ಆನೇಕಲ್ : ತಾಲೂಕಿನಾದ್ಯಂತ ಸಿಕ್ಕಾಪಟ್ಟೆ ಮಳೆಯಾಗುತ್ತಿದ್ದು, ಭರ್ಜರಿ ಮಳೆಯ ಕಾರಣದಿಂದ ಜಿಗಣಿಯ ನವೋದಯ ಶಾಲೆಗೆ ಮಳೆ ನೀರು ನುಗ್ಗಿ ಶಾಲೆ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಶಾಲೆಯ ಅವರಣದಲ್ಲಿ ಮೂರು ಅಡಿಗೂ ಹೆಚ್ಚು ನೀರು ನಿಂತಿದೆ. ಶಾಲೆಯ ಪಕ್ಕದಲ್ಲಿ ಹಾದು ಹೋಗಿದ್ದ ರಾಜಕಾಲುವೆಯನ್ನು ಗ್ರಾನೈಟ್ ಕಾರ್ಖಾನೆಯವರು ಒತ್ತುವರಿ ಮಾಡಿಕೊಂಡಿರುವುದರಿಂದ ನೀರು ಶಾಲೆಯ ಅವರಣಕ್ಕೆ ನುಗ್ಗಿ ಜಲಾವೃತವಾಗಿದ್ದು, ಅಕ್ಕಪಕ್ಕದ ಪ್ರದೇಶಗಳ ರಸ್ತೆಯಲ್ಲಿ ನೀರು ತುಂಬಿಕೊಂಡು ಸಾರ್ವಜನಿಕರು ಪರದಾಡುವಂತಾಗಿದೆ.
ಕೂಡಲೇ ಒತ್ತುವರಿಯಾಗಿರುವ ರಾಜಕಾಲುವೆ ಯನ್ನು ತೆರವುಗೊಳಿಸಬೇಕೆಂದು ಒತ್ತಾಯಿಸಿ ಸ್ಥಳಿಯರು ಜಿಗಣಿಯ ಪ್ರಮುಖ ರಸ್ತೆ ತಡೆದು, ಸ್ಥಳಕ್ಕೆ ತಾಲ್ಲೂಕಿನ ತಹಸೀಲ್ದಾರ್ ಬರುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದರು. ಇದರಿಂದಾಗಿ ಕೆಲಕಾಲ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು.