ಗೋಕರ್ಣ : ಹವ್ಯಕ ಸೇವಾ ಪ್ರತಿಷ್ಠಾನ. ಉತ್ತರಕನ್ನಡ ಇದರ ಆಶ್ರಯದಲ್ಲಿ ಡಿಸೆಂಬರ್ 11 ರಂದು ಬಡಗಣಿಯ ಗೋ ಗ್ರೀನ್ ಮೈದಾನದಲ್ಲಿ ನಡೆಯಲಿರುವ ಹವ್ಯಕ ಸಮಾವೇಶ ಕ್ಕೆ ಭರದ ಸಿದ್ಧತೆಗಳು ನಡೆಯುತ್ತಿದ್ದು ಅದರ ಅಂಗವಾಗಿ ಇಂದು ಗೋಕರ್ಣದ ಅಶೋಕೆಯಲ್ಲಿ ಪರಮಪೂಜ್ಯ ಶ್ರೀ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಹವ್ಯಕ ಸೇವಾ ಪ್ರತಿಷ್ಠಾನದ ಲಾಂಛನ ಹಾಗೂ ಹವ್ಯಕ ಸಮಾವೇಶದ ಆಮಂತ್ರಣ ಪತ್ರಿಕೆ ಲೋಕಾರ್ಪಣೆಗೊಳಿಸಿ ಆಶೀರ್ವದಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷರಾದ ಎಂ.ಜಿ.ಭಟ್ಟ. ಗೌರವಾಧ್ಯಕ್ಷರಾದ ರವೀಂದ್ರ ಭಟ್ಟ ಸೂರಿ, ಪ್ರಧಾನಕಾರ್ಯದರ್ಶಿ ಆರ್.ಎನ್.ಹೆಗಡೆ. ಕಾರ್ಯಕಾರಿ ಸಮಿತಿಯ ಸದಸ್ಯರಾದ ಕೆ.ಎನ್.ಹೆಗಡೆ. ಸುರೇಶ ಭಟ್ಟ. ಗಣೇಶ ಜೋಷಿ, ಎಲ್.ಆರ್.ಹೆಗಡೆ. ಗಿರೀಶ ಹೆಗಡೆ, ಸ್ವಾತಿ ಭಾಗ್ವತ, ಲಲಿತಾ ಹೆಗಡೆ, ಲಲಿತಾ ಹೆಬ್ಬಾರ, ಕುಮಟಾ ಮಂಡಲದ ಅಧ್ಯಕ್ಷರಾದ ಜಿ.ಎಸ್.ಹೆಗಡೆ, ಹೊನ್ನಾವರ ಮಂಡಲದ ಅಧ್ಯಕ್ಷ ಆರ್.ಜಿ.ಹೆಗಡೆ. ವಿ.ಡಿ.ಭಟ್ಟ ಮುಂತಾದವರು ಉಪಸ್ಥಿತರಿದ್ದರು.