ಅಂಕೋಲಾ : ಇದೀಗ ಎಲ್ಲೆಡೆ ಕಾಂತಾರ ಚಲನಚಿತ್ರದ್ದೇ ಹವಾ..! ಪ್ರತಿಯೊಂದರಲ್ಲಿಯೂ ಹೊಸತನ ತುಂಬಿಕೊಂಡು ಬಂದ ಚಲನಚಿತ್ರದ ಪ್ರಭಾವ ಇದೀಗ ಎಲ್ಲಡೆ ಬಿದ್ದಿದೆ. ನಾಮಧಾರಿ ದಹಿಂಕಾಲ ಉತ್ಸವದಲ್ಲಿ ಕಾಂತಾರಾ ಸ್ತಬ್ದ ಚಿತ್ರ ಗಮನ ಸೆಳೆದಿದೆ. ಇದನ್ನು ಕಂಡ ಚಿತ್ರ ನಿರ್ದೇಶಕ ರಿಷಬ್ ಶೆಟ್ಟಿ ಕೂಡ ಮೆಚ್ಚಿ ಟ್ವಿಟ್ ಮಾಡಿದ್ದಾರೆ.

ಅಂಕೋಲಾ ತಾಲೂಕಿನಲ್ಲಿ ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ನಾಮಧಾರಿ ದಹಿಂಕಾಲ ಉತ್ಸವ ನಡೆಯುತ್ತದೆ. ಈ ವೇಳೆ ನಡೆಯುವ ಮೆರವಣಿಗೆಯಲ್ಲಿ ವಿವಿಧ ಸ್ತಬ್ಧಚಿತ್ರಗಳನ್ನ ಪ್ರದರ್ಶಿಸಲಾಗುತ್ತದೆ. ಅದರಂತೆ ಈ ಬಾರಿ ಕಾಂತಾರ ಚಿತ್ರದ ಕೊನೆಯಲ್ಲಿ ರಿಷಬ್ ಶೆಟ್ಟಿ ದೈವ ಆವಾಹನೆಯಾದಂತೆ ನಟಿಸುವ ದೃಶ್ಯವನ್ನ ಸ್ತಬ್ಧಚಿತ್ರವನ್ನಾಗಿ ರೂಪಿಸಲಾಗಿದೆ.

ಥೇಟ್ ರಿಷಬ್ ಶೆಟ್ಟಿಯೇ ಬಂದು ನಿಂತಂತೆ ಈ ಸ್ತಬ್ಧ ಚಿತ್ರದಲ್ಲಿ ಭಾಸವಾಗುತ್ತಿದ್ದು, ಕಲಾವಿದ ದಿನೇಶ್ ಮೇತ್ರಿ ಈ ದೃಶ್ಯವನ್ನ ರೂಪಿಸಿದ್ದಾರೆ. ಪಂಜುರ್ಲಿ ದೈವವನ್ನೂ ಇಲ್ಲಿ ರೂಪಿಸಲಾಗಿದೆ. ಲಕ್ಷಾಂತರ ಜನರ ಮಧ್ಯೆ ಕಾಂತಾರ ಸ್ತಬ್ದ ಚಿತ್ರ ಮೆರವಣಿಗೆ ನಡೆದಿದ್ದು, ಸ್ತಬ್ಧಚಿತ್ರದ ಫೊಟೊ, ವಿಡಿಯೋ ಚಿತ್ರೀಕರಿಸಿಕೊಳ್ಳಲು ಜನ ಮುಗಿಬಿದ್ದಿದ್ದಾರೆ.

RELATED ARTICLES  ಎರಡು ದಶಕದ ಹಿಂದೆ ಶೇಖರಿಸಲ್ಪಟ್ಟ ಭ್ರೂಣದಿಂದ ಅಮೆರಿಕಾ ದಂಪತಿಗೆ ಮಗು ಜನನ!
FB IMG 1668877451739

ಸಂಭ್ರಮದ ನಾಮಧಾರಿ ಸಮಾಜದ ದಹಿಂಕಾಲ
ಉತ್ಸವ ಇಲ್ಲಿಯ ನಾಮಧಾರಿ ಸಮಾಜದ ದಹಿಂಕಾಲ ಉತ್ಸವ ಸಂಭ್ರಮ ಸಡಗರದಿಂದ ನಡೆಯಿತು. ಈ ಪ್ರಯುಕ್ತ ಶ್ರೀ ಶಾಂತಾದುರ್ಗಾ ಶ್ರೀ ವೆಂಕಟರಮಣ ದೇವರ ದೀಪಾಲಂಕೃತ ರಥೋತ್ಸವವು ನಗರದ ಪ್ರಮುಖ ಬೀದಿಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ರಥ ಸಾಗುವ ಮುಖ್ಯ ಬೀದಿಗಳಲ್ಲಿ ತಳಿರು ತೋರಣ ಆಕರ್ಷಕ ಮಹಾದ್ವಾರ ಮತ್ತು ವಿದ್ಯುತ್ ದೀಪಾಲಂಕಾರ ನೆರೆದ ಸಾವಿರಾರು ಭಕ್ತರ ಮನಸೂರೆಗೊಂಡಿತು.

ಮೆರವಣಿಗೆಯಲ್ಲಿ ಹಲವಾರು ರೂಪಕ ಹಾಗೂ ಚಂಡೆ ವಾದನ ಸೇರಿದಂತೆ ವಿವಿಧ ವಾದ್ಯ ತಂಡಗಳು ಭಾಗವಹಿಸಿದ್ದವು. ರೂಪಕಗಳಲ್ಲಿ ಮಹಿಳೆಯರ ನವಿಲು ನೃತ್ಯ ದೃಶ್ಯ ರೂಪಕ ಗಮನಸೆಳೆಯಿತು. ಮಹಿಳಾ ಮತ್ತು ಪುರುಷರ ತಂಡದ ಚಂಡೆವಾದನ, ಬ್ರಹ್ಮಶ್ರೀ ನಾರಾಯಣ ಗುರುಗಳ ಸ್ಥಬ್ದ ಚಿತ್ರ, ತಿರುಪತಿ ವೆಂಕಟರಮಣ ದೇವರ ಸ್ತಬ್ಧಚಿತ್ರಗಳು, ಹುಲಿ ಮತ್ತು ಕರಡಿ ರೂಪಕ, ಬೇಡರ ಕಣ್ಣಪ್ಪ ಹೀಗೆ ಅನೇಕ ರೂಪಕಗಳು ಹಾಲಕ್ಕಿಗುಮಟೆ ವಾದನ, ಮರಕಾಲು ಕುಣಿತ ಮೆರವಣಿಗೆ ಯುದ್ದಕ್ಕೂಮೆರಗು ನೀಡಿದವು.

RELATED ARTICLES  14 ಅಡಿ ಕಾಳಿಂಗವನ್ನು ಉರಗ ಪ್ರೇಮಿ ಹಿಡಿದ ರೋಚಕ ದೃಶ್ಯಾವಳಿ

ಈ ಸಂದರ್ಭದಲ್ಲಿ ಶಾಶಕಿ ರೂಪಾಲಿ ನಾಯ್ಕ ಮತ್ತು ವಿಧಾನ ಪರಿಷತ್ ಸದಸ್ಯ ಗಣಪತಿ ಉಳೇಕರರನ್ನು ಸನ್ಮಾನಿಸಿ ಗೌರವಿಸಲಾಯಿತು.

ಸುದ್ದಿಗಳನ್ನೂ ಓದಿ.