ಮಂಗಳೂರು: ನಗರದ ಕಂಕನಾಡಿ ಠಾಣಾ ವ್ಯಾಪ್ತಿಯ ನಾಗುರಿಯಲ್ಲಿ ಚಲಿಸುತ್ತಿದ್ದ ಆಟೋರಿಕ್ಷಾದಲ್ಲಿ ಸ್ಪೋಟ ಸಂಭವಿಸಿ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಫೊಟಕ್ಕೆ ನಿಖರ ಕಾರಣ ತತ್ ಕ್ಷಣಕ್ಕೆ ತಿಳಿದುಬಂದಿಲ್ಲವಾಗಿತ್ತು, ಪ್ರಯಾಣಿಕ ಸಾಗಿಸುತ್ತಿದ್ದ ಪರಿಕರವೊಂದು ಸ್ಪೋಟಗೊಂಡು ಘಟನೆ ನಡೆದಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಗಾಯಗೊಂಡವರು ರಿಕ್ಷಾ ಚಾಲಕ ಮತ್ತು ಪ್ರಯಾಣಿಕ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಪೊಲೀಸ್ ಅಧಿಕಾರಿಗಳು, ವಿಧಿವಿಜ್ಞಾನ ತಂಡ ಆಗಮಿಸಿ ಪರಿಶೀಲನೆ ನಡೆಸುತ್ತಿದೆ.

ನಗರದ ಆಟೋದಲ್ಲಿ ಕುಕ್ಕರ್ ಸ್ಫೋಟ ಪ್ರಕರಣ ತನಿಖೆಯ ಚುರುಕುಗೊಂಡಿದ್ದು ಪರಿಶೀಲನೆ ವೇಳೆ ಸಂಶಯಾಸ್ಪದ ವಸ್ತುಗಳು ಪತ್ತೆಯಾಗಿದ್ದು ಹೈ ಅಲರ್ಟ್‌ ಘೋಷಣೆಯಾಗಿದೆ. ನಟ್, ಬೋಲ್ಟ್‌, ಬ್ಯಾಟರಿ, ಸರ್ಕಿಟ್ ರೀತಿಯ ವೈರಿಂಗ್ ಇರುವ ವಸ್ತುಗಳು ಪತ್ತೆಯಾಗಿದೆ. ಲಘು ತೀವ್ರತೆ ಇರುವ ಸ್ಪೋಟಕ ಬಳಸಿರುವ ಶಂಕೆ ವ್ಯಕ್ತವಾಗಿದೆ. ವಿಧಿವಿಜ್ಞಾನ ಪ್ರಯೋಗಾಲಯ, ಬಾಂಬ್ ನಿಷ್ಕ್ರೀಯ ದಳದಿಂದ ತೀವ್ರ ಪರಿಶೀಲನೆ ನಡೆಯುತ್ತಿದೆ.

RELATED ARTICLES  ಶ್ರೀ ಶ್ರೀ ರಾಘವೇಶ್ವರ ಭಾರತೀ ಶ್ರೀಗಳು ಕ್ಷೇಮವಾಗಿದ್ದು ಭಕ್ತರು ಆತಂಕ ಪಡಬೇಕಾಗಿಲ್ಲ : ವೈದ್ಯರ ಸ್ಪಷ್ಠನೆ

ಬಾಕ್ಸ್ ಮತ್ತು ಬ್ಯಾಗ್‌ನಿಂದಲೇ ನಿಗೂಢ ಸ್ಪೋಟ ಸಂಭವಿಸಿದೆ ಎಂಬ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಸ್ಪೋಟದ ತೀವ್ರತೆಗೆ ಪ್ರಯಾಣಿಕನ ದೇಹ ಶೇ.50ರಷ್ಟು ಸುಟ್ಟು ಹೋಗಿದ್ದು ಚಿಕಿತ್ಸೆ ಮುಂದುವರಿದಿದೆ. ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಿಂದ ಬರುತ್ತಿದ್ದ ಆಟೋವವನ್ನು ನಾಗುರಿ ಬಳಿ ಪ್ರಯಾಣಿಕ ಹತ್ತಿದ್ದ. ಆಟೋ ಒಂದು ಕಿ.ಮೀ ಕ್ರಮಿಸುವಷ್ಟರಲ್ಲಿ ನಿಗೂಢ ಸ್ಫೋಟಗೊಂಡಿದ್ದು ಹಲವು ಅನುಮಾನಕ್ಕೆ ಕಾರಣವಾಗಿದೆ.

RELATED ARTICLES  ಕುಮಟಾ, ಹೊನ್ನಾವರದಲ್ಲಿ ಕೊರೋನಾ ಲಸಿಕೆ ವಿತರಣಾ ಮಾಹಿತಿ

ಪರಿಶೀಲನೆ ವೇಳೆ ಒಬ್ಬನ ಐಡಿ ದಾಖಲೆ ಪತ್ತೆಯಾಗಿದೆ. ದಾಖಲೆಯಲ್ಲಿ ಮೈಸೂರಿನ ವಿಳಾದ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸ್‌ ತಂಡ ಮೈಸೂರಿಗೆ ತೆರಳಿದೆ. ಪ್ರಯಾಣಿಕನ ಬಳಿ 30 ಸಾವಿರ ರೂ. ನಗದು ಪತ್ತೆಯಾಗಿದೆ.

ಈ ಸುದ್ದಿಗಳನ್ನೂ ಓದಿ.