ಕಾರವಾರ: ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮವು 2022- 23ನೇ ಸಾಲಿನಲ್ಲಿ ಅನುಷ್ಠಾನಗೊಳಿಸುತ್ತಿರುವ ಸ್ವಯಂ ಉದ್ಯೋಗ ಸಾಲ, ಜೀವಜಲ ಯೋಜನೆ, ವಿದೇಶಿ ವ್ಯಾಸಂಗ, ಸ್ವ-ಸಹಾಯ ಸಂಘಗಳಿಗೆ ಸಾಲ ಸೌಲಭ್ಯ ನೀಡುವ ಬಗ್ಗೆ ಅರ್ಹ ಫಲಾನುಭವಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿದಾರರು ಪ್ರವರ್ಗ-3ಬಿ ಗೆ ಸೇರಿದವರಾಗಿರಬೇಕು. ವಯಸ್ಸು 18ರಿಂದ 55ರೊಳಗಿರಬೇಕು. ಕುಟುಂಬದ ವಾರ್ಷಿಕ ಆದಾಯ ರೂ.98,000ಕ್ಕಿಂತ ಕಡಿಮೆ ಇರಬೇಕು. ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಖಾತೆ ಹೊಂದಿರಬೇಕು. ಜೀವಜಲ ಯೋಜನೆಯಡಿಯಲ್ಲಿ ಸಣ್ಣ ಹಿಡುವಳಿದಾರರಾಗಿರಬೇಕು. ಅರ್ಹ ಫಲಾಪೇಕ್ಷೆಗಳು ಹತ್ತಿರದ ಸೇವಾ ಸಿಂಧು ಪೋರ್ಟಲ್ ಮೂಲಕ ಗ್ರಾಮ ಓನ್ ಸೆಂಟರ್ ಅಥವಾ ಕರ್ನಾಟಕ ಓನ್ ಸೆಂಟರ್ ಮೂಲಕ ಆನ್‌ಲೈನ್ ಅರ್ಜಿಯನ್ನು ನ.30ರೊಳಗೆ ಸಲ್ಲಿಸಬಹುದಾಗಿದೆ.

RELATED ARTICLES  ಕುಮಟಾ ತಹಶೀಲ್ದಾರ ಕಛೇರಿಯ ಹಲವು ಮಹತ್ವದ ವಿಭಾಗ ಸ್ಥಳಾಂತರ : ಪೂರ್ಣ ಮಾಹಿತಿ ತಿಳಿಯಿರಿ.


ಅರ್ಜಿ ಸಲ್ಲಿಸಿದ ನಂತರ ಅರ್ಜಿ ಪ್ರತಿಯನ್ನು ಪಡೆದು ಅರ್ಜಿಯ ಜೊತೆಗೆ ಜಾತಿ ಆದಾಯಪ್ರಮಾಣ ಪತ್ರ, ಆಧಾರಕಾರ್ಡ ಪ್ರತಿ, ರೇಷನ್ ಕಾರ್ಡ್ ಪ್ರತಿ, ಬ್ಯಾಂಕ್ ಪಾಸ್ ಪುಸ್ತಕ ಪ್ರತಿ, ಆರ್.ಟಿ.ಸಿ, ಹಿಡುವಳಿ ಇತ್ಯಾದಿ ದಾಖಲೆಗಳನ್ನು ಜಿಲ್ಲಾ ವ್ಯವಸ್ಥಾಪಕರು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ, ಹೈ ಚರ್ಚ್ ಹತ್ತಿರ ಕಾರವಾರ-581301 ಈ ವಿಳಾಸಕ್ಕೆ ಸಲ್ಲಿಸುವಂತೆ ತಿಳಿಸಲಾಗಿದೆ.

RELATED ARTICLES  ಬ್ರಾಡ್ ಕಾಸ್ಟ್ ಇಂಜಿನಿಯರಿಂಗ್ ಕನ್ಸಲ್ಟೆಂಟ್ಸ್ ಇಂಡಿಯಾ (ಬಿಇಸಿಐಎಲ್) ದಲ್ಲಿ ಡಾಟಾ ಎಂಟ್ರಿ ಆಪರೇಟರ್ ಹುದ್ದೆಗಳಿಗೆ ನೇಮಕಾತಿ.


ಹೆಚ್ಚಿನ ಮಾಹಿತಿಗಾಗಿ ವೆಬ್‌ಸೈಟ್: http://ತಿತಿತಿ.ಞvಟಜಛಿಟ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ವೀಕ್ಷಿಸಬಹುದು ಅಥವಾ ದೂರವಾಣಿ ಸಂಖ್ಯೆ 08382223229 ನ್ನು ಸಂಪರ್ಕಿಸಿ ಎಂದು ಕರ್ನಾಟಕ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮ ಜಿಲ್ಲಾ ವ್ಯವಸ್ಥಾಪಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.