ಕುಮಟಾ: ಕೆನರಾ ಎಕ್ಸೆಲೆನ್ಸ್‌ ಪಿಯು ಕಾಲೇಜ್‌ ಗೋರೆ ಕುಮಟಾ, ಜಿಲ್ಲಾ ಪಂಚಾಯತ ಉತ್ತರ ಕನ್ನಡ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಹಾಗೂ ಸೆಲ್ಕೋ ಸೋಲಾರ್‌ ಫೌಂಡೇಶನ್‌ ಬೆಂಗಳೂರು ಇವರ ಸಹಯೋಗದಲ್ಲಿ ಕುಮಟಾದ ಗೋರೆಯಲ್ಲಿ ನಡೆದ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನ ಸ್ಪರ್ಧೆಯಲ್ಲಿ ಇಲ್ಲಿನ ಕೊಂಕಣ ಎಜ್ಯಕೇಶನ್‌ ಟ್ರಸ್ಟ್‌ನ ಸಿವಿಎಸ್‌ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳಾದ ಕೃತಿಕಾ ಗಾಂವಕರ ಮತ್ತು ರಚನ್‌ ನಾಯ್ಕ ಇವರ ತಂಡ ರಸಾಯನ ಶಾಸ್ತ್ರ ಉಪವಿಭಾಗದಲ್ಲಿ ಪ್ರದರ್ಶಿಸಿದ ಹೀಟ್‌ ರಿಕವರಿ ಸಿಸ್ಟಂ ವಿಜ್ಞಾನ ಮಾದರಿಗೆ ಪ್ರಥಮ ಸ್ಥಾನ ಲಭಿಸಿದ್ದು, ಪ್ರಶಸ್ತಿ ಪತ್ರದ ಜೊತೆ ಹತ್ತು ಸಾವಿರ ನಗದು ಬಹುಮಾನ ದೊರೆತಿದೆ.

RELATED ARTICLES  ಡಿ.22‌ ರಿಂದ‌ ಡಿ.24ರವರೆಗೆ ದತ್ತಿನಿಧಿ ಹಾಗೂ ಪ್ರತಿಭಾ ಪುರಸ್ಕಾರ, ಸಂಗೀತ ಸಿಂಚನ ಸಮಾರಂಭ

ಅಡುಗೆ ಮನೆಗಳಲ್ಲಿ ಬಳಸಲಾಗುವ ಎಲ್‌ಪಿಜಿ ಒಲೆಗಳಿಂದ ವ್ಯರ್ಥವಾಗುವ ಶಾಖವನ್ನು ಮರುಬಳಕೆ ಮಾಡಿ, ಅದರಿಂದ ನೀರನ್ನು ಕಾಯಿಸುವ ವಿನೂತನ ಪ್ರಯೋಗದಡಿ ಅಭಿವೃದ್ಧಿಪಡಿಸಲಾದ ಈ ಮಾದರಿ ಎಲ್ಲರ ಪ್ರಶಂಸೆಗಳಿಸಿ ಪ್ರದರ್ಶನದಲ್ಲಿ ಟಾಪ್‌-1 ಆಗಿ ಹೊರಹೊಮ್ಮಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿ, ಶೈಕ್ಷಣಿಕ ಸಲಹೆಗಾರರು, ಮುಖ್ಯಾಧ್ಯಾಪಕರು, ಶಿಕ್ಷಕ ವೃಂದ ಅಭಿನಂದಿಸಿದ್ದಾರೆ.

RELATED ARTICLES  ಕುಮಟಾಕ್ಕೆ ಆಗಮಿಸಿದ ಗೋವಾ ಸಿ.ಎಂ ಪರಿಕ್ಕರ್ .

ಈ ಸುದ್ದಿಗಳನ್ನೂ ಓದಿ.