ಅಂಕೋಲಾ : ಉತ್ತರಕನ್ನಡದಲ್ಲಿ ಮತ್ತೆ ನಾಪತ್ತೆ ಪ್ರಕರಣ ವರದಿಯಾಗಿದ್ದು, ನವಂಬರ್ 12ರಂದು ಬೆಳಿಗ್ಗೆ ತಾನು ಕೆಲಸ ಮಾಡುತ್ತಿದ್ದ ಬೆಂಗಳೂರಿನ ಕಂಪನಿಯ ಆಫೀಸ್ ಕೆಲಸಕ್ಕೆ ಹೋಗಿ ಬರುವುದಾಗಿ ತಿಳಿಸಿ, ತಾನು ವಾಸಿಸುತ್ತಿದ್ದ ಸೋದರ ಮಾವನ ಮನೆಯಿಂದ ಹೊರಗೆ ಹೋಗಿದ್ದ ಯುವಕ ಮರಳಿ ಬರದೇ ಕಾಣೆಯಾಗಿರುವ ಬಗ್ಗೆ ವರದಿಯಾಗಿದೆ.ಈತ ಅಂಕೋಲಾದ ಮಾವನ ಮನೆಯಿಂದ ಹೋದವನು ಇದುವರೆಗೆ ಸಂಪರ್ಕಕ್ಕೆ ಸಿಗದೇ ಕಾಣೆಯಾಗಿರುವುದಾಗಿ ಯುವಕನ ಸೋದರ ಮಾವ ಅಂಕೋಲಾ ಪೊಲೀಸ್ ಠಾಣೆ ಯಲ್ಲಿ ದೂರು ನೀಡಿದ್ದಾರೆ.

RELATED ARTICLES  ಕೊಂಕಣದಲ್ಲಿ ಪ್ರತಿಭಾ ಪುರಸ್ಕಾರ ಮತ್ತು ಶಿಕ್ಷಕರ ಅಭಿನಂದನಾ ಕಾರ್ಯಕ್ರಮ.

ಹಾಸನ ಜಿಲ್ಲೆಯ ಬೇಲೂರು ನಿವಾಸಿ ಹಾಲಿ ಅಂಕೋಲಾ ಪಟ್ಟಣದ ಕಾಕರಮಠದಲ್ಲಿ ವಾಸವಾಗಿದ್ದ ಪುನೀತ್ ವಿಷ್ಣು ಭಟ್ಟ ಕಾಣೆಯಾದ ಯುವಕನಾಗಿದ್ದಾನೆ. ಕಾಣೆಯಾದ ಈ ವ್ಯಕ್ತಿ ಎಲ್ಲಿಯಾದರೂ ಕಂಡು ಬಂದಲ್ಲಿ ಅಥವಾ ಆತನ ಬಗ್ಗೆ ಇತರೆ ಏನಾದರೂ ಮಾಹಿತಿಗಳಿದ್ದಲ್ಲಿ ಸಾರ್ವಜನಿಕರು ಅಂಕೋಲಾ ಪೋಲೀಸ್ ಠಾಣೆ ಇಲ್ಲವೇ ತಮ್ಮ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸುವಂತೆ ಪೊಲೀಸ್ ಇಲಾಖೆ ವತಿಯಿಂದ ಕೋರಲಾಗಿದೆ.

RELATED ARTICLES  ಸಂಗೀತವು ಮನಸ್ಸಿನಲ್ಲಿ ಶಾಂತತೆಯನ್ನು, ಸೌಹಾರ್ದತೆಯನ್ನು, ಸಂಸ್ಕøತಿಯನ್ನೂ ಸಾರುತ್ತವೆ.- ನಾಗರಾಜ ನಾಯಕ ತೊರ್ಕೆ