆ ಒದ್ದಾಡುತ್ತಿದ್ದರು ಯಾರೂ ಕೂಡ ಸಹಾಯಕ್ಕೆ ಬಾರದೆ ಮಾನವೀಯತೆ ಮರೆತಿದ್ದ ಘಟನೆ ವರದಿಯಾಗಿದೆ. ಈಕೆಯಲ್ಲಿ ವಾಸವಾಗಿದ್ದವಳು ಜೀವಂತವಾಗಿದ್ದಾಳೆ ಎಂಬ ವಿಷಯವು ಯಾರಿಗೂ ತಿಳಿದಿರಲಿಲ್ಲವೇ ಅಥವಾ ಯಾರು ಸಹ ಏಕೆ ಸ್ಪಂದಿಸಲಿಲ್ಲವೇ ಎನ್ನುವುದು ಪ್ರಶ್ನೆಯಾಗಿ ಉಳಿದುಕೊಂಡಿದೆ.

ನಗರದ ಕೋಡಿಬಾಗದ ಮನೆಯೊಂದರಲ್ಲಿ ವರ್ಷಗಳಿಂದ ಅನ್ನ- ಆಹಾರವಿಲ್ಲದೇ, ಆರೈಕೆ ಕಾಣದೇ ಕತ್ತಲ ಕೋಣೆಯಲ್ಲಿ ನರಳಾಡುತ್ತಿದ್ದ ವೃದ್ಧೆಯೊಬ್ಬರನ್ನ ನ್ಯಾಯಾಧೀಶರೊಬ್ಬರು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆದಿದ್ದಾರೆ. ಕಮಲಾ ಎಂಬ ವೃದ್ಧೆ ವಾಸವಾಗಿದ್ದು, ಆಕೆ ವಾಸವಿದ್ದ ಸ್ಥಳದಲ್ಲೇ ಮಲ- ಮೂತ್ರ ವಿಸರ್ಜನೆ ಮಾಡಿಕೊಂಡು ಅದರಲ್ಲೇ ನರಕಯಾತನೆ ಅನುಭವಿಸುತ್ತಿದ್ದರು.

RELATED ARTICLES  ಟೈಲ್ಸ್ ಲಾರಿ ಪಲ್ಟಿ

ಬದುಕಿದ್ದರೂ ಕೂಡ ಯಾರೊಬ್ಬರೂ ಈ ವೃದ್ಧೆಯ
ಆರೈಕೆಗೆ ಮುಂದಾಗಿರಲಿಲ್ಲ. ಈ ಬಗ್ಗೆ ಮಾಹಿತಿ ಪಡೆದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಹಿರಿಯ ಸಿವಿಲ್ ನಾಯಾಧೀಶರಾದ ರೇಣುಕಾ ರಾಯ್ಕರ್, ಸ್ಥಳಕ್ಕೆ ತೆರಳಿ ವೃದ್ಧೆಯ ಪರಿಸ್ಥಿತಿಯನ್ನ ಕಣ್ಣಾರೆ ಕಂಡು ಮರುಕಪಟ್ಟಿದ್ದಾರೆ.

ತಕ್ಷಣ 108 ಆಂಬ್ಯುಲೆನ್ಸ್ ಮೂಲಕ ವೃದ್ಧೆಯನ್ನ ಜಿಲ್ಲಾ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ. ವೃದ್ಧ ಮಹಿಳೆಯ ಸಂಬಂಧಿಕರನ್ನ ಆಸ್ಪತ್ರೆಗೆ ಕರೆಯಿಸಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಇನ್ನು ವೃದ್ಧೆಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದ್ದು, ನಗರಸಭೆಯ ಮೂಲಕ ವೃದ್ಧೆಯ ಮನೆ ದುರಸ್ತಿ ಮಾಡಿಸಿಕೊಡಲು ಕಾನೂನು ಸೇವಾ ಪ್ರಾಧಿಕಾರ ಮುಂದಾಗಿದೆ. ಅಲ್ಲದೇ ವೃದ್ಧೆಗೆ ಅವಶ್ಯ ನೆರವು ನೀಡಲು ಸಿದ್ಧವಿರುವುದಾಗಿ ನ್ಯಾಯಾಧೀಶರಾದ ರೇಣುಕಾ ತಿಳಿಸಿದ್ದಾರೆ.

RELATED ARTICLES  ರೈಲಿನಿಂದ ಬಿದ್ದು ಕಬ್ಬಿಣ ಸಲಾಕೆಗೆ ನೇತಾಡುತ್ತಿದ್ದ

ಇದನ್ನೂ ಓದಿ