ಕಾರವಾರ: ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯು 26 ಜನವರಿ 2023ರಂದು ನವದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವ ಸಮಾರಂಭವನ್ನು ವೀಕ್ಷಿಸಲು ಪರಿಶಿಷ್ಟ ಪಂಗಡದ ಇಬ್ಬರು ಪ್ರತಿನಿಧಿಗಳನ್ನು ಕಳುಹಿಸುವ ಸಲುವಾಗಿ ರಾಜ್ಯದಿಂದ ವಿವಿಧ ಕ್ಷೇತ್ರಗಳಾದ ಕಲೆ, ಸಂಸ್ಕೃತಿ, ಸಾಹಿತ್ಯ, ಕ್ರೀಡೆ, ವಿಜ್ಞಾನ ಹಾಗೂ ಮಿಲಿಟರಿ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವಂತಹ ಅರ್ಹ ಪರಿಶಿಷ್ಟ ಪಂಗಡದ ಒಬ್ಬ ಪುರುಷ ಮತ್ತು ಒಬ್ಬ ಮಹಿಳಾ ಅಭ್ಯರ್ಥಿಗಳ ಹೆಸರು (ನೊಂದಾಯಿತ ಯಾವುದೇ ಸಂಘ-ಸ0ಸ್ಥೆಗಳ ಪದಾಧಿಕಾರಿಗಳು ಮತ್ತು ಸರ್ಕಾರಿ ಸಂಸ್ಥೆಗಳ ಅಧಿಕಾರಿ/ ಸಿಬ್ಬಂದಿಗಳನ್ನು ಹಾಗೂ ಈಗಾಗಲೇ ಜಿಲ್ಲೆಯಿಂದ ಗಣರಾಜ್ಯೋತ್ಸವ ವೀಕ್ಷಣೆಗೆ ನಿಯೋಜಿಸಲಾಗಿರುವ ಪ್ರತಿನಿಧಿಗಳನ್ನು ಹೊರತುಪಡಿಸಿ) ಪೂರ್ಣ ವಿಳಾಸ, ವಿದ್ಯಾರ್ಹತೆ, ವಯಸ್ಸು, ಆಧಾರ್ ಕಾರ್ಡ್ ಪ್ರತಿಗಳೊಂದಿಗೆ ಪೂರ್ಣ ವಿವರಗಳನ್ನು ನ.19ರೊಳಗೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ತೆಲಿರಾಮಜಿ ರಸ್ತೆ, ಶಾರದಾ ಕಟ್ಟಡ ಮೊದಲನೇ ಮಹಡಿ, ಕಾರವಾರ ಇಲ್ಲಿಗೆ ಸಲ್ಲಿಸುವಂತೆ ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಕರ್ನಾಟಕದಾದ್ಯಂತ ನಿಷೇಧಾಜ್ಞೆ : ಸಾರ್ವಜನಿಕರಿಗೆ ಪೊಲೀಸ್ ಪ್ರಕಟಣೆ.